ETV Bharat / state

ಬೆಂಗಳೂರಿಗೆ ಐದು ಅತೃಪ್ತ ಶಾಸಕರು ವಾಪಸ್.. ಡಿಕೆಶಿ ಸವಾಲ್ ಸ್ವೀಕರಿಸಿದ ಎಂಟಿಬಿ

ನ್ಯಾಯಾಂಗದ ಮೂಲಕ ನಾವು ಹೋರಾಟ ನಡೆಸುತ್ತೇವೆ.  ನಮಗೆ  ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಅವರು, ಬಿಜೆಪಿಯವರ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ಯಾರ ಸಂಪರ್ಕವೂ ಇಲ್ಲ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಎಂಟಿಬಿ ಹೇಳಿದರು.

ಬೆಂಗಳೂರಿಗೆ ವಾಪಸ್ಸಾದ ಅತೃಪ್ತ ಐವರು ಶಾಸಕರು
author img

By

Published : Jul 29, 2019, 8:37 AM IST

Updated : Jul 29, 2019, 9:23 AM IST

ಬೆಂಗಳೂರು: ಕಳೆದ 21 ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಸ್ಪೀಕರ್ ಅನರ್ಹಗೊಳಿಸಿದ ಐವರು ಅತೃಪ್ತ ಶಾಸಕರ ತಂಡ ಮಧ್ಯರಾತ್ರಿ 12:20 ರ ವೇಳೆ ವಿಮಾನದಲ್ಲಿ ನಗರಕ್ಕೆ ಆಗಮಿಸಿದ್ದಾರೆ. ಭೈರತಿ ಬಸವರಾಜ್, ಮುನಿರತ್ನ, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಜೊತೆಯಲ್ಲಿ ಬಿಜೆಪಿಯ ಆರ್.ಅಶೋಕ್ ಕೂಡ ಇದ್ದರು.

ಈ ವೇಳೆ ಮಾತನಾಡಿದ ಅತೃಪ್ತ ಶಾಸಕ ಎಂಟಿಬಿ ನಾಗರಾಜ್, ನಾವು ಮುಂಬೈನಿಂದ ಐದು ಜನರು ಬಂದಿದ್ದೇವೆ. ಉಳಿದವರಲ್ಲಿ ಕೆಲವರು ದೆಹಲಿಗೆ ಹೋಗ್ತಾರೆ. ಸ್ಪೀಕರ್​ಗೆ ರಾಜೀನಾಮೆ ಕೊಟ್ಟಿದ್ದೆವು. ಅವರು ರಾಜೀನಾಮೆ ಪಡೆಯದೇ, ಅನರ್ಹಗೊಳಿಸಿದ್ದಾರೆ. ನ್ಯಾಯಾಂಗದ ಮೂಲಕ ನಾವು ಹೋರಾಟ ನಡೆಸುತ್ತೇವೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಅವರು, ಬಿಜೆಪಿಯವರ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ ಅವರು, ನಮಗೆ ಯಾರ ಸಂಪರ್ಕವೂ ಇಲ್ಲ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿದರು.

ಬೆಂಗಳೂರಿಗೆ ಐದು ಅತೃಪ್ತ ಶಾಸಕರು ವಾಪಸ್..

ಡಿಕೆ ಶಿವಕುಮಾರ್ ಹೊಸಕೋಟೆ ಕ್ಷೇತ್ರದಲ್ಲಿ ಎದುರಾಗ್ತೀನಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಸವಾಲ್‌ನ ನಾ‌ನು ಸಂತೋಷದಿಂದ ಸ್ವೀಕರಿಸುವೆ. ಅದನ್ನ ಎದುರಿಸಲು ನಾನು ಸಿದ್ಧನಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಜಯ ದೊರಕಿಸಿಕೊಡುತ್ತದೆ. 40 ವರ್ಷಗಳಿಂದ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿದ್ದೇನೆ. ನನಗೆ ಯಾವುದೇ ಭಯವಿಲ್ಲ ಎಂದು ಡಿಕೆಶಿಗೆ ಪರೋಕ್ಷವಾಗಿ ಟಾಂಗ್​ ನೀಡಿದರು.

