ಬೆಂಗಳೂರು : ಹಲವರಿಗೆ ಕೊರೊನಾ ಸೋಂಕು ಇದ್ದರೂ ಆರ್ಟಿಪಿಸಿಆರ್ನಲ್ಲಿ ರಿಪೋರ್ಟ್ ನೆಗೆಟಿವ್ ಅಂತ ಬರುತ್ತಿತ್ತು. ಇದರಿಂದ ಸಿಟಿ ಸ್ಕ್ಯಾನ್‌ನಂತಹ ಟೆಸ್ಟ್ ಮೊರೆ ಹೋಗಬೇಕಿತ್ತು.
ಆದರೆ, ಇನ್ಮುಂದೆ ಕೊರೊನಾ ಚಿಕಿತ್ಸೆ ಪಡೆಯಲು ಯಾವುದೇ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ. ಕೇಂದ್ರ ಆರೋಗ್ಯ ಸಚಿವಾಲಯ ಇಂತಹ ಒಂದು ಆದೇಶವನ್ನ ಹೊರಡಿಸಿದೆ.
ಓದಿ: ಸಿಎಂ ತವರು ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಹೇಗೆ ನಡೆಯುತ್ತಿದೆ?
ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದು, ರೂಪಾಂತರಿ ಕೊರೊನಾ ಬಗೆಗೆ ಹೀಗೇ ಅಂತ ಹೇಳಲು ಸಾಧ್ಯವಿಲ್ಲ. ಕೆಲವರಿಗೆ ಸೋಂಕಿನ ಲಕ್ಷಣ ಕಂಡು ಬಂದರೆ ಇನ್ನು ಕೆಲವರಿಗೆ ಲಕ್ಷಣಗಳೇ ಕಾಣುವುದಿಲ್ಲ. ಅಷ್ಟರಲ್ಲಿ ಶ್ವಾಸಕೋಶದ ತೊಂದರೆ, ನಿಮೋನಿಯಾದಿಂದ ಬಳಲಿ ಸಾವನ್ನಪ್ಪುತ್ತಿದ್ದರು.
ಆದರೆ, ಇನ್ಮುಂದೆ ಕೊರೊನಾ ಚಿಕಿತ್ಸೆ ಪಡೆಯಲು ಯಾವುದೇ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ, ರಿಪೋರ್ಟ್ ಇಲ್ಲದೇ ಜನರಿಗೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಆಸ್ಪತ್ರೆಗಳು ಕೂಡ ಚಿಕಿತ್ಸೆಗೆ ನಿರಾಕರಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಎಲ್ಲ ರಾಜ್ಯಗಳಲ್ಲೂ ಆದೇಶ ಜಾರಿ ತರುವಂತೆ ಸೂಚಿಸಿದ್ದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆದೇಶ ಪಾಲನೆ ಆಗಬೇಕು.
ಶಂಕಿತರನ್ನು ಕೋವಿಡ್ ಕೇರ್ ಸೆಂಟರ್, ಡಿಸಿಹೆಚ್‌ಸಿ ಅಥವಾ ಡಿಹೆಚ್‌ಸಿಗಳಲ್ಲಿ ಅಡ್ಮಿಷನ್ ಮಾಡಬೇಕು. ಯಾವ ಜಿಲ್ಲೆಯ ರೋಗಿಗಳು ಎಲ್ಲಾದರೂ ಚಿಕಿತ್ಸೆ ಪಡೆಯಬಹುದು. ಚಿಕಿತ್ಸೆ ಯಾವುದೇ ಜಿಲ್ಲೆಯ ಅಡ್ರೆಸ್ ಐಡಿ ತೋರಿಸಿ ಚಿಕಿತ್ಸೆ ಪಡೆಯಬಹುದಾಗಿದೆ.