ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಯುವತಿ ಅಮೂಲ್ಯ ಸದ್ಯ ಪರಪ್ಪನ ಅಗ್ರಹಾರದಲ್ಲಿ ಪೊಲೀಸರ ವಶದಲ್ಲಿದ್ದಾಳೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಆದೆಶದಂತೆ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ಕೂಡ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಪಶ್ಚಿಮ ವಿಭಾಗ ಪೊಲೀಸರು ನಿರ್ಧರಿಸಿದ್ದಾರೆ.
ಅಮೂಲ್ಯ ಲಿಯೋನ್ ದೇಶದ್ರೋಹದ ಕೂಗು ಕೂಗಿದಾಗ ಕಾರ್ಯಕ್ರಮದಲ್ಲಿ ನೆರೆದಿದ್ದ ಸಂಸದ ಒವೈಸಿ ಹಾಗೂ ಆಯೋಜಕರು ವಿಚಲಿತರಾಗಿ ಮೈಕ್ ಕಸಿದುಕೊಂಡರು. ಆದ್ರೆ ಆಕೆಯನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು? ಆಕೆ ಕಾರ್ಯಕ್ರಮದಲ್ಲಿ ಮಾತಾನಾಡಲು ಅನುಮತಿ ನೀಡಿದ್ದು ಯಾರು? ಅನ್ನೋದರ ಬಗ್ಗೆ ಪ್ರತಿಯೊಂದು ಮಾಹಿತಿಯನ್ನ ಪೊಲೀಸರು ತನಿಖೆಯಲ್ಲಿ ಹೊರ ಹಾಕಲು ನಿರ್ಧರಿಸಿದ್ದಾರೆ.
ಇನ್ನು ಅಮುಲ್ಯ ಲಿಯೋನ್ ಶಾಂತಿ ಕದಡುವ ಕೆಲಸ ಮಾಡಿದ ಕಾರಣ ಇಂದು ನಗರದ ಬಹುತೇಕ ಕಡೆ ಪ್ರತಿಭಟನೆಗೆ ಹಿಂದೂ ಪರ ಸಂಘಟನೆಗಳು , ಕನ್ನಡ ಪರ ಸಂಘಟನೆಗಳು ಮೈಸೂರು ಬ್ಯಾಂಕ್,ಟೌನ್ ಸೇರಿದಂತೆ ಹಲೆವೆಡೆ ಪ್ರತಿಭಟನೆ ಮಾಡಲು ಕರೆ ಕೊಟ್ಟಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಆತಂಕದ ವಾತಾವರಣದ ಸೃಷ್ಟಿ ಮಾಡಿದ ಕಾರಣ ಸಿಲಿಕಾನ್ ಸಿಟಿಯ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.