ETV Bharat / state

ಆರ್​ಎಸ್​ಎಸ್​ ನಿಷೇಧದ ಮಾತು ವೈಯಕ್ತಿಕ; ಪಕ್ಷ ಹಾಗೂ ಸರ್ಕಾರದ ಅಭಿಪ್ರಾಯ ಅಲ್ಲ: ಪರಮೇಶ್ವರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರ ತುರಾಯಿ ಸ್ವೀಕರಿಸುವುದಿಲ್ಲ ಎಂದು ನಿರ್ಧಾರ ಕೈಗೊಂಡ ಮೇಲೆ ಸಚಿವ ಜಿ ಪರಮೇಶ್ವರ್ ಅವರು ಕೂಡಾ ಇದೇ ಹಾದಿ ತುಳಿದಿದ್ದಾರೆ.

ಸಚಿವ ಜಿ ಪರಮೇಶ್ವರ್
ಸಚಿವ ಜಿ ಪರಮೇಶ್ವರ್
author img

By

Published : May 25, 2023, 6:34 PM IST

ಬೆಂಗಳೂರು : ಆರ್​ಎಸ್​ಎಸ್ ನಿಷೇಧ ಕುರಿತು ನಿನ್ನೆ ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿದ ಬೆನ್ನಲ್ಲೇ ಅದಕ್ಕೆ ಇಂದು ಸಚಿವ ಜಿ ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದು, ವೈಯಕ್ತಿಕ ಅಭಿಪ್ರಾಯಗಳು ಪಕ್ಷದ ಅಥವಾ ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈ ವಿಚಾರದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಆರ್​ಎಸ್​ಎಸ್ ನಿಷೇಧ ಸಂಬಂಧ ಹೇಳಿಕೆಗಳನ್ನು ನೀಡುವುದರಿಂದ ರಾಜ್ಯದಲ್ಲಿ ಜನರ ಭಾವನೆ ಕೆರಳಿಸಿದಂತೆ ಆಗಲಿದೆ. ಇದರಿಂದ ಸರ್ಕಾರ ರಚನೆಯಾದ ಆರಂಭದಲ್ಲೇ ವ್ಯತಿರಿಕ್ತ ಪರಿಣಾಮಗಳು ಉಂಟಾಗದಿರಲಿ ಎಂಬ ಉದ್ದೇಶದಿಂದ ಹಿರಿಯ ಸಚಿವರಾದ ಪರಮೇಶ್ವರ್ ಇದಕ್ಕೊಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದಾರೆ.

ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿರಬಹುದು: ನಾವು ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್‌ಐಗೆ ಸಂಬಂಧಿಸಿದಂತೆ ಹೇಳಿದ್ದೆವು. ಒಂದು ವೇಳೆ, ಅವರು ಶಾಂತಿಗೆ ಭಂಗ ತಂದರೆ, ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ, ಅಗತ್ಯವಿದ್ದರೆ ಅವರನ್ನು ನಿಷೇಧಿಸುವ ಮಟ್ಟಕ್ಕೂ ಹೋಗುತ್ತೇವೆ ಎಂದು ಹೇಳಿದ್ದೆವು. ಅದನ್ನು ಬಿಟ್ಟರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯವನ್ನು ಹೇಳಿರಬಹುದು ಎಂದು ವಿವರಿಸಿದ್ದಾರೆ.

ಸಮಾಜಕ್ಕೆ ವಿರುದ್ಧವಾದ, ಸಮಾಜದಲ್ಲಿ ಶಾಂತಿ ಕದಡುವ ಎಲ್ಲವೂ ಜನವಿರೋಧಿ, ಅದು ಶಾಸನಗಳು ಅಥವಾ ನಿಯಮಗಳನ್ನು ಪರಿಶೀಲಿಸಲಾಗುವುದು. ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿಲ್ಲ. ಖಾತೆ ಹಂಚಿಕೆ ಆದ ಮೇಲೆ, ಯಾರು ಸಚಿವರಾಗುತ್ತಾರೋ ಅವರು ನಿಷೇಧ ವಿಷಯಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ನಂತರ ಸಂಪುಟದಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ವಿವರಿಸಿದ್ದಾರೆ.

