ETV Bharat / state

ವಸಂತಪುರ ಅಪಾರ್ಟ್​​​ಮೆಂಟ್​ನಲ್ಲಿ ಸೀಲ್​​ಡೌನ್.. ಅಗತ್ಯ ವಸ್ತುಗಳ ಪೂರೈಕೆಗೆ ಸ್ವಯಂ ಸೇವಕರ ನೇಮಕ - ವಸಂತಪುರ ಅಪಾರ್ಟ್​​​ಮೆಂಟ್​ನಲ್ಲಿ ಮುಂದುವರಿದ ಸೀಲ್​​ಡೌನ್

ಅಪಾರ್ಟ್​ಮೆಂಟ್​ ಸುತ್ತಮುತ್ತ ಪ್ರದೇಶದಲ್ಲಿ ಯಾರಿಗಾದರೂ ರೋಗದ ಗುಣಲಕ್ಷಣ ಇದ್ದರೂ ರ್ಯಾಪಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದರೆ ಅಂತವರಿಗೆ ಆರ್​ಟಿಪಿಸಿಆರ್​​ಗೂ ವ್ಯವಸ್ಥೆ ಮಾಡಲಾಗಿದೆ. ಯಾರು ಬೇಕಾದರೂ ನಿವಾಸಿಗಳು ಆರೋಗ್ಯ ಸಹಾಯ ಪಡೆಯಬಹುದು. ಒಂದು ಕಾಮನ್‌ ನಂಬರ್​​ಗೆ ನಿವಾಸಿಗಳು ಕರೆ ಮಾಡಲಿದ್ದಾರೆ..

ವಸಂತಪುರ ಅಪಾರ್ಟ್​​​ಮೆಂಟ್​ನಲ್ಲಿ ಮುಂದುವರಿದ ಸೀಲ್​​ಡೌನ್
Seal Down continue in Vasanta Nagara Apartment at Bangalore
author img

By

Published : Dec 30, 2020, 11:17 AM IST

ಬೆಂಗಳೂರು : ಇಲ್ಲಿನ ವಸಂತಪುರದಲ್ಲಿನ ಸಿರಿ ಎಂಬ ಅಪಾರ್ಟ್​​​ಮೆಂಟ್​​ಗೆ ಬ್ರಿಟನ್​​ನಿಂದ ವಾಪಸಾಗಿದ್ದ ತಾಯಿ-ಮಗುವಿನಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆ ಅಪಾರ್ಟ್​ಮೆಂಟ್‌ನ ಸೀಲ್​​ಡೌನ್ ಮಾಡಲಾಗಿದೆ.

ವಸಂತಪುರ ಅಪಾರ್ಟ್​​​ಮೆಂಟ್​ನಲ್ಲಿ ಮುಂದುವರಿದ ಸೀಲ್​​ಡೌನ್

ಅಪಾರ್ಟ್​​​ಮೆಂಟ್​ನ ಎರಡು ಬದಿಯೂ ಬ್ಯಾರಿಕೇಡ್ ಅಳವಡಿಕೆ ಮಾಡಿ ರಾತ್ರಿ ಕಾವಲಿಗೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಸೋಂಕಿತರಿದ್ದ ಅಪಾರ್ಟ್​​​ಮೆಂಟ್​​ ಹೊರತುಪಡಿಸಿ ಬೇರೆಡೆ ಯಥಾಸ್ಥಿತಿ ಮುಂದುವರೆದಿದೆ.

ಅಪಾರ್ಟ್​ಮೆಂಟ್​ನಲ್ಲಿರುವವರಿಗೆ ಅಗತ್ಯ ವಸ್ತು ಪೂರೈಕೆ ಮಾಡಲು ಓರ್ವ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಇವರು ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಪೊರೈಕೆ ಮಾಡಲಿದ್ದಾರೆ.

ಓದಿ: ಮತ ಎಣಿಕೆ ಬಹಿಷ್ಕರಿಸಿದ ಶಿರಗುಪ್ಪಿ ಹಾಗೂ ಹಳ್ಯಾಳ ಗ್ರಾಪಂ ಅಭ್ಯರ್ಥಿಗಳು

ರ್ಯಾಪಿಡ್ ಟೆಸ್ಟ್ : ಇದೇ ರಸ್ತೆಯಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಕೋವಿಡ್ ರ್ಯಾಪಿಡ್ ಟೆಸ್ಟ್ ನಡೆಸಲು ಕ್ಯಾಂಪ್ ಆರಂಭಿಸಲಾಗಿದ್ದು, ಆಶಾ ಕಾರ್ಯಕರ್ತೆಯರನ್ನು ಹೆಲ್ತ್ ಎರ್ಮಜೆನ್ಸಿಗೆ ನಿಯೋಜಿಸಲಾಗಿದೆ. 17 ತಿಂಗಳು ಮಗುವಿನಿಂದ 70 ವರ್ಷದವರು ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದು, ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಾಗ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಅಪಾರ್ಟ್​ಮೆಂಟ್​ ಸುತ್ತಮುತ್ತ ಪ್ರದೇಶದಲ್ಲಿ ಯಾರಿಗಾದರೂ ರೋಗದ ಗುಣಲಕ್ಷಣ ಇದ್ದರೂ ರ್ಯಾಪಿಡ್ ಟೆಸ್ಟ್​ನಲ್ಲಿ ಪಾಸಿಟಿವ್ ಬಂದರೆ ಅಂತವರಿಗೆ ಆರ್​ಟಿಪಿಸಿಆರ್​​ಗೂ ವ್ಯವಸ್ಥೆ ಮಾಡಲಾಗಿದೆ. ಯಾರು ಬೇಕಾದರೂ ನಿವಾಸಿಗಳು ಆರೋಗ್ಯ ಸಹಾಯ ಪಡೆಯಬಹುದು. ಒಂದು ಕಾಮನ್‌ ನಂಬರ್​​ಗೆ ನಿವಾಸಿಗಳು ಕರೆ ಮಾಡಲಿದ್ದಾರೆ. ಆ ನಂಬರ್ ಮೂಲಕ ಆರೋಗ್ಯ ಸೇವೆ ಕೊಡಲಾಗುತ್ತದೆ ಎಂದು ಪಾಲಿಕೆ ಸಿಬ್ಬಂದಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.