ETV Bharat / state

'ಸರಿಗಮಪ' ಸ್ಪರ್ಧಿಗಳ ಸುಮಧುರ ಕಂಠದಲ್ಲಿ ರಂಗೇರಲಿದೆ ಯುಗಾದಿ ಸಂಭ್ರಮ - saregamapa

ಯುಗಾದಿ ಹಬ್ಬದ ಮೆರಗನ್ನು ಹೆಚ್ಚಿಸಲು ಸರಿಗಮಪ ಸ್ಪರ್ಧಿಗಳು ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೂ ಹಬ್ಬದ ಆಚರಣೆಯ ಜೊತೆಗೆ ಸಂಗೀತ ಸಂಜೆಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾದ ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ನಾದಬ್ರಹ್ಮ ಹಂಸಲೇಖ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಲಿದ್ದಾರೆ.

ವಿಜಯ್​ ಪ್ರಕಾಶ್
author img

By

Published : Apr 2, 2019, 7:33 PM IST

Updated : Apr 2, 2019, 7:57 PM IST

ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷಕೆ ಹೊಸತು ಹೊಸತು ತರುತಿದೆ. ಇದಕ್ಕೆ ಪೂರಕವಾಗಿ ಖಾಸಗಿ ವಾಹಿನಿಗಳು ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿವೆ. ಈ ಬಾರಿಯ ಯುಗಾದಿ ಹಬ್ಬವನ್ನು ಮತ್ತಷ್ಟು ಹರುಷ ಹಾಗೂ ಹೊಸತನದಿಂದ ಆಚರಿಸಲು ಜೀ ಕನ್ನಡ ವಾಹಿನಿ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮ ರೂಪಿಸಿದೆ.

saregamapa
ಸರಿಗಮಪ ಕಾರ್ಯಕ್ರಮ

ಯುಗಾದಿ ಹಬ್ಬದ ಮೆರಗನ್ನು ಮತ್ತಷ್ಟು ಹೆಚ್ಚಿಸಲು 'ಸರಿಗಮಪ' ಗಾನ ಕೋಗಿಲೆಗಳು ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಯಿಂದ 11 ಗಂಟೆಯವರೆಗೂ ಹಬ್ಬದ ಆಚರಣೆಯ ಜೊತೆಗೆ ಸಂಗೀತ ಸಂಜೆಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಸರಿಗಮಪ ಕಾರ್ಯಕ್ರಮದ ತೀರ್ಪುಗಾರರಾದ ವಿಜಯ್​ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ನಾದಬ್ರಹ್ಮ ಹಂಸಲೇಖ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮಕ್ಕೆ ಮತ್ತಷ್ಟು ಸಿಹಿಯನ್ನು ತುಂಬಲಿದ್ದಾರೆ. ಅನುಶ್ರೀ ಅವರ ಅದ್ಭುತ ನಿರೂಪಣೆಯಲ್ಲಿಕಾರ್ಯಕ್ರಮಮೂಡಿಬರಲಿದೆ. ಈ ಸಂಭ್ರಮದಲ್ಲಿ ಸರಿಗಮಪ ಸೀಸನ್ 16 ರ ಪುಟಾಣಿಗಳು ಭಾಗವಹಿಸಲಿದ್ದಾರೆ.

arjun
ಅರ್ಜುನ್ ಜನ್ಯ

ಇನ್ನುಳಿದಂತೆ ಸರಿಗಮಪ ಸೀಸನ್ 15ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಮೋಡಿ ಮಾಡಿದ ಕೀರ್ತನ್ ಹೊಳ್ಳ, ನಿಹಾಲ್ ತಾವ್ರೋ, ವಿಜೇತ್, ಹನುಮಂತ ಹಾಗೂ ಹಳೆಯ ಸ್ಪರ್ಧಿಗಳಾದ ಚೆನ್ನಪ್ಪ, ಸುನೀಲ್ ಹಾಗೂ ಇನ್ನಿತರರು ಸಹ ತಮ್ಮ ಸುಮಧುರ ಕಂಠದ ಮೂಲಕ ಎಲ್ಲರಿಗೂ ಭರಪೂರ ಮನರಂಜನೆ ನೀಡಲಿದ್ದಾರೆ.

rajesh
ರಾಜೇಶ್ ಕೃಷ್ಣನ್

ಇನ್ನೂ ತೀರ್ಪುಗಾರರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ಕೇವಲ ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಅವರು ಸಹ ತಮ್ಮ ವಿಶೇಷ ಹಾಡುಗಳ ಮೂಲಕ ಗಾನ ಸುಧೆಯನ್ನು ಹರಿಸಿಲಿದ್ದಾರೆ. ಜೊತೆಗೆ ಅನುಶ್ರೀ ಅವರ ನೃತ್ಯ ಪ್ರದರ್ಶನ ಸಹ ಮತ್ತಷ್ಟು ಮನರಂಜನೆ ನೀಡಲಿದೆ.

anusri
ಅನುಶ್ರೀ ನೃತ್ಯ ಪ್ರದರ್ಶನ

ಇನ್ನು ಸರಿಗಮಪ ಸೀಸನ್ 15ರ ರನ್ನರ್​ಅಪ್​ ಆಗಿದ್ದ ಹನುಮಂತ ಅವರು ಈ ಬಾರಿಯ ಎಲೆಕ್ಷನ್ ಕಮಿಷನ್ ರಾಯಭಾರಿಯಾಗಿ ನೇಮಕಗೊಂಡಿದ್ದು, ಹಾವೇರಿ ಜಿಲ್ಲೆಯಲ್ಲಿ ಎಲ್ಲರಿಗೂ ಮತದಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ. ಈ ಬಗ್ಗೆ ಇನ್ನಷ್ಟು ಮಾಹಿತಿ ಕಾರ್ಯಕ್ರಮದಲ್ಲಿ ದೊರೆಯಲಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ಹೊತ್ತಿರುವ ಯುಗಾದಿ ಸ್ವರ ಸಂಭ್ರಮ ಕಾರ್ಯಕ್ರಮ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ನಡೆದಿದ್ದು, ಇದೇ ಶನಿವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

sample description
Last Updated : Apr 2, 2019, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.