ಏನಂದಿದ್ದರು ಪ್ರಿಯಾಂಕ ಖರ್ಗೆ : ರಾಜ್ಯದಲ್ಲಿ ಶಾಂತಿ ಕದಡಿದರೆ ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ತಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದರು.

ನಾವು ಕರ್ನಾಟಕವನ್ನ ಸರ್ವ ಜನಾಂಗದ ಶಾಂತಿಯ ತೋಟ ಮಾಡುವ ಪ್ರಯತ್ನದಲ್ಲಿದ್ದು, ಇದಕ್ಕೆ ಭಂಗ ತರುವ ಪ್ರಯತ್ನ ನಡೆದರೆ ಹಾಗೂ ಶಾಂತಿ ಕದಡಿದರೆ ಅದು ಬಜರಂಗದಳ ಅಥವಾ ಆರ್​ಎಸ್​ಎಸ್​ ಎಂಬುದನ್ನು ಪರಿಗಣಿಸುವುದಿಲ್ಲ. ಕಾನೂನನ್ನು ಯಾರು ಕೈಗೆತ್ತಿಕೊಳ್ಳಬಾರದು ಎಂದು ಹೇಳಿದ್ದರು.

ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆಯಲಿದೆ ಎಂದು ಅವರು ಹೇಳಿದರು. ಸಮಾಜದಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೇ ಕೆಲವು ಅಂಶಗಳು ಮುಕ್ತವಾಗಿ ವಿಹರಿಸುತ್ತಿವೆ. ಕಳೆದ ಮೂರು ವರ್ಷಗಳಿಂದ ಈ ಪ್ರವೃತ್ತಿ ನಡೆಯುತ್ತಿದೆ ಎಂದು ಪ್ರಿಯಾಂಕ್ ಹೇಳಿದ್ದಾರೆ.

ಒಟ್ಟಾರೆ ಪ್ರಿಯಾಂಕ್​ ಖರ್ಗೆ ಹಾಗೂ ಇತರ ಕಾಂಗ್ರೆಸ್ ನಾಯಕರು ಆರ್​ಎಸ್​ಎಸ್ ನಿಷೇಧದ ಬಗ್ಗೆ ಆಡುತ್ತಿರುವ ಮಾತಿಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುವ ಮುನ್ನವೇ ಅದಕ್ಕೊಂದು ಸಮಜಾಯಿಸಿ ನೀಡುವ ಪ್ರಯತ್ನವನ್ನು ಪರಮೇಶ್ವರ್ ಮಾಡಿದ್ದಾರೆ.

ಮುಖ್ಯಮಂತ್ರಿ ಹಾದಿ ತುಳಿದ ಪರಮೇಶ್ವರ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾರ ತುರಾಯಿ ಹಾಗೂ ಬೊಕ್ಕೆಗಳನ್ನು ಸ್ವೀಕರಿಸುವುದಿಲ್ಲ ಎಂಬ ನಿರ್ಧಾರ ಕೈಗೊಂಡ ಬೆನ್ನಲ್ಲೇ ಅವರ ಹಾದಿಯನ್ನೇ ಸಚಿವ ಪರಮೇಶ್ವರ್ ಸಹ ತುಳಿದಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನಿರ್ಧಾರದಂತೆಯೇ, ನಾನೂ ಸಹ ಗೌರವದ ಹೆಸರಿನಲ್ಲಿ ಪುಷ್ಪಗುಚ್ಚ, ಹಾರ - ತುರಾಯಿಗಳನ್ನು ಸ್ವೀಕರಿಸದೇ ಇರಲು ತೀರ್ಮಾನಿಸಿದ್ದೇನೆ. ಯಾವುದೇ ಸಭೆ-ಸಮಾರಂಭಗಳಿಗೂ ಇದು ಅನ್ವಯವಾಗಲಿದೆ. ನಿಮ್ಮ ಪ್ರೀತಿ-ವಿಶ್ವಾಸ ಹಾಗೂ ಉಪಸ್ಥಿತಿಗಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಪೂರ್ಣ ಪ್ರಮಾಣದ ಸಂಪುಟ ರಚನೆಗೊಳ್ಳದ ಹೊರತು, ಸಚಿವರಿಗೆ ಖಾತೆ ಹಂಚಿಕೆಗೆ ಒಪ್ಪದ ಕಾಂಗ್ರೆಸ್ ಹೈಕಮಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.