ETV Bharat / state

ಮುಖ್ಯ ಕಾರ್ಯದರ್ಶಿಗೆ ಐಪಿಎಸ್ ಅಧಿಕಾರಿ ಡಿ ರೂಪಾ ಪ್ರತಿ ದೂರು

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್​ ಆಧಿಕಾರಿ ರೂಪಾ ಮೌದ್ಗಿಲ್​ ವಿಧಾನಸೌಧದಲ್ಲಿಂದು ಮುಖ್ಯಕಾರ್ಯದರ್ಶಿ ಅವರಿಗೆ ಪ್ರತಿ ದೂರನ್ನು ನೀಡಿದ್ದಾರೆ.

ಐಪಿಎಸ್ ಅಧಿಕಾರಿ ಡಿ ರೂಪಾ
ಐಪಿಎಸ್ ಅಧಿಕಾರಿ ಡಿ ರೂಪಾ
author img

By

Published : Feb 20, 2023, 5:21 PM IST

Updated : Feb 20, 2023, 7:09 PM IST

ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ಅಧಿಕಾರಿಗಳು

ಬೆಂಗಳೂರು: ಮಾಧ್ಯಮಗಳ ಎದುರು ಮಾತಾಡಬಾರದು ಅಂದುಕೊಂಡಿದ್ದೆ. ಆದರೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಬಂದು ದೂರು ಕೊಟ್ಟಿದ್ದಾರೆ. ನಾನು ಈಗಾಗಲೇ ಸರ್ಕಾರಕ್ಕೆ ಇದೆಲ್ಲದರ ಬಗ್ಗೆ ಗಮನಕ್ಕೆ ತಂದಿದ್ದೇನೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮುಖ್ಯಕಾರ್ಯದರ್ಶಿ ಅವರಿಗೆ ದೂರು ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೋಟೋಗಳು ವೈಯಕ್ತಿಕ ಆಗಲ್ಲ. ಯಾರು ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಅದೂ ಹೊರಗೆ ಬರಬೇಕು. ರೋಹಿಣಿ ಸಿಂಧೂರಿ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಅದನ್ನು ಮರು ತನಿಖೆಗೆ ಅನುಮತಿ ಕೊಡುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು.

ಅವರ ಜಾಲಹಳ್ಳಿ ಮನೆ ಬಗ್ಗೆ ರೋಹಿಣಿ ಆಸ್ತಿ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿಲ್ಲ. ಅದರ ತನಿಖೆಗೂ ಮನವಿ ಮಾಡುತ್ತೇನೆ. ರೋಹಿಣಿ ಅವರಿಗೆ ಯಾವ ಶಕ್ತಿ ತಡೆಯುತ್ತಿದೆಯೋ ಗೊತ್ತಿಲ್ಲ ಎಂದರು. ರೋಹಿಣಿ ಅವರ ವಿರುದ್ಧ ಯಾವ ಪ್ರಕರಣದಲ್ಲೂ ಕ್ರಮ ಆಗಿಲ್ಲ. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂದು ಡಿ.ರೂಪಾ ಸ್ಪಷ್ಟಪಡಿಸಿದರು.

ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ದೂರು: ತನ್ನ ವಿರುದ್ಧ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಆಧಾರರಹಿತ, ಸುಳ್ಳು ಮತ್ತು ವೈಯಕ್ತಿಕ ಆರೋಪಗಳನ್ನು ಮಾಡಿ ಸೇವಾ ನಿಯಮ ಉಲ್ಲಂಘಿಸಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ರೂಪಾ ಮಾಡಿರುವ ಆರೋಪದ ಲಿಂಕ್​ಗಳನ್ನು ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ. ನಾಲ್ಕು ಪುಟಗಳ ದೂರಿನಲ್ಲಿ ರೂಪಾ ಮಾಡಿರುವ ಆರೋಪಗಳ ಬಗ್ಗೆ ಸಿಂಧೂರಿ ಸ್ಪಷ್ಟೀಕರಣ ನೀಡಿದ್ದಾರೆ.

ಒಬ್ಬ ಸರ್ಕಾರಿ ಅಧಿಕಾರಿ ವಿರುದ್ಧ ಬೇರೊಬ್ಬ ಅಧಿಕಾರಿಗಳು ದೂರು ನೀಡಬೇಕಾದರೆ, ಅದಕ್ಕೆಂದೇ ಸೂಕ್ತ ವೇದಿಕೆ ಇದೆ. ಮಾಧ್ಯಮದವರ ಮುಂದೆ ಸುಳ್ಳು ಆರೋಪ ಮಾಡಿ, ವ್ಯಕ್ತಿಗತವಾಗಿ ನಿಂದನೆ ಮಾಡುವುದು ಸರಿಯಲ್ಲ. ರೂಪಾ ಅವರು ನನ್ನ ವಿರುದ್ದ 20 ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆಯೂ ಕೋರೊನಾ ಸಮಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಸಾವಿಗೀಡಾದ ಸಂದರ್ಭ ತಮ್ಮ ವಿರುದ್ಧ ರೂಪಾ ಆರೋಪಿಸಿದ್ದರು. ಹೈಕೋರ್ಟ್ ನೇಮಿಸಿ ಸಮಿತಿ ಹಾಗೂ ರಾಜ್ಯ ಸರ್ಕಾರ ನೇಮಿಸಿದ ಆಯೋಗ ಈ ಘಟನೆಯಲ್ಲಿ ತನ್ನ ಯಾವ ಪಾತ್ರವೂ ಇಲ್ಲ ಎಂಬುದನ್ನು ತಿಳಿಸಿತ್ತು. ಇಷ್ಟಾದರೂ ರೂಪಾ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ರೋಹಿಣಿ ಸಿಂಧೂರಿ ದೂರಿನಲ್ಲಿ ದಾಖಲಿಸಿದ್ದಾರೆ.

ರೂಪಾ ವಿರುದ್ದ ರೋಹಿಣಿ ಪತಿಯಿಂದ ದೂರು: ರೋಹಿಣಿ ಸಿಂಧೂರಿ ಅವರ ವೈಯಕ್ತಿಕ ಫೋಟೋಗಳನ್ನು ವೈರಲ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಸಿಂಧೂರಿ ಪತಿ ಸುಧೀರ್ ರೆಡ್ಡಿ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಡಿ.ರೂಪಾ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ ರೋಹಿಣಿ ಸಿಂಧೂರಿ

Last Updated : Feb 20, 2023, 7:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.