ETV Bharat / state

ಇಂದು ದ್ವಿತೀಯ PUC ಫಲಿತಾಂಶ ಪ್ರಕಟ.. Result ತಿಳಿಯಲು ಹೀಗೆ ಮಾಡಿ - puc result website

ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದ್ದು, ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್​ಸೈಟ್ www.pue.kar.nic.in ನಲ್ಲಿ ಫಲಿತಾಂಶ ಲಭ್ಯವಿರಲಿದೆ.

second
ದ್ವಿತೀಯ ಪಿಯುಸಿ ಫಲಿತಾಂಶ
author img

By

Published : Jul 19, 2021, 1:34 PM IST

Updated : Jul 20, 2021, 2:25 PM IST

ಬೆಂಗಳೂರು: ಕೊರೊನಾ‌ ಕಾರಣಕ್ಕೆ ಇದೇ ಮೊದಲ ಬಾರಿಗೆ ಪರೀಕ್ಷೆ ಇಲ್ಲದೇ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನ ಪಾಸ್ ಮಾಡಲಾಗಿದೆ. ಎಸ್ಎಸ್ಎಲ್​​ಸಿ ಹಾಗೂ ಪ್ರಥಮ ಪಿಯುಸಿಯ ಅಂಕಗಳ ಆಧಾರದ ಮೇಲೆ ಫಲಿತಾಂಶವನ್ನ ನೀಡಲಾಗುತ್ತಿದೆ.

ಈ ಮೊದಲು ಗ್ರೇಡಿಂಗ್ ಪದ್ಧತಿಯಲ್ಲಿ ಫಲಿತಾಂಶ ನೀಡುವ ತೀರ್ಮಾನ‌ ಮಾಡಿದ್ದ ಇಲಾಖೆ ನಂತರ ಅಂಕಗಳ ಆಧಾರದ ಮೇಲೆ ಫಲಿತಾಂಶ ನೀಡಲು ಸಿದ್ಧವಾಗಿದೆ‌.‌ ಒಂದು ವೇಳೆ ಈ ಫಲಿತಾಂಶ ವಿದ್ಯಾರ್ಥಿಗಳಿಗೆ ತೃಪ್ತಿ ತಂದಿಲ್ಲವಾದರೆ ಮುಂದಿನ ದಿನಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂಬ ಮಾಹಿತಿ ಇದೆ.

ಇಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಪ್ರಕಟಗೊಳ್ಳಲಿದೆ‌. ಮಂಗಳವಾರ ಮಧ್ಯಾಹ್ನ 4-30ಕ್ಕೆ ಫಲಿತಾಂಶ ಹೊರಬೀಳಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ವೆಬ್ ಸೈಟ್ www.pue.kar.nic.in ನಲ್ಲಿ ಫಲಿತಾಂಶ ಲಭ್ಯವಿರಲಿದೆ.

ನೋಂದಣಿ ಸಂಖ್ಯೆ ಪಡೆಯುವುದು ಹೇಗೆ?

2020-21ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ವಿದ್ಯಾರ್ಥಿಗಳು(Freshers) ಮತ್ತು ಪುನರಾವರ್ತಿತ (Repeaters) ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸುವ ಸಲುವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ನೋಂದಣಿ ಸಂಖ್ಯೆಗಳನ್ನು ಇಲಖೆಯಿಂದ ಜುಲೈ 17ರಂದೇ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು https://dpue-exam.karnataka.gov.in/iipu2021 registration number/regnumber ಈ ಲಿಂಕ್‌ನ ಮೂಲಕ ಪಡೆಯಬಹುದಾಗಿದೆ.

ಈ ಲಿಂಕ್‌ನಲ್ಲಿ ವಿದ್ಯಾರ್ಥಿಯು ತಾನು ವ್ಯಾಸಂಗ ಮಾಡುತ್ತಿದ್ದ ಜಿಲ್ಲೆ, ಕಾಲೇಜನ್ನು ಆಯ್ಕೆ ಮಾಡಿಕೊಂಡಾಗ ವಿದ್ಯಾರ್ಥಿ ಹೆಸರು, ನೋಂದಣಿ ಸಂಖ್ಯೆ, ತಂದೆ ಹೆಸರು, ತಾಯಿಯ ಹೆಸರು, ವಿದ್ಯಾರ್ಥಿ ಸಂಖ್ಯೆ, ವಿವಿಧ ಈ ಮಾಹಿತಿಗಳು ವಿದ್ಯಾರ್ಥಿಗೆ ಲಭ್ಯವಾಗುತ್ತವೆ. ಈ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶವನ್ನು ಪ್ರಕಟಿಸಿದ ನಂತರ ವೀಕ್ಷಿಸಬಹುದಾಗಿದೆ.

Last Updated : Jul 20, 2021, 2:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.