ETV Bharat / state

ಬೆಂಗಳೂರು ಗಲಭೆ: ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳು ಮೊಕ್ಕಾಂ, ಹೈ ಅಲರ್ಟ್​​​​

author img

By

Published : Aug 12, 2020, 9:25 AM IST

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲಿ ಸುಮಾರು 1000ಕ್ಕೂ ಹೆಚ್ಚು ಪೊಲೀಸರು ಮೊಕ್ಕಾಂ ಹೂಡಿದ್ದರೆ, ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದ್ದು, ರಸ್ತೆಗೆ ಬಂದವರನ್ನು ವಾರ್ನಿಂಗ್ ಕೊಟ್ಟು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

police
police

ಬೆಂಗಳೂರು: ಡಿಜೆ ಹಳ್ಳಿ, ಕೆಜಿ‌ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪೊಲೀಸ್ ಠಾಣೆಗಳನ್ನು ಸಂಪೂರ್ಣ ಖಾಕಿ ಕೋಟೆಯಾನ್ನಾಗಿ ಮಾಡಿದ್ದು, ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿ ಮಾಡಲಾಗಿದೆ.

ರಸ್ತೆಗೆ ಬಂದವರನ್ನು ವಾರ್ನಿಂಗ್ ಕೊಟ್ಟು ವಾಪಸ್ ಕಳುಹಿಸಲಾಗುತ್ತಿದ್ದು, ಎರಡು ಪ್ರದೇಶದಲ್ಲಿ ಪರಿಸ್ಥಿತಿ ಹತೋಟಿಗೆ ತರುತ್ತಿದ್ದಾರೆ.‌ ಕೆಜಿ ಹಳ್ಳಿಗೆ ಹೋಗುವ ಪ್ರಮುಖ ದ್ವಾರದಲ್ಲೇ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಸುಮಾರು 1000ಕ್ಕೂ ಹೆಚ್ಚು ಜನ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರೆ, ಘಟನಾ ಸ್ಥಳದಲ್ಲಿ ಓಡಾಡುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸೌಮೇಂದ್ರ ಮುಖರ್ಜಿ, ಹೇಮಂತ್ ನಿಂಬಾಳ್ಕರ್ ಈ ಹಿಂದಿನ‌ ಡಿಸಿಪಿ ರಾಹುಲ್ ಶಾಪುರವಾಡ್, ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ, ಡಿಐಜಿ ಡಾ ಹರ್ಷ, ಡಿಸಿಪಿಗಳಾದ ಶರಣಪ್ಪ, ಅನುಚೇತ್, ಭೀಮಾಶಂಕರ ಗುಳೇದ್, ದೇವರಾಜ್, ಧರ್ಮೇಂದ್ರ ಕುಮಾರ್, ಮೀನಾ ಶಶಿಕುಮಾರ್, ರಮೇಶ್ ಬಾನೋತ್, ರೋಹಿಣಿ ಕಟೋಚ್, ರಾಹುಲ್ ಕುಮಾರ್, ರವಿಕುಮಾರ್ ಕೆಪಿ ಸೇರಿ ಒಟ್ಟು ಇಪ್ಪತ್ತು ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕರಣದ ಹಿಂದೆ ಯಾವ ಸಂಘಟನೆ ಹಾಗೂ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ಮಾಡಲಾಗ್ತಿದೆ. ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಹೇಮಂತ್ ‌ನಿಂಬಾಳ್ಕರ್, ಡಿಸಿಪಿಯಾಗಿದ್ದ ರಾಹುಲ್ ಯಾರಾದರೂ ಹಳೆ ಆರೋಪಿಗಳು‌ ಘಟನೆಯಲ್ಲಿ ಭಾಗಿಯಾಗಿದ್ದರಾ ಎಂಬುದರ ಬಗ್ಗೆ ತನಿಖೆ ಮಾಡಿ ಮಾಡಿ ಬಂಧಿಸುತ್ತಿದ್ದಾರೆ.

ಹಾಗೆ ನಗರದೆಲ್ಲೆಡೆ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಶಿವಾಜಿನಗರ, ಕಲಾಸಿಪಾಳ್ಯ, ಜೆಜೆನಗರ, ಪಾದರಾಯನಪುರ ಮುಂತಾದ ಕಡೆ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಎಲ್ಲ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.

ದೇಗುಲ, ಮಸೀದಿಗಳಿರುವ ಭಾಗದಲ್ಲಿ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಶಾಂತಿ ಕದಡಲು ಮುಂದಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚನೆ ನಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.