ETV Bharat / state

ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ಇನ್ನಿಲ್ಲ.. - kannada cinema actor shankar died

ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ಇಂದು ವಿಧಿವಶರಾಗಿದ್ದಾರೆ.

Senior comedian Shankar Rao passes away
ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನ
author img

By

Published : Oct 18, 2021, 12:08 PM IST

Updated : Oct 18, 2021, 3:42 PM IST

ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟ‌ ಹಾಗೂ ಪಾಪ ಪಾಂಡು ಸೀರಿಯಲ್ ಖ್ಯಾತಿಯ ಶಂಕರ್ ರಾವ್ ನಿಧನರಾಗಿದ್ದಾರೆ. ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್, ಇಂದು ಬೆಳಗಿನ‌ ಜಾವ 6.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

ಶಂಕರ್ ರಾವ್ ಅವರಿಗೆ 84 ವರ್ಷ ವಯಸ್ಸಾಗಿತ್ತು. ರಂಗಭೂಮಿ, ಕಿರುತೆರೆ ಹಾಗು ಬೆಳ್ಳಿ ತೆರೆ ಮೇಲೆ ತಮ್ಮದೇ ಛಾಪು ಮೂಡಿಸಿದ್ದ ಶಂಕರ್ ರಾವ್, ಬಿಸಿ ಬಿಸಿ, ಅಪ್ಪು, ಆಕಾಶ್ , ಧ್ರುವ ಸೇರಿದಂತೆ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಸಿನಿಮಾ ಪ್ರಿಯರಿಗೆ ಚಿರಪರಿಚಿತರಾದವರು.

ಅಷ್ಟೇ ಅಲ್ಲ ಸಿಲ್ಲಿ ಲಲ್ಲಿ ಹಾಗು ಪಾಪ ಪಾಂಡು, ನಿರ್ದೇಶಕ ಟಿ.ಎಸ್ ಸೀತಾರಾಮ ನಿರ್ದೇಶನದ ಮಾಯಾಮೃಗ ಸೀರಿಯಲ್​ಗಳಲ್ಲಿ ನಟಿಸಿ ಹೆಚ್ಚು ಪ್ರಖ್ಯಾತಿಯನ್ನ ಹೊಂದಿದ್ದರು. ನಟನೆ, ನಿರ್ದೇಶನ, ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದ ಶಂಕರ್ ರಾವ್ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕ ತಾರೆಯರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅದರಲ್ಲಿ ಹಿರಿಯ ನಿರ್ದೇಶಕ ಟಿ.ಎನ್ ಸೀತಾರಾಮು, ನಾಟಕಗಳಲ್ಲಿ ಆಧಾರಸ್ತಂಭದಂತೆ ಇದ್ದ ಗೆಳೆಯನನ್ನ ನಾನು ಕಳೆದು ಕೊಂಡಿದ್ದೀನಿ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಶಂಕರ್ ರಾವ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಿರ್ದೇಶಕ ವಿಜಯ ಪ್ರಸಾದ್ ಕೂಡ ಶಂಕರ್ ರಾವ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ ಬನಶಂಕರಿ ಚಿತಾಗಾರದಲ್ಲಿ ಶಂಕರ್​ ರಾವ್​ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.

Last Updated : Oct 18, 2021, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.