ETV Bharat / state

ರಾಜಕಾಲುವೆ ಬಳಿ ದೊರೆತಿದ್ದ ಶವದ ಗುರುತು ಪತ್ತೆ ಹಚ್ಚಿದ ಪೊಲೀಸರು

ಆರ್​​​ಆರ್ ನಗರ ರಾಜಕಾಲುವೆ ಬಳಿ ದೊರೆತ ಯುವಕನ ಮೃತದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತನನ್ನು ಭಾರತಿನಗರದ ಮುರುಗಪಿಳ್ಳೆ ಪಾಳ್ಯದ ನಿವಾಸಿ ಎಂದು ಗುರುತಿಸಲಾಗಿದೆ.

RR nagar rajakaluve dead body found case
ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ
author img

By

Published : Nov 3, 2021, 9:12 PM IST

ಬೆಂಗಳೂರು: ಆರ್​​​ಆರ್ ನಗರ ರಾಜಕಾಲುವೆ ಬಳಿ ದೊರೆತ ಶವದ ಗುರುತನ್ನು ಪೊಲೀಸರು ಇಂದು ಪತ್ತೆ ಹಚ್ಚಿದ್ದಾರೆ. ಭಾರತಿನಗರದ ಮುರುಗಪಿಳ್ಳೆ ಪಾಳ್ಯದ ನಿವಾಸಿ ತರುಣ್ (21) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.

ರಾಜಕಾಲುವೆಯಲ್ಲಿ ಶವ ಪತ್ತೆ ಪ್ರಕರಣ

ನವೆಂಬರ್ 01ರಂದು ಮೃತ ಯುವಕ ತರುಣ್, ಬೆಳಗ್ಗೆ ತಾಯಿಯ ಬಳಿ ಹಣ ಪಡೆದು ಪಟಾಕಿ ತರುವುದಾಗಿ ಹೇಳಿ ಮನೆಯಿಂದ ಹೊರಗೆ ಹೋಗಿದ್ದನು. ರಾತ್ರಿಯಾದರೂ ಮಗ ಮನೆಗೆ ವಾಪಸ್ ಆಗದ ಕಾರಣ ಕುಟುಂಬಸ್ಥರು ಭಾರತೀ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ನಡುವೆ ದುಷ್ಕರ್ಮಿಗಳು ಯುವಕನ ಮೂಗು, ಬಾಯಿಗೆ ಪ್ಲಾಸ್ಟರ್ ಸುತ್ತಿ ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಗೋಣೀಚೀಲದಲ್ಲಿ ಸುತ್ತಿ ಆರ್ ಆರ್ ನಗರ ಠಾಣಾ ವ್ಯಾಪ್ತಿಯ ಡಿಸೋಜ ನಗರದ ರಾಜಕಾಲುವೆ ಬಳಿ ಶವವನ್ನು ಬಿಸಾಕಿ ಹೋಗಿದ್ದರು.

ನಿನ್ನೆ (ಮಂಗಳವಾರ) ಚಿಂದಿ ಆಯುವ ವ್ಯಕ್ತಿ ರಾಜಕಾಲುವೆ ಪಕ್ಕ ಗೋಣೀಚೀಲದಲ್ಲಿ ಶವ ಇರುವ ಶಂಕೆಯಿಂದ ಸ್ಥಳೀಯರಿಗೆ ಮಾಹಿತಿ ನೀಡಿದ್ದನು. ಕೂಡಲೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲಿಸಿ ಗೋಣಿಚೀಲ ತೆಗೆದು ನೋಡಿದಾಗ ಯುವಕನ ಶವ ಪತ್ತೆಯಾಗಿತ್ತು.

ವಿಕ್ಟೋರಿಯಾ ಆಸ್ಪತ್ರೆಯ ಶವ ಪರೀಕ್ಷೆ ನಡೆಯುತ್ತಿದ್ದು, ಎಲ್ಲಾ ಪ್ರಕ್ರಿಯೆ ನಡೆದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದೀಗ ಪೊಲೀಸರಿಗೆ ಯುವಕನ ಕುರಿತಾದ ಮಾಹಿತಿ ಲಭ್ಯವಾಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ.

ಇದನ್ನೂ ಓದಿ: ದೇವಾಲಯಗಳಲ್ಲಿ ಗೋಪೂಜೆ ಜವಾಬ್ದಾರಿ ಪಶುಸಂಗೋಪನೆ ಇಲಾಖೆಯದ್ದು: ಪ್ರಭು ಚವ್ಹಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.