ETV Bharat / state

ಬೆಂಗಳೂರಲ್ಲಿ ಕಾರು ಚಾಲಕನಿಂದ ಸರಣಿ ಅಪಘಾತ : ಇಬ್ಬರು ಬೈಕ್​ ಸವಾರರು ಸಾವು - Banashankari Bengaluru

ಮದ್ಯದ ಅಮಲಿನಲ್ಲಿ ಕಾರು ಚಾಲಕ ಸರಣಿ ಅಪಘಾತ ನಡೆಸಿ ಇಬ್ಬರ ಸಾವಿಗೆ ಕಾರಣನಾಗಿದ್ದಾನೆ. ಬೆಂಗಳೂರಿನ ಬನಶಂಕರಿ ಬಳಿ ಘಟನೆ ನಡೆದಿದೆ.

Series Accident in Bengaluru
ಸರಣಿ ಅಪಘಾತ
author img

By

Published : Aug 8, 2021, 10:14 AM IST

Updated : Aug 8, 2021, 12:24 PM IST

ಬೆಂಗಳೂರು : ಕುಡಿದ ಅಮಲಿನಲ್ಲಿ ನಗರದಲ್ಲಿ ಕಾರು ಚಾಲಕನೋರ್ವ ಸರಣಿ ಅಪಘಾತ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನಗರದ ಬನಶಂಕರಿಯ ಸುಚಿತ್ರ ಥಿಯೇಟರ್ ಬಳಿ ಘಟನೆ ಸಂಭವಿಸಿದೆ. ಅತೀ ವೇಗವಾಗಿ ಬಂದ ಕಾರು ಚಾಲಕ ಮೊದಲಿಗೆ ಬೈಕ್​​ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿ ನಿಂತಿದ್ದ ಆಟೋಗೆ ಗುದ್ದಿದ್ದಾನೆ. ನಂತರ ಜೆರಾಕ್ಸ್ ಅಂಗಡಿಯೊಂದರ ಮುಂಭಾಗದ ಶಟರ್​​ಗೆ ಡಿಕ್ಕಿ ಹೊಡೆದಿದ್ದಾನೆ.

ರಸ್ತೆ ಅಪಘಾತ ಸಂಭವಿಸಿದ ಸ್ಥಳ

ಓದಿ : ಮೈಸೂರು ವಿವಿ ಪಿಹೆಚ್​ಡಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ: ಇಬ್ಬರು ಪ್ರಾಧ್ಯಾಪಕರಿಗೆ ನೋಟಿಸ್

ಮದ್ಯದ ಅಮಲಿನಲ್ಲಿದ್ದ ಚಾಲಕ ಅಪಘಾತವೆಸಗಿದ ಬಳಿಕವೂ ಕಾರಿನಲ್ಲೇ ಕುಳಿತಿದ್ದ. ಸ್ಥಳೀಯರು ಆತನನ್ನು ಹೊರಗಡೆ ಕರೆತಂದು ರಸ್ತೆ ಬದಿ ಕೂರಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬನಶಂಕರಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತವೆಸಗಿದ ಕಾರು ಚಾಲಕನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಬೈಕ್ ಸ್ಕಿಡ್ ಆಗಿ ಬಿದ್ದು ಅಪಘಾತ : ಮತ್ತೊಂದು ಪ್ರಕರಣದಲ್ಲಿ, ಶನಿವಾರ ತಡರಾತ್ರಿ ನಗರದ ರಾಜಾಜಿನಗರದ 6ನೇ ಬ್ಲಾಕ್​ನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಬಿದ್ದು, ಸವಾರ ಗಾಯಗೊಂಡ ಘಟನೆ ನಡೆದಿದೆ.

ಜಖಂಗೊಂಡಿರುವ ಬೈಕ್
ಜಖಂಗೊಂಡಿರುವ ಬೈಕ್

ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಾಗಡಿ ರಸ್ತೆ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Aug 8, 2021, 12:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.