ETV Bharat / state

ಡ್ರಗ್ ಕೇಸ್: ಗಣೇಶ್ ರಾವ್, ಸೌಂದರ್ಯ, ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರು - ಸಿಸಿಬಿ ವಿಚಾರಣೆಗೆ ಹಾಜರಾದ ಸೌಂದರ್ಯ, ಜಗದೀಶ್

ಸ್ಯಾಂಡಲ್​ವುಡ್ ಡ್ರಗ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಚುರುಕುಗೊಳಿಸಿದೆ. ರಾಯಲ್ ಮೀನಾಕ್ಷಿ ಮಾಲ್ ಮಾಲೀಕ ವಿ.ಗಣೇಶ್ ರಾವ್ ಹಾಗೂ ಜೆಟ್ ಲಾಗ್ ಪಬ್ ಮಾಲೀಕರಾದ ಸೌಂದರ್ಯ ಹಾಗೂ ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

Sandalwood drug case
ಸ್ಯಾಂಡಲ್​ವುಡ್​​​​ ಡ್ರಗ್ ಕೇಸ್
author img

By

Published : Oct 21, 2020, 12:06 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಮೀನಾಕ್ಷಿ ಮಾಲ್ ಮಾಲೀಕ ವಿ.ಗಣೇಶ್ ರಾವ್ ಹಾಗೂ ಜೆಟ್ ಲಾಗ್ ಪಬ್ ಮಾಲೀಕರಾದ ಸೌಂದರ್ಯ ಹಾಗೂ ಜಗದೀಶ್ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ನಿನ್ನೆಯಷ್ಟೇ ಸಿಸಿಬಿ ಈ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಈ ಮೂವರ ಒಡೆತನದ ಪಬ್​ಗಳಲ್ಲಿ ಬಂಧಿತರು ಪಾರ್ಟಿಗಳನ್ನು ನಡೆಸಿರುವುದರ ಬಗ್ಗೆ ಸಿಸಿಬಿ ಮಾಹಿತಿ ಸಿಕ್ಕಿದೆ.

ವಿ.ಗಣೇಶ್ ರಾವ್, ಸೌಂದರ್ಯ, ಜಗದೀಶ್ ಸಿಸಿಬಿ ವಿಚಾರಣೆಗೆ ಹಾಜರು

ಗಣೇಶ್ ರಾವ್, ಸೌಂದರ್ಯ ಹಾಗೂ ಜಗದೀಶ್​ರಿಂದ ಕೆಲ ಮಹತ್ವದ ಮಾಹಿತಿಗಳನ್ನು ಪಡೆದು ಸಾಕ್ಷಿಗಳನ್ನಾಗಿ ಪರಿಗಣಿಸುವ ಸಾಧ್ಯತೆಯಿದೆ. ಮೀನಾಕ್ಷಿ ಮಾಲ್ ಹಾಗೂ ಜೆಟ್ ಲಾಗ್​ ಪಬ್​ನಲ್ಲಿ ಬಂಧಿತ ನಟಿಯರಾದ ಸಂಜನಾ, ರಾಗಿಣಿ ಮತ್ತು ಸಹಚರರು ಹಲವಾರು ಪಾರ್ಟಿಗಳನ್ನ ನಡೆಸಿದ್ರು. ಪಾರ್ಟಿಯಲ್ಲಿ ಡ್ರಗ್ ಸಪ್ಲೈ ಆಗ್ತಿತ್ತಾ, ಯಾರೆಲ್ಲಾ ಬರ್ತಿದ್ರು ಅನ್ನೋದ್ರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.