Intro:KN_BNG_01_29_MLA s_Ambarish_7203301
Slug: ಬೆಂಗಳೂರಿಗೆ ವಾಪಸ್ಸಾದ ಅತೃಪ್ತ ಐವರುವಶಾಸಕರು
ಡಿಕೆಶಿ ಸವಾಲ್ ಸ್ವೀಕರಿಸಿದ ಎಂಟಿಬಿ

ಬೆಂಗಳೂರು: ಕಳೆದ ೨೧ ದಿನಗಳಿಂದ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಿದ್ರು.. ಸ್ಪೀಕರ್ ಅನರ್ಹಗೊಳಿಸಿದ ಐವರು ಅತೃಪ್ತ ಶಾಸಕರ ತಂಡ ಮದ್ಯರಾತ್ರಿ 12:20 ರ ವಿಮಾನದಲ್ಲಿ ಕೆಐಎಎಲ್ ಗೆ ಅಗಮಿಸಿದ್ರು..

ಭೈರತಿ ಬಸವರಾಜ್, ಮುನಿರತ್ನ, ಎಸ್ ಟಿ ಸೋಮಶೇಖರ್. ಶಿವರಾಮ್ ಹೆಬ್ಬಾರ್, ಎಂಟಿಬಿ ನಾಗರಾಜ್ ಜೊತೆಯಲ್ಲಿ ಬಿಜೆಪಿಯ ಆರ್ ಅಶೋಕ್ ಕುಇಡ ಜೊತೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ರು.. ಇದೇ ವೇಳೆ ಅತೃಪ್ತರು ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಲು ನಿರಾಕರಿಸಿ, ಎಲ್ಲವನ್ನೂ ಸುದ್ದಿಗೋಷ್ಠಿಯಲ್ಲಿ ಹೇಳುತ್ತೇವೆಂದು ಬೆಂಗಳೂರಿಗೆ ಹೊರಟರು..

ಇದೇ ಸಂದರ್ಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅತೃಪ್ತ ಶಾಸಕ ಎಂ.ಟಿ ನಾಗರಾಜ್, ನಾವು ಮುಂಬೈನಿಂದ ಐದು ಜನರು ಬಂದಿದ್ದೇವೆ.. ಉಳಿದವರಲ್ಲಿ ಕೆಲವರು ದೆಹಲಿಗೆ ಹೋಗ್ತಾರೆ. ಸ್ಪೀಕರ್ ಗೆ ರಾಜೀನಾಮೆ ಕೊಟ್ಟಿದ್ರಿ, ಅವರು ರಾಜೀನಾಮೆ ಪಡೆಯದೇ, ಅನರ್ಹಗೊಳಿಸಿದ್ದಾರೆ.. ನ್ಯಾಯಾಂಗದ ಮೂಲಕ ನಾವು ಹೋರಾಟ ನಡೆಸುತ್ತೇವೆ.. ಅದೇ ರೀತಿ ನ್ಯಾಯ ಸಿಗುವ ವಿಶ್ವಾಸ ಇದೆ ಎಂದ ಅವರು, ಬಿಜೆಪಿಯವರ ಸಂಪರ್ಕದ ಕುರಿತು ನಮಗೆ ಯಾರ ಸಂಪರ್ಕವೂ ಇಲ್ಲ. ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದರು..

ಇನ್ನು ಡಿಕೆ ಶಿವಕುಮಾರ್ ಹೊಸಕೋಟೆ ಕ್ಷೇತ್ರದಲ್ಲಿ ಎದುರಾಗ್ತಿನಿ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಸವಾಲ್ ನಾ‌ನು ಸಂತೋಷದಿಂದ ಸ್ವೀಕರಿಸುವೆ.. ಬರಲಿ ನಾನು ಸಿದ್ದನಿದ್ದೇನೆ.. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳೇ ನನಗೆ ಜಯ ದೊರಕಿಸಿಕೊಡುತ್ತದೆ.. ೪೦ ವರ್ಷಗಳಿಂದ ಹೋರಾಟ ಮಾಡಿಕೊಂಡು ರಾಜಕೀಯದಲ್ಲಿದ್ದೇನೆ ನನಗೆ ಯಾವುದೇ ಭಯವಿಲ್ಲ ಎಂದರು..Body:NoConclusion:No
Last Updated : Jul 29, 2019, 9:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.