ETV Bharat / state

ಬೆಂಗಳೂರು: ಮಾರಕಾಸ್ತ್ರದಿಂದ ಬೆದರಿಸಿ ಸಾರ್ವಜನಿಕರಿಂದ ಹಣ ವಸೂಲಿ; ರೌಡಿ ಬಂಧನ - ಆರ್​ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿ

ಮಾರಕಾಸ್ತ್ರ ಹಿಡಿದು ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ರೌಡಿಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಾರ್ವಜನಿಕರನ್ನ ಬೆದರಿಸಿ ವಸೂಲಿ  ರೌಡಿ ಆಸಾಮಿಯ ಬಂಧನ  rowdy who was extorting money  extorting money by threatening  threatening the public  ಬೆಂಗಳೂರು ಪೊಲೀಸರು  ಇಮ್ರಾನ್ ಅಲಿಯಾಸ್ ಬೊಡ್ಕೆ  ಆರ್​ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿ  ನೇಚರ್ ಬಾರ್ ಅಂಡ್ ರೆಸ್ಟೋರೆಂಟ್‌
ಸಿಸಿಟಿವಿ ದೃಶ್ಯ
author img

By ETV Bharat Karnataka Team

Published : Nov 27, 2023, 12:16 PM IST

Updated : Nov 27, 2023, 5:19 PM IST

ಸಿಸಿಟಿವಿ ವಿಡಿಯೋ ಮತ್ತು ಪ್ರಕರಣದ ಕುರಿತು ಪೊಲೀಸ್​ ಅಧಿಕಾರಿಯ ಹೇಳಿಕೆ

ಬೆಂಗಳೂರು: ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ರೌಡಿ ಸೇರಿದಂತೆ ನಾಲ್ವರನ್ನು ಆರ್.​ಟಿ.ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನೆಲಮಂಗಲದ ಇಮ್ರಾನ್ ಅಲಿಯಾಸ್ ಬೊಡ್ಕೆ (29), ಮೋಹಿತ್ (24), ಅರ್ಫಾತ್ ಅಹಮದ್ (25) ಹಾಗೂ ಸೈಯ್ಯದ್ ಮಾಜ್ (22) ಎಂದು ಗುರುತಿಸಲಾಗಿದೆ.

ನವೆಂಬರ್ 21ರಂದು ರಾತ್ರಿ ಆರ್.​ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಿಣ್ಣೂರು ಮುಖ್ಯರಸ್ತೆಯಲ್ಲಿರುವ ನೇಚರ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ನುಗ್ಗಿದ್ದ ಆರೋಪಿ ಮತ್ತು ಆತನ ಸಹಚರರು, ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 40 ಸಾವಿರ ರೂಪಾಯಿವರೆಗೂ ಸುಲಿಗೆ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿ ಬೀಡಾ ಅಂಗಡಿ ಮಾಲೀಕನ ಮೇಲೂ ಹಲ್ಲೆ ಮಾಡಿದ್ದರು. ಅಷ್ಟೇ ಅಲ್ಲದೇ ಮೋದಿ ರಸ್ತೆ, ಹುಸೇನಾ ಮಸೀದಿ, ಪಿಎನ್​ಟಿ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋಗಳನ್ನು ಜಖಂಗೊಳಿಸಿದ್ದರು. ಆರೋಪಿ ಮತ್ತವನ ಕಡೆಯವರ ಕೃತ್ಯ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಸಂತ್ರಸ್ತರು ಪೊಲೀಸರಿಗೆ​ ದೂರು ಸಲ್ಲಿಸಿದ್ದರು.

ಇದಕ್ಕೂ ಮುನ್ನ ಆರ್.​ಟಿ.ನಗರ ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಬಂಧಿತ ಇಮ್ರಾನ್, ಆರ್.​ಟಿ.ನಗರ ಹಾಗೂ ಜೆ.ಸಿ.ನಗರ ಠಾಣಾ ವ್ಯಾಪ್ತಿಯ ರೌಡಿಯಾಗಿದ್ದು, ಕಳೆದ ಆಗಸ್ಟ್‌ನಲ್ಲಿ ಜೆ.ಸಿ.ನಗರ ಪೊಲೀಸರಿಂದ ಬಂಧಿತನಾಗಿದ್ದ.

ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್

ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಪ್ರಕರಣದಲ್ಲಿ ಇಮ್ರಾನ್ (29), ಮೋಹಿತ್ (24), ಅರ್ಫಾತ್ ಅಹಮದ್ (25) ಹಾಗೂ ಸೈಯ್ಯದ್ ಮಾಜ್ (22) ಎಂಬ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತರ ಪೈಕಿ ಇಮ್ರಾನ್ ವಿರುದ್ಧ 31 ಪ್ರಕರಣಗಳಿದ್ದರೆ, ಮೋಹಿತ್ ವಿರುದ್ಧ 1, ಅರ್ಫಾತ್ ಅಹಮದ್ ಮತ್ತು ಸೈಯ್ಯದ್ ಮಾಜ್ ವಿರುದ್ಧ 10 ಪ್ರಕರಣಗಳಿವೆ. ಆರೋಪಿಗಳ ಬಂಧನದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಗೂ ತಮಿಳುನಾಡಿನ ಹೊಸೂರು ಠಾಣೆ ಸೇರಿದಂತೆ ವಿವಿಧೆಡೆ ದಾಖಲಾಗಿದ್ದ 10 ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ 12,500 ರೂ ನಗದು, 4 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್ ತಿಳಿಸಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿದ್ದು, ಪೊಲೀಸರು ಮುಂದಿನ ಕ್ರಮ ಅನುಸರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಮಾರಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಇತ್ತೀಚೆಗೂ ಇಂತಹದ್ದೇ ಘಟನೆ ನಡೆದಿತ್ತು. ನಗರದ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಮಾರಕಾಸ್ತ್ರ ಹಿಡಿದು ಒಂಟಿಯಾಗಿ ಸಂಚರಿಸುವವರು, ಡೆಲಿವರಿ ಬಾಯ್​ಗಳನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಮೊಹಮ್ಮದ್ ಜಬಿ ಹಾಗೂ ಜುನೈದ್ ಎಂಬ ಇಬ್ಬರು ಆರೋಪಿಗಳನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದರು. ಬಂಧಿತ ಆರೋಪಿಗಳು ಡೆಲಿವರಿ ಬಾಯ್ಸ್, ಒಂಟಿಯಾಗಿ ಸಂಚರಿಸುವವರನ್ನು ಗುರಿಯಾಗಿಸಿಕೊಂಡು ಅಡ್ಡ ಹಾಕಿ ಬೆದರಿಸಿ ಅವರ ಮೊಬೈಲ್ ಫೋನ್‌ಗಳು, ಹಣ ಕಸಿದುಕೊಂಡು ಪರಾರಿಯಾಗುತ್ತಿದ್ದರು.

ಕಳೆದ ತಿಂಗಳು 17ರಂದು ಹಲಸೂರು, ರಾಮಮೂರ್ತಿ ನಗರದಲ್ಲಿ ಆರೋಪಿಗಳು ಇದೇ ರೀತಿ ಸುಲಿಗೆ ಮಾಡಿದ್ದರು. ಒಂದೇ ದಿನ ಎರಡು ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿದ್ದ ಆರೋಪಿಗಳ ಪತ್ತೆಗೆ ಪೂರ್ವ ವಿಭಾಗದ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಜಬಿ ವಿರುದ್ಧ ಹತ್ಯೆ, ದ್ವಿಚಕ್ರ ವಾಹನ ಕಳ್ಳತನ, ದರೋಡೆ, ರಾಬರಿ ಸೇರಿದಂತೆ ಹಲವು ಪ್ರಕರಣಗಳಿವೆ. ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 5 ಲಕ್ಷ 50 ಸಾವಿರ ರೂ ಮೌಲ್ಯದ ಮೂರು ದ್ವಿಚಕ್ರ ವಾಹನಗಳು, 1 ಲ್ಯಾಪ್‌ಟಾಪ್, 9 ಮೊಬೈಲ್ ಫೋನ್‌ಗಳು, 1 ಸ್ಮಾರ್ಟ್ ವಾಚ್ ಜಪ್ತಿ ಮಾಡಲಾಗಿತ್ತು.

ಇದನ್ನೂ ಓದಿ: ಭುವನೇಶ್ವರ: 'ವಂದೇ ಭಾರತ್ ಎಕ್ಸ್‌ಪ್ರೆಸ್' ರೈಲಿಗೆ ಕಿಡಿಗೇಡಿಗಳಿಂದ ಕಲ್ಲು, ಕಿಟಕಿ ಗಾಜುಗಳಿಗೆ ಹಾನಿ

Last Updated : Nov 27, 2023, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.