ಬೆಂಗಳೂರು: ಸಂಘಟಿತ ಮತ್ತು ಅಸಂಘಟಿತ ಸಂಸ್ಥೆಗಳು ತನ್ನ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟರೆ ಅಥವಾ ಸೋಂಕಿತ ಸಂಪರ್ಕದಲ್ಲಿದ್ದರೆ ಕ್ವಾರಂಟೈನ್ ಅವಧಿಯಲ್ಲಿ ಕಡ್ಡಾಯ ವೇತನ ಸಹಿತ ರಜೆ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್ ಲಾಕ್ ಡೌನ್ ತೆರವು ಮಾರ್ಗಸೂಚಿ ಬಳಿಕವು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಂಡು ಬರುತ್ತಿವೆ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸೋಂಕು ದೃಢಪಟ್ಟವರು ಮತ್ತು ಅವರ ಪ್ರಾಥಮಿಕ ಸಂಪರ್ಕ ಹೊಂದಿರುವವರು ಕಡ್ಡಾಯ 14 ದಿನ ಕ್ವಾರಂಟೈನ್ ಇರಬೇಕಿದೆ. ಚಿಕಿತ್ಸೆ ಮತ್ತು ಕ್ವಾರಂಟೈನ್ ಅವಧಿಯಲ್ಲಿ ಅವರುಗಳ ಜೀವನಾಧಾರಕ್ಕೆ ತೊಡಕಾಗಬಾರದು. ಈ ನಿಟ್ಟಿನಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವಲಯಗಳು ಕಡ್ಡಾಯ ವೇತನ ಸಹಿತ ರಜೆಯನ್ನು ಮಂಜೂರು ಮಾಡಬೇಕು ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಓದಿ :ಸೋಮನಾಥ ದೇವಾಲಯ ಟ್ರಸ್ಟ್ನ ಅಧ್ಯಕ್ಷರಾಗಿ ಮೋದಿ: ಈ ಹುದ್ದೆ ಅಲಂಕರಿಸಿದ 2ನೇ ಪ್ರಧಾನಿ!