ETV Bharat / state

ಪಿಎಸ್​ಐ ಪರೀಕ್ಷಾ ಅಕ್ರಮ.. ಸಿಐಡಿ ವಿಚಾರಣೆ ವೇಳೆ ಕಣ್ಣೀರಿಟ್ಟ ಫಸ್ಟ್​ ರ‍್ಯಾಂಕ್​​ ರಚನಾ - ಸಿಐಡಿ ವಿಚಾರಣೆ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಚುರುಕುಗೊಳಿಸಿರುವ ತನಿಖಾಧಿಕಾರಿಗಳ ಮುಂದೆ ಟಾಪ್ ರ‍್ಯಾಂಕರ್​ ರಚನಾ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ.

Ranker Rachana is facing interrogation by CID

author img

By

Published : Aug 31, 2022, 4:52 PM IST

ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ಮಹಿಳಾ ವಿಭಾಗದ ಟಾಪರ್ ಆಗಿ ಬಂಧಿತರಾಗಿರುವ ರಚನಾ, ಸದ್ಯ ಸಿಐಡಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ರಚನಾ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು, ವಿಚಾರಣೆ ವೇಳೆ ತಮ್ಮ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾರೆ ಎನ್ನಲಾಗ್ತಿದೆ.

'ನನ್ನ ತಾಯಿ ಓರ್ವ ಟೀಚರ್. ಹೆಣ್ಣುಮಗು ಹುಟ್ಟಿತು ಎಂಬ ಕಾರಣಕ್ಕೆ ನನ್ನ ತಂದೆ ನಮ್ಮನ್ನು ಬಿಟ್ಟು ಹೋದರು. ನಂತರ ನನ್ನನ್ನು ನಮ್ಮ ತಾಯಿ ಗಂಡು ಮಗನ ರೀತಿ ಬೆಳೆಸಿದರು. ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಸಹ ಪಡೆದಿರುವೆ. ಎನ್​ಟಿಪಿಎಸ್​ ಥರ್ಮಲ್ ಪ್ಲಾಂಟ್​​ನಲ್ಲಿ ಕೆಲಸ ಸಹ ಮಾಡುತ್ತಿದ್ದೆ. ಕೆಲಸ ಮಾಡುವಾಗಲೇ ಎರಡು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದೆ. ಈ ವೇಳೆ ಗುರುಬಸವರಾಜ್ ಎಂಬಾತನ ಪರಿಚಯವಾಗಿತ್ತು. ಆತನ ಜೊತೆಗೆ ನಾನು ಪಿಎಸ್ಐ ಪರೀಕ್ಷೆ ಬರೆದಿದ್ದರ ಬಗ್ಗೆ ಹೇಳಿಕೊಂಡಿದ್ದೆ. ಆಗ ಆತ ಎಷ್ಟು ಬರೆದರೂ ಆಗಲ್ಲ.. ತಾನು ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ. ಅಲ್ಲದೆ ಇದಕ್ಕಾಗಿ 35 ಲಕ್ಷ ರೂಪಾಯಿ ಕೊಡಬೇಕು ಎಂದಿದ್ದ'.

ಈ ವೇಳೆ ಅಷ್ಟೊಂದು ಹಣವಿಲ್ಲವೆಂದು ಕೊನೆಗೆ 30 ಲಕ್ಷಕ್ಕೆ ಮಾತುಕತೆ ಮಾಡಿದೆವು. ಸಾಲ ಮಾಡಿಯೇ 15 ಲಕ್ಷ ಹಣ ನೀಡಿದ್ದೆ. ಬಳಿಕ ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಬಂದಿತ್ತು. ಇದಾದ ಕೆಲ ದಿನಗಳ ನಂತರ ಕಲಬುರಗಿಯಲ್ಲಿ ಪಿಎಸ್ಐ ಹಗರಣ ಬೆಳಕಿಗೆ ಬಂದಿತ್ತು. ಈ ವೇಳೆ ಸರ್ಕಾರ ಸಂಪೂರ್ಣ ಪರೀಕ್ಷೆಯನ್ನೇ ರದ್ದು ಮಾಡಿತು. ನಾವು ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಮಾಡಿದೆವು.

ಈ ಸಂದರ್ಭದಲ್ಲೂ ಸಹ ಬಸವರಾಜ್ ಸಂಪರ್ಕ ಇತ್ತು. ಆಗ ಬೆಳಕಿಗೆ ಬಂದಿರೋದು ಕಲಬುರಗಿಯಲ್ಲಿ, ಅಗಿರೋದು ಮಾತ್ರ ಬೆಂಗಳೂರಿನಲ್ಲಿ ಏನಿಲ್ಲಾ ಅಂತ ಹೇಳಿದ್ದರು. ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ‌. ನಂತರ ನಮ್ಮ ಮೇಲೂ ಕೇಸ್ ದಾಖಲಾದಾಗ ಕೇಸ್ ವಜಾ ಮಾಡಿಸಲು ವಕೀಲರ ಮೂಲಕ ಸಂಪರ್ಕ ಮಾಡಿದ್ದೆ. ಇದೇ ಕಾರಣಕ್ಕೆ ನಾನು ