ಬೆಂಗಳೂರು: ಕುಡಿದ ಮತ್ತಿನಲ್ಲಿ ಏಕಮುಖ (ಒನ್ ವೇ) ರಸ್ತೆಯಲ್ಲಿ ಸ್ವಿಫ್ಟ್ ಕಾರು ಚಲಾಯಿಸಿಕೊಂಡು ಬಂದ ಚಾಲಕನೋರ್ವ ಮುಂದೆ ಹೋಗುತ್ತಿದ್ದ ಆಟೋಗೆ ಗುದ್ದಿರುವ ಘಟನೆ ಆನಂದರಾವ್ ಸರ್ಕಲ್ ಬಳಿ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ. ಘಟನೆಯಿಂದ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ರಭಸಕ್ಕೆ ಕಾರು ಮತ್ತು ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಯಿತು.
ಅಂಡರ್‌ಪಾಸ್ ಒಳಗೆ ಸಿಲುಕಿದ ಗೂಡ್ಸ್ ಲಾರಿ: ಚಾಲಕನ ನಿರ್ಲಕ್ಷ್ಯದಿಂದ ನಗರದ ಕೆ.ಆರ್.ಸರ್ಕಲ್ ಬಳಿಯ ಅಂಡರ್‌ಪಾಸ್ ಒಳಗೆ ಗೂಡ್ಸ್ ಲಾರಿ ಸಿಲುಕಿಕೊಂಡು ಕೆಲಕಾಲ ಪರದಾಡಿದ ಘಟನೆಯೂ ನಡೆಯಿತು. ನಾಗಾಲ್ಯಾಂಡ್ ರಾಜ್ಯದ ನೋಂದಣಿ ಹೊಂದಿರುವ ಡಿಎಫ್ಎಫ್ಸಿ ಕಂಪನಿಗೆ ಸೇರಿದ ಲಾರಿ ಇದಾಗಿದ್ದು, ಟಯರ್ ಗಾಳಿ ತೆಗೆದ ಬಳಿಕ ಲಾರಿಯನ್ನು ಅಂಡರ್ ಪಾಸ್ನಿಂದ ಹೊರತರಲಾಯಿತು.
ಇದನ್ನೂ ಓದಿ: ಅಜಾಗರೂಕತೆಯ ಬೈಕ್ ಚಾಲನೆ: ಲಾರಿಯಡಿ ಬಿದ್ದು ಬೈಕ್ ಸವಾರ ಸಾವು- ಸಿಸಿಟಿವಿ ದೃಶ್ಯ