ETV Bharat / state

ಅಣ್ಣ-ತಮ್ಮನನ್ನು ಮಸಣಕ್ಕೆ ಸೇರಿಸಿದ 17 ಆರೋಪಿಗಳು ಅಂದರ್​ - undefined

ನಗರದಲ್ಲಿ ಹತ್ಯೆಯಾಗಿದ್ದ ಸಹೋದರರ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 17 ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

17 ಆರೋಪಿಗಳು ಅರೆಸ್ಟ್​​
author img

By

Published : Mar 22, 2019, 10:55 PM IST

ಬೆಂಗಳೂರು: ವಿನೋದ್​ ಮತ್ತು ರೌಡಿ ಶೀಟರ್​ ಪ್ರಶಾಂತ್​ನನ್ನ ಕೊಲೆಮಾಡಿದ್ದ 17 ಆರೋಪಿಗಳಿಗೆ ಬೆಂಗಳೂರು ಪೊಲೀಸರು ಕೈಕೋಳ ತೊಡಿಸಿದ್ದಾರೆ.

ಕಳೆದ ಫೆಬ್ರವರಿ 27ರ ರಾತ್ರಿ ಬಾಣಸವಾಡಿಯ ಕಲ್ಯಾಣ ನಗರದಲ್ಲಿ ಪ್ರಶಾಂತ್ ಎಂಬ ರೌಡಿಶೀಟರ್​ನನ್ನು ಶಿವರಾಜ್ ಮತ್ತು ಲೋಕೇಶ್ ಟೀಂ ಭೀಕರವಾಗಿ ಕೊಂದಿತ್ತು. ಮಾರತ್​ಹಳ್ಳಿ ರೌಡಿಶೀಟರ್ ಪ್ರಶಾಂತ್ ಅಣ್ಣನನ್ನು ಇದೇ ಆರೋಪಿಗಳು ನೀರಿನ ವ್ಯವಹಾರದ ವೈಷಮ್ಯ ಬೆಳೆದು ಮೂರ್ನಾಲ್ಕು ವರ್ಷಗಳ ಹಿಂದೆ ಕೊಂದಿದ್ದರು ಎನ್ನಲಾಗ್ತಿದೆ.

ಕೊಲೆ ಪ್ರಕರಣ 17 ಆರೋಪಿಗಳು ಅರೆಸ್ಟ್​​

ಅಣ್ಣ ವಿನೋದ್​ನನ್ನ ಕೊಂದಿದ್ದ ಶಿವರಾಜ್ ಮತ್ತು ಲೋಕೇಶ್ ಅವರನ್ನ ಮುಗಿಸುವುದಾಗಿ ಪ್ರಶಾಂತ್ ಪ್ರತಿಜ್ಞೆ ಮಾಡಿದ್ದ. ಈಶ್ವರಪ್ಪ ಪಿ.ಎ. ಅಪಹರಣ ಕೇಸ್​ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಪ್ರಶಾಂತ್​ ಹವಾ ಮತ್ತಷ್ಟು ಹೆಚ್ಚಾಗಿತ್ತು. ಇವನನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಶಿವರಾಜ್ ಮತ್ತು ಲೋಕೇಶ್ ಗ್ಯಾಂಗ್ ಪ್ರಶಾಂತ್​ನನ್ನು ಮುಗಿಸಿದ್ದರು.

ಇದೀಗ ಕೊಲೆ ಆರೋಪಿಗಳಾದ ಲೋಕೇಶ್, ಸ್ಟಾಲೀನ್, ಪ್ರವೀಣ್, ಬಸವರಾಜ್, ಕಿಶೋರ್ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಕೊಲೆಯಾದ ಎರಡು ದಿನಗಳಲ್ಲಿ ಮಾರತ್​ಹಳ್ಳಿ ಇನ್ಸ್​ಪೆಕ್ಟರ್​ ಪ್ರಮುಖ ಆರೋಪಿ ಲೋಕೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಮಾರತ್​ಹಳ್ಳಿ, ಹೆಚ್ಎಎಲ್ ಮತ್ತು ಬಾಣಸವಾಡಿ ಪೊಲೀಸರು ಒಟ್ಟು 17 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ಪ್ರಮುಖ ಆರೋಪಿ ಶಿವರಾಜ್ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಅಣ್ಣನ ಕೊಂದವರನ್ನ‌ ಮುಗಿಸೊ ಶಪಥ ಮಾಡಿದ್ದ ತಮ್ಮ ರೌಡಿ ಪ್ರಶಾಂತ್ ಕೊಂದಿದ್ದ 17 ಮಂದಿ ಆರೋಪಿಗಳ ಬಂಧನ

