ETV Bharat / state

ಸಿಎಂ ಸ್ಥಾನದಿಂದ ಬಿಎಸ್​ವೈ ಬದಲಾವಣೆ ಮಾಡಿದಲ್ಲಿ ವೀರಶೈವ ಲಿಂಗಾಯತರಿಗೆ ಅವಕಾಶ ನೀಡಬೇಕು: ನ್ಯಾ. ಅಶೋಕ್ ಹಿಂಚಿಗೇರಿ - ಮುಖ್ಯಮಂತ್ರಿ ಆದಂಥವರು ಭ್ರಷ್ಟಾಚಾರ ಮುಕ್ತ

ಯಾವುದೇ ಪಕ್ಷದ ಪರವಾಗಿ ವ್ಯಕ್ತಿ ಪರವಾಗಿ ನಡೆದ ಸಭೆಯಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋದಲ್ಲ. ಎಂಥವರು ಆಗಬೇಕು ಅನ್ನೋದು ಮುಖ್ಯ ಎಂದು ನ್ಯಾ. ಅಶೋಕ್ ಹಿಂಚಿಗೇರಿ ಹೇಳಿದರು.

Retired Judge Ashok Hinchigeri
ನ್ಯಾ. ಅಶೋಕ್ ಹಿಂಚಿಗೇರಿ
author img

By

Published : Nov 1, 2020, 10:12 PM IST

ಬೆಂಗಳೂರು: ಒಂದು ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೆ ವೀರಶೈವ - ಲಿಂಗಾಯತ ಸಮುದಾಯದವರನ್ನೇ ಸಿಎಂ ಮಾಡಬೇಕು. ಅವರು ಕಳಂಕ ರಹಿತ ಭ್ರಷ್ಟಾಚಾರ ಮುಕ್ತರಾಗಿರಬೇಕು ಎಂದು ನಿವೃತ್ತ ನ್ಯಾಯಾಧೀಶ ಅಶೋಕ್ ಹಿಂಚಿಗೇರಿ ತಿಳಿಸಿದ್ದಾರೆ.

ಯಡಿಯೂರಪ್ಪ ನಂತರದ ಭವಿಷ್ಯದ ನಾಯಕನ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ಚರ್ಚೆ ಇಂದು ಸಂಜಯನಗರದ ರಂಗಾಭರಣ ಕಲಾಕೇಂದ್ರದಲ್ಲಿ ನಡೆಯಿತು. ನಿವೃತ್ತ ನ್ಯಾ ಅಶೋಕ್ ಹಿಂಚಿಗೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಜಗದೀಶ್ ಶೆಟ್ಟರ್, ಯತ್ನಾಳ್, ಎಂ. ಬಿ. ಪಾಟೀಲ್ ಹೆಸರುಗಳು ಮುನ್ನಲೆಗೆ ಬಂದವು.

ಸಭೆ ಬಳಿಕ ಮಾತನಾಡಿದ ನಿವೃತ್ತ ನ್ಯಾಯಾಧೀಶ ಅಶೋಕ್ ಹಿಂಚಿಗೇರಿ, ಯಾವುದೇ ಪಕ್ಷದ ಪರವಾಗಿ ವ್ಯಕ್ತಿ ಪರವಾಗಿ ನಡೆದ ಸಭೆಯಲ್ಲ. ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಅನ್ನೋದಲ್ಲ. ಎಂಥವರು ಆಗಬೇಕು ಅನ್ನೋದು ಮುಖ್ಯ ಎಂದರು.

ಮುಖ್ಯಮಂತ್ರಿ ಆದಂಥವರು ಭ್ರಷ್ಟಾಚಾರ ಮುಕ್ತರಾಗಿರಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದವರಾಗಬೇಕು. ಅವರು ಕಾಯಕ ಯೋಗಿಯಾಗಿರಬೇಕು. ಜನರ ಸಮಸ್ಯೆ ಸ್ಪಂದಿಸಬೇಕು ಆದರೆ ಯಡಿಯೂರಪ್ಪ ಬದಲಾವಣೆ ವಿಚಾರದ ಬಗ್ಗೆ ಇಲ್ಲಿ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಮಾಧ್ಯಮಗಳಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನೋಡಿ ಈ ಸಭೆ ಕರೆಯಲಾಗಿದೆ. ನಾವು ಒಂದೇ ಪಕ್ಷದ ಬಗ್ಗೆ ಚರ್ಚೆ ಮಾಡಿಲ್ಲ. ಎಲ್ಲಾ ಪಕ್ಷಗಳಿದ್ದು ಚರ್ಚೆಯಾಗಿದೆ. ಯಾರನ್ನೇ ಆಯ್ಕೆ ಮಾಡಿ ಆದರೆ ಭ್ರಷ್ಟಾಚಾರ ಹಾಗೂ ವಂಶಾಡಳಿತದಿಂದ ದೂರ ಇರುವಂತ ನಾಯಕರನ್ನ ಆಯ್ಕೆ ಮಾಡಿ ಅನ್ನೋದು ನಮ್ಮ ಸಂದೇಶ ಎಂದರು.

ಇದು ಮೊದಲ ಸಭೆ ಮತ್ತೆ 15 ದಿನಗಳ ನಂತರ ಮತ್ತೆ ಸಭೆ ಸೇರುತ್ತಿದ್ದು, ಮುಂದಿನ ಚರ್ಚೆ ನಡೆಸಲಾಗುತ್ತದೆ. ಸಭೆಯಲ್ಲಿ ಕೆಲವರು ಮುಂದಿನ ನಾಯಕರು ಯಾರಾಗಬೇಕು ಅನ್ನೋದ್ರ ಬಗ್ಗೆ ಅವರವರ ಅಭಿಪ್ರಾಯಗಳನ್ನ ವ್ಯಕ್ತಿಪಡಿಸಿದ್ದಾರೆ. ಅದರೆ ಅದನ್ನ ಮಾಧ್ಯಮಗಳ ಮುಂದೆ ಹೇಳಲಾಗುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.