ETV Bharat / state

ಗಂಡ-ಹೆಂಡತಿ ನಟಿಯ ಬಿಂದಾಸ್​ ಬದುಕು... ಮೈಲಾರಿ ಹುಡುಗಿಯ ಸಂಪಾದನೆಯೇ ನಿಗೂಢ!

author img

By

Published : Sep 9, 2020, 2:08 PM IST

ಹೇಳುವಷ್ಟು ಹೆಸರು ಮಾಡಿಲ್ಲವೆಂದ್ರು ಐಷಾರಾಮಿ ಜೀವನ ನಡೆಸುತ್ತಿದ್ದ ಮೈಲಾರಿ ಸಿನಿಮಾ ನಟಿ ಸಂಜನಾ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕುತ್ತಿದೆ.

CCB collecting details about Actress, CCB collecting details about Actress Sanjana Galrani, Actress Sanjana Galrani detained, Actress Sanjana Galrani detained news, ನಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ, ನಟಿ ಸಂಜಾನ ಗಲ್ರಾನಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ, ನಟಿ ಸಂಜಾನ ಗಲ್ರಾನಿ ವಶ, ನಟಿ ಸಂಜಾನ ಗಲ್ರಾನಿ ಸಿಸಿಬಿ ವಶ, ನಟಿ ಸಂಜಾನ ಗಲ್ರಾನಿ ವಶ ಸುದ್ದಿ,
ಹೇಳುವಷ್ಟು ನೇಮ್ ಮಾಡಿಲ್ಲಂದ್ರು ಐಷಾರಾಮಿ ಜೀವನ ಮಾಡ್ತಿದ್ದ ಮೈಲಾರಿ ಹುಡುಗಿ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪ​ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಸಿಸಿಬಿ ವಶದಲ್ಲಿದ್ದು, ಅವರ ಐಷಾರಾಮಿ ಜೀವನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಸಂಜನಾ ಹೇಳುವಷ್ಟು ದೊಡ್ಡ ನಟಿಯೇನಲ್ಲ. ಕೋಟಿಗಟ್ಟಲೇ ಸಂಭಾವನೆಯೂ ಬರೋದಿಲ್ಲ‌. ಹೀಗಿರುವಾಗ ಸಂಜನಾ ಹೇಗೆ ಇಷ್ಟೆಲ್ಲಾ ಸಂಪಾದನೆ ಮಾಡಿದಳು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಸಂಜನಾರ ಆಸ್ತಿ ಹಾಗೂ ಐಷಾರಾಮಿ ಜೀವನದ ಬಗ್ಗೆ ಕೂಡ‌ ಮಾಹಿತಿ ಕಲೆಹಾಕ್ತಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಂಜನಾ ನಟಿಸಿದ್ದಾರೆ. ಅದರಲ್ಲೂ ಕನ್ನಡದಲ್ಲಿ ನಟಿಸಿರೋದು 27 ಸಿನಿಮಾಗಳು ಮಾತ್ರ. ಈ ಸಿನಿಮಾಗಳಲ್ಲಿ ಶೇ 80 ರಷ್ಟು ಆಕೆಯದ್ದು ಗೆಸ್ಟ್​ ಅಪಿಯರೆನ್ಸ್ ರೋಲ್​ಗಳೇ ಜಾಸ್ತಿ. ಸಂಜನಾ ನಾಯಕಿಯಾಗಿ ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳು ಮಾತ್ರ.

2018 ರಲ್ಲಿ ತೆರೆಕಂಡ ರಾಜಾಸಿಂಹ, ದಂಡುಪಾಳ್ಯ 3 ಸಿನಿಮಾಗಳೇ ಸಂಜನಾಳ ಕೊನೆಯ ಕನ್ನಡ ಚಿತ್ರಗಳು. ಅದಾದ ನಂತರ ಬಿಗ್ ಬಾಸ್ ಕನ್ನಡ ಮೊದಲ‌ ಸೀಸನ್​ನಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ ‘ಮುಜ್ಸೆ ಶಾದಿ ಕರೋಗಿ’ ರಿಯಾಲಿಟಿ ಶೋನಲ್ಲೂ ಸಂಜನಾ ಮಿಂಚಿದ್ರು. ತೆಲುಗಿನ ‘ಸ್ವರ್ಣ ಖಡ್ಗಂ’ ಧಾರಾವಾಹಿಯ ಲೀಡ್ ಪಾತ್ರದಲ್ಲಿ ಸಂಜನಾ ಅಭಿನಯಿಸಿದ್ರು. ಹಾಗೆ ಸದ್ಯಕ್ಕೆ ತಮಿಳಿನಲ್ಲೊಂದು ಹಾಗೂ ಮಲಯಾಳಂನಲ್ಲೊಂದು ಸಿನಿಮಾ ರೆಡಿಯಾಗ್ತಿದೆ.

ಹಾಗೆ ಸಂಜನಾ ಗಲ್ರಾನಿ ‌ಸದಾಶಿವನಗರದಲ್ಲಿ ಒಂದು ಯೋಗ ಕೇಂದ್ರ ಹೊಂದಿದ್ದಾರೆ. ಹಲವಾರು ಯೋಗ ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗ್ತಾರೆ. ಸದ್ಯ ಇಂದಿರಾನಗರ ಬಳಿಯ ಅಪಾರ್ಟ್ಮೆಂಟ್​ನಲ್ಲಿ ವಾಸವಿದ್ದು, ಎರಡು ಬಿಎಂಡಬ್ಲ್ಯೂ ಕಾರ್, 2 ಕೋಟಿ ಮೌಲ್ಯದ ಮನೆ, ಒಂದು ರೆಡ್ಬುಲ್ ನಾಯಿ ಇದ್ದು, ನಾಯಿಯ ಪಾಲನೆಗೆ ತಿಂಗಳಿಗೆ ಒಂದು ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದರು.

ಸಂಜನಾರ ಒಟ್ಟು ಆಸ್ತಿ 10 ರಿಂದ 15 ಕೋಟಿ ತನಕ ಇದೆ ಎಂದು ಅಂದಾಜಿಸಲಾಗಿದೆ. ಹಾಗೆ ಈಗಾಗಲೇ ಬಂಧಿತನಾಗಿರುವ ರಾಹುಲ್ ಜೊತೆಗೆ ಹಲವು ಬ್ಯುಸಿನೆಸ್​ಗಳಲ್ಲಿ ಶೇರ್ ಹೋಲ್ಡರ್ ಆಗಿದ್ದಾರೆ ಅನ್ನೋ ಮಾಹಿತಿಯಿದೆ. ಸದ್ಯ ಈ ಎಲ್ಲಾ ವಿಚಾರಗಳನ್ನ ಮುಂದಿಟ್ಟುಕೊಂಡು ಸಿಸಿಬಿ ಅಧಿಕಾರಿಗಳು ಒಂದೆಡೆ ಪೇಪರ್ ವರ್ಕ್ ಮಾಡಿ ‌ನಟಿ ಸಂಜನಾಳ ಕೆಲ ಸಿಕ್ರೇಟ್ ಮಾಹಿತಿ ಕಲೆಹಾಕಲಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.