ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಮತ್ತು ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭೇಟಿಗಾಗಿ ರಾಜ್ಯ ಬಿಜೆಪಿ ಕಚೇರಿಗೆ ಬಂದಿದ್ದ ಅನರ್ಹ ಶಾಸಕ ಮುನಿರತ್ನ ಬರಿಗೈಲಿ ಹಿಂದಿರುಗಿದ ಘಟನೆ ನಡೆದಿದೆ.
ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಮುನಿರತ್ನ ಬಿಜೆಪಿ ನಾಯಕರ ಭೇಟಿಗೆ ಯತ್ನಿಸಿದ್ದಾರೆ. ಸಂತೋಷ್ ಕೊಠಡಿಯೊಳಗೆ ತೆರಳಿ ಕೆಲ ಸಮಯ ಕಾದು ಕುಳಿತಿದ್ದರು. ಆದರೆ, ಬಿಜೆಪಿ ಕಚೇರಿಯಲ್ಲಿ ಸಂಘಟನಾತ್ಮಕ ಸಭೆ ನಡೆಸುವುದರಲ್ಲಿ ನಿರತರಾಗಿದ್ದ ಸಂತೋಷ್ ಮತ್ತು ಕಟೀಲ್ ಮುನಿರತ್ನ ಭೇಟಿ ಮಾಡಲಿಲ್ಲ. ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಜತೆ ಬಿಜೆಪಿ ಕಚೇರಿಗೆ ಬಂದಿದ್ದ ಮುನಿರತ್ನಗೆ ನಾಯಕರ ಭೇಟಿ ಸಾಧ್ಯವಾಗಿಲ್ಲ. ಅಲ್ಲದೇ, ಸಭೆ ಬಳಿಕವೂ ಮುನಿರತ್ನರನ್ನು ಭೇಟಿಯಾಗದೇ ಬಿಜೆಪಿ ಕಚೇರಿಯಿಂದ ನಳಿನ್ ಕುಮಾರ್ ಕಟೀಲ್ ನಿರ್ಗಮಿಸಿದರು.