ETV Bharat / state

ಮೇಟಿಗೆ ಸಿದ್ದರಾಮಯ್ಯನವರೇ ಕ್ಲೀನ್ ಚಿಟ್ ನೀಡಿದ್ದರು; ರೇಣುಕಾಚಾರ್ಯ ಕಿಡಿ - ರೇಣುಕಾಚಾರ್ಯ ಲೇಟೆಸ್ಟ್ ನ್ಯೂಸ್

ಕಾಂಗ್ರೆಸ್​​​ ವಿರುದ್ಧ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗುಡುಗಿದ್ದು, ನೈತಿಕತೆ ಬಗ್ಗೆ ಮಾತನಾಡಲು ಕಾಂಗ್ರೆಸ್​​​ಗೆ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಣುಕಾಚಾರ್ಯ
Renukacharya
author img

By

Published : Mar 24, 2021, 12:12 PM IST

ಬೆಂಗಳೂರು: ನೈತಿಕತೆ ಬಗ್ಗೆ ಮಾತನಾಡಲು ಕಾಂಗ್ರೆಸ್​​​ಗೆ ಹಕ್ಕಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನ ಮುಖಂಡರಿಗೆ ಮಾಧ್ಯಮದ ಮೂಲಕ ಬಹಿರಂಗ ಸವಾಲು ಹಾಕುತ್ತೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಸಂತ್ರಸ್ತೆಯೇ ದೂರು ನೀಡಿದ್ದರು. ಆಗ ಸಿದ್ದರಾಮಯ್ಯನವರೇ ಮೇಟಿಗೆ ಕ್ಲೀನ್ ಚಿಟ್ ನೀಡಿದ್ದರು. ಆ ಯುವತಿ ದೂರು ಕೊಟ್ಟಿಲ್ಲ. ವೇಣುಗೋಪಾಲ್ ನಿಮ್ಮ ಪಕ್ಷದ ಉಸ್ತುವಾರಿ ಆಗಿದ್ರೂ ಸರಿತಾ ನಾಯರ್ ಪ್ರಕರಣ ಏನಾಯ್ತು ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದರು.

ಯಾವ ಪುರುಷಾರ್ಥಕ್ಕೆ ಅಹೋರಾತ್ರಿ ಧರಣಿ ಮಾಡುತ್ತೀರಾ, ಕಾಂಗ್ರೆಸ್​ನವರು ಆ ಯುವತಿ ಹಿಂದೆ ನಿಂತು ಷಡ್ಯಂತ್ರ ಮಾಡಿದ್ದಾರೆ. ಆರು ಸಚಿವರ ವಿರುದ್ಧ ಷಡ್ಯಂತ್ರ ನಡೆದಿದೆ. ಹಾಗಾಗಿ ಆ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಕಾಂಗ್ರೆಸ್​ನವರಿಗೆ ಸದನ ನಡೆಸುವ ಇಚ್ಛಾಶಕ್ತಿ ‌ಇಲ್ಲ. ಜನ ಕಾಂಗ್ರೆಸ್​ನವರಿಗೆ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಓದಿ: ಧಾರವಾಡ; ಕಾಂಗ್ರೆಸ್ ಮುಖಂಡನ ಬರ್ತ್​ಡೇ ಪಾರ್ಟಿಯಲ್ಲಿ ಗುಂಡು ಹಾರಿಸಿದ ಗಂಡು! ವಿಡಿಯೋ...

ನಾವು ಮಹಿಳೆಯರನ್ನು ಗೌರವಿಸುತ್ತೇವೆ. ಇವತ್ತಿಗೂ ನಾವು ಭಾರತ ಮಾತೆಗೆ ಜಯಕಾರ ಹಾಕುತ್ತೇವೆ. 130 ಕೋಟಿ ಜನರನ್ನು ಹೊತ್ತಿರೋ ಭೂ ತಾಯಿ. ಇವತ್ತು ಕಣ್ಣು ತಪ್ಪಿಸಿ ಅವರೆಲ್ಲ ಓಡಾಡುತ್ತಿದ್ದಾರೆ. ಮುಂದೆ ಬಂದು ಯುವತಿ ದೂರು ಕೊಡಲಿ ಎಂದರು.

ಯತ್ನಾಳ್ ವಿಚಾರವಾಗಿ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಲ್ಲ. ಅವರು ಬಿಜೆಪಿ ಶಾಸಕರಾಗಿ ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ. ಅವರ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.