ETV Bharat / state

ಶಾಸಕರ ಕಾರಿಗೆ ಬೆಂಕಿ ಇಟ್ಟ ಪ್ರಕರಣ: ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ರೌಡಿಶೀಟರ್ - ಸೋಮಶೇಖರ್​ ವಿಡಿಯೋ ವೈರಲ್​ ವಿಡಿಯೋ

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣ ಸಂಬಂಧ ಘಟನೆಗೆ ಸೂತ್ರಧಾರಿ ಎಂದು ಹೇಳಲಾಗುತ್ತಿರುವ ರೌಡಿಶೀಟರ್ ಸೋಮಶೇಖರ್​ಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಈ ಕುರಿತು ಅಜ್ಞಾತ ಸ್ಥಳದಿಂದಲೇ ವಿಡಿಯೋ ಬಿಡುಗಡೆ ಮಾಡಿರುವ ಸೋಮಶೇಖರ್​ ತಮ್ಮ ಮೇಲಿರುವ ಅಪಾದನೆಗಳಿಗೆ ಉತ್ತರ ನೀಡಿದ್ದಾರೆ.

rowdy-sheeter-somashekhar-video
ರೌಡಿಶೀಟರ್ ಸೋಮಶೇಖರ್
author img

By

Published : Aug 17, 2021, 7:05 PM IST

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಗುಪ್ತ ವಿಚಾರಣೆ ನಡೆಸಲಾಗುತ್ತಿದೆ. ಮತ್ತೊಂದೆಡೆ ಪ್ರಕರಣ ಸೂತ್ರಧಾರಿ ಎಂದು ಹೇಳಲಾಗುತ್ತಿರುವ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಸೋಮಶೇಖರ್​ಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಇದರ ಬೆನ್ನಲ್ಲೇ ವಿಡಿಯೋ ಮಾಡಿ ಸೋಮಶೇಖರ್ ತನ್ನ ವಿರುದ್ಧ ಕೇಳಿಬಂದಿರುವ​ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ರೌಡಿಶೀಟರ್

ಅಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಮಾಧ್ಯಮಗಳಲ್ಲಿ ನನ್ನ ಹೆಸರು ಫೋಟೋ ವಿಡಿಯೋ ಬರುತ್ತಿದೆ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. 15 ದಿನಗಳಿಂದ ಖಾಸಗಿ ವಿಚಾರಗಳಿಂದ ಹೊರಗೆ ಇದ್ದೇನೆ. ನನ್ನ ಫೋನ್ ಟವರ್ ಲೊಕೇಶನ್ ತಪಾಸಣೆ ಮಾಡಲಿ. ‌ ತಪ್ಪು ಮಾಡಿದವರು ಯಾರೇ ಆದರೂ ಶಿಕ್ಷೆಯಾಗಲಿ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದ್ದಕ್ಕೆ ರೌಡಿಶೀಟರ್​ ಪಟ್ಟ: ನಾನು ಸತೀಶ್ ರೆಡ್ಡಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ ಸಣ್ಣ ವಿಚಾರಕ್ಕೆ ನನ್ನ ಮೇಲೆ ರೌಡಿಶೀಟ್ ಓಪನ್ ಮಾಡಿದ್ದಾರೆ‌. ನನ್ನ ಮೇಲಿನ ಎಲ್ಲ ಆರೋಪಗಳು ಕೊರ್ಟ್​ನಲ್ಲಿ ರದ್ದಾಗಿವೆ. ನನ್ನ ಮೇಲೆ ರೌಡಿಶೀಟರ್ ಇರುವುದರಿಂದ ಬೊಮ್ಮನಹಳ್ಳಿ, ಬೇಗೂರು ಹಾಗೂ ಹೊಂಗಸಂದ್ರದಲ್ಲಿ ಏನೇ ಆದರೂ ನನಗೆ ಪೊಲೀಸರು ತೊಂದರೆ ಕೊಟ್ಟಿದ್ದಾರೆ‌. ಜನರಿಗೆ ಒಳ್ಳೆದು ಮಾಡುವುದಕ್ಕೆ ನಾನು ಎಲೆಕ್ಷನ್​ಗೆ ಬಂದೆ. ಯಾರಿಗೂ ತೊಂದರೆ ಮಾಡಲಿಕ್ಕೆ ಅಲ್ಲ. ನನಗೂ ಕುಟುಂಬಸ್ಥರು, ಬಂಧುಮಿತ್ರರು, ಸ್ನೇಹಿತರಿದ್ದಾರೆ ಎಂದು ನೋವನ್ನು ಸೋಮಶೇಖರ್​ ತೋಡಿಕೊಂಡಿದ್ದಾರೆ.

ನಾನು ನಿರಪರಾಧಿ ಎಂದು ಪೊಲೀಸರಿಗೂ ಗೊತ್ತು: ನಾನು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬುದು ಪೊಲೀಸರಿಗೂ ಗೊತ್ತು. ಸದ್ಯ 15 ದಿನದಿಂದ ನಾನು ಹೊರಗಿದ್ದೀನಿ ಅಂತ ನನ್ನ ಹೆಸರು ಕೇಳಿಬಂದಿದೆ. ಸರಿಯಾಗಿ ಶೋಧ ಮಾಡಲಿ, ನನ್ನ ಪಾತ್ರವಿದ್ದರೆ ನನಗೆ ಶಿಕ್ಷೆಯಾಗಲಿ. ಸಿಬಿಐ ತನಿಖೆ ಬೇಕಾದರೂ ಮಾಡಿ, ಯಾವುದೇ ರೀತಿ ತನಿಖೆ ಮಾಡಿದರೂ ಅದಕ್ಕೆ ನನ್ನ ಸಮ್ಮತಿ ಇರಲಿದೆ ಎಂದು ಹೇಳಿದ್ದಾರೆ.

ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಕೇಸ್​ನಲ್ಲಿ ನನ್ನ ಹೆಂಡತಿ ಮಕ್ಕಳು ತಂಗಿಯನ್ನ ವಿಚಾರಣೆಗೆ ಕರೆದೊಯ್ದಿದ್ದಾರೆ. ಎಂಎಲ್​ಎ ಎಲೆಕ್ಷನ್ ನಿಂತಿದ್ದಕ್ಕೆ ಇಷ್ಟೊಂದು ದ್ವೇಷದ ರಾಜಕಾರಣ ಮಾಡಬಾರದು. ನಾನು ಎಲೆಕ್ಷನ್ ನಿಂತುಕೊಳ್ಳುವ ಮುಂಚೆ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿರಲಿಲ್ಲ. ಎಲೆಕ್ಷನ್ ನಿಂತ್ಕೋಳ್ತಿನಿ ಅಂತಿದ್ದಾಗೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ರೌಡಿಶೀಟರ್ ಮಾಡಿದ್ದಾರೆ. ಅದಾದ ಮೇಲೆ ಪ್ರತಿದಿನ ನನಗೆ ತೊಂದರೆ ಕೊಡ್ತಿದ್ದಾರೆ ಎಂದು ಸೋಮಶೇಖರ್​ ದೂರಿದರು.

ಏರಿಯಾ ಸಮಸ್ಯೆ ಕುರಿತು ಶಾಸಕರ ಮುಂದೆ ಪ್ರಶ್ನೆ ಮಾಡಿದ್ದೆ: ಶಾಸಕ ಸತೀಶ್ ರೆಡ್ಡಿ ಹಾಗೂ ತಮ್ಮ ನಡುವಿನ ವಾದ-ವಿವಾದದ ಬಗ್ಗೆ ಸೋಮ ಮಾತನಾಡಿದ್ದು, ಮಳೆ ಬಂದಾಗ ನಮ್ಮ ಮನೆಗೆ ನೀರು ನುಗ್ಗುತ್ತಿತ್ತು. ಅಷ್ಟೊತ್ತಿಗೆ ಸತೀಶ್ ರೆಡ್ಡಿ ಎರಡು ಬಾರಿ ಶಾಸಕರಾಗಿದ್ದರು. ‌ಕುಡಿಯುವುದಕ್ಕೆ ನಮ್ಮ ಏರಿಯಾದಲ್ಲಿ ನೀರು ಸಿಕ್ತಿರಲಿಲ್ಲ. ಆ ಬಗ್ಗೆ ನಾನು ಸತೀಶ್ ರೆಡ್ಡಿಗೆ ಪ್ರಶ್ನೆ ಮಾಡಿದ್ದೆ. ನಾನು ಸ್ವಂತ ಖರ್ಚಿನಲ್ಲಿ ಏರಿಯಾದಲ್ಲಿ ಟ್ಯಾಂಕರ್ ಮೂಲಕ ಜನರಿಗೆ ನೀರನ್ನ ಕೊಟ್ಟಿದ್ದೇನೆ. ಇದೆಲ್ಲವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತೀಶ್ ರೆಡ್ಡಿ ನನ್ನ ಹೆಸರನ್ನ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.‌

ಸತೀಶ್​ ರೆಡ್ಡಿ ಅಕ್ರಮ ಬಗ್ಗೆ ನಾನು ವಿಡಿಯೋ ಮಾಡಿದ್ದೆ: ಜನರಿಗೆ ಸರಬರಾಜು ಆಗಬೇಕಿದ್ದ ನೀರನ್ನ ಅವರ ಹೋಟೆಲ್ ಮತ್ತು ಪಿಜಿಗಳಿಗೆ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದರು. ಈ ಬಗ್ಗೆ ನಾನು ವಿಡಿಯೋ ಮಾಡಿದ್ದೆ. ಇವೆಲ್ಲವನ್ನು ತಲೆಯಲ್ಲಿ ಇಟ್ಟುಕೊಂಡು ನನ್ನನ್ನ ಬಿಡಬಾರದು ಅಂತ ಸಂಚು ರೂಪಿಸಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸತೀಶ ರೆಡ್ಡಿ ವಿರುದ್ಧ ಮಾತಾಡಿದವರು ಯಾರೂ ಇಲ್ಲ. ಮಾತಾಡಿದ್ದು ನಾನೊಬ್ಬ, ನನ್ನನ್ನ ಮುಗಿಸಬೇಕು ಎಂದು ತಲೆಯಲ್ಲಿ ಇಟ್ಟುಕೊಂಡಿದ್ದಾರೆ. ನಾವು ನಿಮ್ಮ ಸಹವಾಸಕ್ಕೆ ಬರಲ್ಲ, ನಮ್ಮ ಹೆಂಡ್ತಿ ಮಕ್ಕಳಿಗೆ ತೊಂದರೆ ಕೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.