ETV Bharat / state

Paycm ಆಯ್ತು ಈಗ ಕಾಂಗ್ರೆಸ್ ನಿಂದ Saycm ಅಭಿಯಾನ ಆರಂಭ - ETV Bharat Kannada News

ಹಗರಣಗಳ ತಲೆಗಳು, ಅಹಂಕಾರದ ಮುಖಗಳು ಪ್ರಶ್ನೆಗಳಿಗೆ ಉತ್ತರಿಸದ ಹೇಡಿಗಳು. ಒಂದು ಉತ್ತರಕ್ಕೆ ಇನ್ನೆಷ್ಟು ಪ್ರಶ್ನೆಗಳು ಬೇಕು? 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ 550 ಪ್ರಶ್ನೆಗಳ ಉತ್ತರಿಸುವ ತಾಕತ್ತಿದೆಯಾ? ಎಂದು ಕಾಂಗ್ರೆಸ್​ ಪಕ್ಷವು ಬಿಜೆಪಿ ವಿರುದ್ಧದ ಸೇಸಿಎಂ ಅಭಿಯಾನದಲ್ಲಿ ಪ್ರಶ್ನಿಸಿದೆ.

ಸೇ ಸಿಎಂ ಅಭಿಯಾನ
ಸೇ ಸಿಎಂ ಅಭಿಯಾನ
author img

By

Published : Oct 18, 2022, 5:41 PM IST

Updated : Oct 18, 2022, 6:38 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪೇಸಿಎಂ ಅಭಿಯಾನ ನಡೆಸಿ ಯಶಸ್ವಿಯಾಗಿರುವ ಕಾಂಗ್ರೆಸ್ ಪಕ್ಷ ಇದೀಗ ಸೇ-ಸಿಎಂ ಹೆಸರಿನಲ್ಲಿ ಹೊಸ ಅಭಿಯಾನ ಆರಂಭಿಸಿದೆ.

ಬಿಜೆಪಿ ವಿರುದ್ಧ ಮತ್ತೊಂದು ಅಭಿಯಾನ ಶುರು ಮಾಡಿದ ಕಾಂಗ್ರೆಸ್, ಹಗರಣಗಳ ತಲೆಗಳು, ಅಹಂಕಾರದ ಮುಖಗಳು ಪ್ರಶ್ನೆಗಳಿಗೆ ಉತ್ತರಿಸದ ಹೇಡಿಗಳು. ಒಂದು ಉತ್ತರಕ್ಕೆ ಇನ್ನೆಷ್ಟು ಪ್ರಶ್ನೆಗಳು ಬೇಕು? 50 ಪ್ರಶ್ನೆಗಳಿಗೆ ಉತ್ತರಿಸಲಾಗದ ನಿಮಗೆ 550 ಪ್ರಶ್ನೆಗಳ ಉತ್ತರಿಸುವ ತಾಕತ್ತಿದೆಯಾ? ಎಂದು ಅಭಿಯಾನದಲ್ಲಿ ಕೇಳಿದೆ.

  • ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು, ಇದುವರೆಗೂ ನಾವು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳಿದ್ದೇವೆ,@BJP4Karnataka ನೀಡಿದ ಉತ್ತರ - 0

    ತಮ್ಮದೇ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಬಿಜೆಪಿಗೆ ಮಾತನಾಡುವ ಧೈರ್ಯವಿರದಿರುವುದು ಸರ್ಕಾರದ ವಿಫಲತೆಗೆ ನಿದರ್ಶನ.#NimHatraIdyaUttara pic.twitter.com/Vj2K04gry7

    — Karnataka Congress (@INCKarnataka) October 18, 2022 " class="align-text-top noRightClick twitterSection" data=" ">

ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದರ್ಭದಲ್ಲಿ ಸಹ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸೇ-ಸಿಎಂ ಅಭಿಯಾನ ಕುರಿತು ಸಹ ಪ್ರಸ್ತಾಪ ಮಾಡಿದ್ದಾರೆ.

ನಿಮ್ಮ ಹತ್ತಿರ ಇದೆಯಾ ಎಂಬ ಟ್ಯಾಗ್​ಲೈನ್​​ ಅಡಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ. ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು. ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ. ಯಾವ ಸಚಿವರೂ ಕೇಳಲಿಲ್ಲ. ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ ರಾಜ್ಯ ಬಿಜೆಪಿ? ಎಂದು ಕೇಳಿದೆ.

  • ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ?

    ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?