ಬೆಂಗಳೂರು:
 ಬೆಂಗಳೂರು ಪೂರ್ವದಲ್ಲಿ ಅಣ್ಣನ ಕೊಲೆಗೆ ಸೇಡು ತೀರಿಸಿಕೊಳ್ಳಲು ಒಬ್ಬ  ತೀರ್ಮಾನಿಸಿದ್ದ.‌ ಕಿಡ್ನಾಪ್ ಪ್ರಕರಣದಲ್ಲಿ ಜೈಲಿಗೋಗಿ ಬಂದಿದ್ದ ಈತ ಭೀಕರವಾಗಿ ಕೊಲೆಯಾಗಿ ಹೋಗಿದ್ದ. ದ್ವೇಷದ ಕೊಲೆಗೆ ಕಾರಣವಾಗಿದ್ದ 17 ಜನ ಈಗ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುವಂತೆ ಮಾಡಿದ್ದಾರೆ.
ಇದೇ ಫೆಬ್ರವರಿ 27ರ ರಾತ್ರಿ ಬಾಣಸವಾಡಿಯ ಕಲ್ಯಾಣನಗರದಲ್ಲಿ ಪ್ರಶಾಂತ್ ಎಂಬ ರೌಡಿಶೀಟರ್ ನನ್ನು ಶಿವರಾಜ್ ಮತ್ತು ಲೋಕೇಶ್ ಟೀಂ ಭೀಕರವಾಗಿ ಕೊಂದಿತ್ತು. ಮಾರತ್ ಹಳ್ಳಿ ರೌಡಿಶೀಟರ್ ಪ್ರಶಾಂತ್ ಅಣ್ಣನನ್ನು ಇದೇ ಆರೋಪಿಗಳು ವಾಟರ್ ಬಿಜಿನೆಸ್ ಹಿನ್ಲೆಯಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ಕೊಂದಿದ್ದರು. ಅಣ್ಣ ವಿನೋದ್ ನನ್ನು ಕೊಂದಿದ್ದ ಶಿವರಾಜ್ ಮತ್ತು ಲೋಕೇಶ್ ನ್ನು ಮುಗಿಸುವುದಾಗಿ ಪ್ರಶಾಂತ್ ಪ್ರತಿಜ್ಞೆ ಮಾಡಿದ್ದ.
ಜೊತೆಗೆ ಈಶ್ವರಪ್ಪ ಪಿ.ಎ.ಅಪಹರಣ ಕೇಸ್ ನಲ್ಲಿ ಜೈಲಿಗೋಗಿ ಬಂದಿದ್ದ ಪ್ರಶಾಂತ್.‌ ಜೈಲಿನಿಂದ ಬಂದ ನಂತರ ಪ್ರಶಾಂತ್ ಹವಾ ಜಾಸ್ತಿ ಇತ್ತು. ಇವನನ್ನು ಹಿಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಅರಿತ ಶಿವರಾಜ್ ಮತ್ತು ಲೋಕೇಶ್ ಗ್ಯಾಂಗ್ ಪ್ರಶಾಂತ್ ನನ್ನು ಮುಗಿಸಿದ್ದರು..ಇದೀಗ ಕೊಕೆ ಆರೋಪಿಗಳಾದ ಲೋಕೇಶ್, ಸ್ಟಾಲೀನ್, ಪ್ರವೀಣ್, ಬಸವರಾಜ್, ಕಿಶೋರ್ ಸೇರಿದಂತೆ ಒಟ್ಟು 17 ಜನ ಆರೋಪಿಗಳಿಗೆ ಬಾಣಸವಾಡಿ ಪೊಲೀಸರು ಜೈಲಿನ‌ ಮುಖ ತೋರಿಸಿದ್ದಾರೆ.
ಕೊಲೆಯಾದ ಎರಡು ದಿನಗಳಲ್ಲಿ ಮಾರತ್ ಹಳ್ಳಿ ಇನ್ ಸ್ಪೆಕ್ಟರ್ ಕೊಲೆಯ ಪ್ರಮುಖ ಆರೋಪಿ ಲೋಕೇಶ್ ಕಾಲಿಗೆ ಗುಂಡುಹಾರಿಸಿ ಬಂಧಿಸಿದ್ದರು.ಮಾರತ್ ಹಳ್ಳಿ, ಹೆಚ್ಎಎಲ್ ಮತ್ತು ಬಾಣಸವಾಡಿ ಪೊಲೀಸರು ಒಟ್ಟು 17 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ಪ್ರಮುಖ ಆರೋಪಿ ಶಿವರಾಜ್ ಶೂಟೌಟ್ ಬೆದರಿಕೆಯಲ್ಲಿ ತಲೆ ಮರೆಸಿಕೊಂಡಿದ್ದಾರೆ. ಈತನ ಬಂಧನಕ್ಕೆ ಬಾಣಸವಾಡಿ ಪೊಲೀಸರು ಬಲೆ ಬೀಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.