ETV Bharat / state

ಚಿಕುನ್ ಗುನ್ಯಾ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ - Mangal Nursing Home in Yeshwanthpur

ಯಶವಂತಪುರದಲ್ಲಿ 2 ನೇ ಕೋವಿಡ್ ಪ್ರಕರಣ ದೃಢಪಟ್ಟಿದ್ದು, ಚಿಕುನ್​ ಗುನ್ಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ವೈರಸ್​ ಕಂಡುಬಂದಿದೆ.

ಚಿಕುನ್ ಗುನ್ಯಾ ಚಿಕಿತ್ಸೆಗೆ ಬಂದ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್

author img

By

Published : May 6, 2020, 8:22 PM IST

ಬೆಂಗಳೂರು: ಚಿಕುನ್​ ಗುನ್ಯಾ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢ ಪಟ್ಟಿದ್ದು, ಆಸ್ಪತ್ರೆಯನ್ನು ಸೀಲ್​ಡೌನ್​ ಮಾಡಲಾಗಿದೆ.

ಯಶವಂತಪುರದ ಮಂಗಲ್ಸ್ ನರ್ಸಿಂಗ್ ಹೋಮ್​ನಲ್ಲಿ ವ್ಯಕ್ತಿ ಚಿಕುನ್​ ಗುನ್ಯಾ ಚಿಕಿತ್ಸೆಗೆಂದು ಬಂದಿದ್ದರು. ಮೂರು ದಿನ ಅಡ್ಮಿಟ್ ಆಗಿ ಚಿಕಿತ್ಸೆ ಪಡೆದಿದ್ದರು. ನಿನ್ನೆ ಡಿಸ್ಚಾರ್ಜ್ ಕೂಡಾ ಆಗಿದ್ದರು. ಆದರೆ ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ವ್ಯಕ್ತಿಯ ವರದಿ ಪಾಸಿಟಿವ್ ಬಂದಿದೆ.

ಈ ಹಿನ್ನಲೆ ಆಸ್ಪತ್ರೆಯ ಎಲ್ಲರನ್ನೂ ಪ್ರಥಮ ಸಂಪರ್ಕಿತರೆಂದು ಗುರುತಿಸಿ ಹೋಟೆಲ್ ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯಿಂದ ಇತರೆ ರೋಗಿಗಳನ್ನೂ ಸ್ಥಳಾಂತರ ಮಾಡಲಾಗಿದೆ. ವ್ಯಕ್ತಿಯ ಟ್ರಾವೆಲ್​ ಹಿಸ್ಟರಿ ನೋಡಿದಾಗ ಬೆಂಗಾಲದಿಂದ ಬಂದಿರುವುದು ತಿಳಿದುಬಂದಿದೆ. ಯಶವಂತಪುರದಲ್ಲಿ ಎರಡನೇ ಕೊರೊನಾ ಪ್ರಕರಣ ಇದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.