    ಪ್ರಣಾಳಿಕೆ ಮುಂದಿಟ್ಟುಕೊಂಡು
    ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ @BJP4Karnataka?#NimHatraIdyaUttara pic.twitter.com/1arvtIR8Ad

ಬಿಜೆಪಿಯವರು ಸುಳ್ಳಿನ ಸಾಮ್ರಾಟರು: ಬಿಜೆಪಿಯಲ್ಲಿರುವುದು ಅರ್ಧ ಭ್ರಷ್ಟರು, ಇನ್ನರ್ಧ ಪುಕ್ಕಲುಗಳು! ಅಹಂಕಾರ, ಭ್ರಷ್ಟಾಚಾರಗಳನ್ನು ಮೈಗೂಡಿಸಿಕೊಂಡಿರುವ ಈ ಸರ್ಕಾರದ ಸಚಿವರುಗಳಿಗೆ ತಮ್ಮದೇ ಪ್ರಣಾಳಿಕೆಯ ಭರವಸೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲ. ರಾಜ್ಯ ಬಿಜೆಪಿ ಪಕ್ಷದಲ್ಲಿರುವವರೆಲ್ಲ ಸುಳ್ಳಿನ ಸಾಮ್ರಾಜ್ಯದ ಸಾಮ್ರಾಟರು! ಎಂದಿದೆ.

ಪೇ-ಸಿಎಂ ಈಗ ಸೇ-ಸಿಎಂ ಆಗಲಿ, ರಾಜ್ಯದ ಜನತೆಗೆ ಉತ್ತರ ನೀಡಲಿ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ ಬಿಜೆಪಿ ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ. ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೇ ಬಸವರಾಜ್ ಬೊಮ್ಮಾಯಿ ಅವರೇ? ಎಂದು ಕೇಳಿದೆ.

  • #PayCM ಈಗ SayCM ಆಗಲಿ,
    ರಾಜ್ಯದ ಜನತೆಗೆ ಉತ್ತರ ನೀಡಲಿ.

    ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ @BJP4Karnataka ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ.

    ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ @BSBommai ಅವರೇ?#NimHatraIdyaUttara pic.twitter.com/0keKfjZcT2

ದಮ್ಮು ತಾಕತ್ತಿನ ಪ್ರದರ್ಶನ: ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ. ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ? ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ರಾಜ್ಯ ಬಿಜೆಪಿ? ಎಂದಿದೆ.

ಸರ್ಕಾರದ ವಿಫಲತೆಗೆ ನಿದರ್ಶನ: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು. ಇದುವರೆಗೂ ನಾವು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳಿದ್ದೇವೆ. ಬಿಜೆಪಿ ನೀಡಿದ ಉತ್ತರ - 0. ತಮ್ಮದೇ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಬಿಜೆಪಿಗೆ ಮಾತನಾಡುವ ಧೈರ್ಯವಿರದಿರುವುದು ಸರ್ಕಾರದ ವಿಫಲತೆಗೆ ನಿದರ್ಶನ ಎಂದು ಹೇಳಿದೆ.

  • ಬಿಜೆಪಿಯಲ್ಲಿರುವುದು ಅರ್ಧ ಭ್ರಷ್ಟರು, ಇನ್ನರ್ಧ ಪುಕ್ಕಲುಗಳು!

    ಅಹಂಕಾರ, ಭ್ರಷ್ಟಾಚಾರಗಳನ್ನು ಮೈಗೂಡಿಸಿಕೊಂಡಿರುವ ಈ ಸರ್ಕಾರದ ಸಚಿವರುಗಳಿಗೆ ತಮ್ಮದೇ ಪ್ರಣಾಳಿಕೆಯ ಭರವಸೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲ.@BJP4Karnataka ಪಕ್ಷದಲ್ಲಿರುವವರೆಲ್ಲ ಸುಳ್ಳಿನ ಸಾಮ್ರಾಜ್ಯದ ಸಾಮ್ರಾಟರು!#NimHatraIdyaUttara pic.twitter.com/Nc9e2ZxRxB

ಮ್ಯಾನೇಜ್ಮೆಂಟ್ ಸರ್ಕಾರ, ಬ್ಲಾಕ್ಮೇಲ್ ಸರ್ಕಾರ, 40% ಕಮಿಷನ್ ಸರ್ಕಾರ, ತಳ್ಳುವ ಸರ್ಕಾರ, ಸಿಡಿ ಸರ್ಕಾರ ಇವೆಲ್ಲವೂ ಬಿಜೆಪಿಯವರೇ ತಮ್ಮ ಸರ್ಕಾರಕ್ಕೆ ನೀಡಿದ ಬಿರುದುಗಳು! ವಚನಭ್ರಷ್ಟತೆಯ ಬಗ್ಗೆ, ವೈಫಲ್ಯದ ಸತ್ಯದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಕಮಿಷನ್ ನೀಡಬೇಕೇ ಬಿಜೆಪಿ? ಎಂದು ಕಾಂಗ್ರೆಸ್ ಕೇಳಿದೆ.

ಓದಿ: ಪೇಸಿಎಂ ಅಲ್ಲ ಸೇ ಸಿಎಂ ಅಭಿಯಾದ ಮಾಡಬೇಕು : ಪ್ರಿಯಾಂಕ್ ಖರ್ಗೆ

Last Updated : Oct 18, 2022, 6:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.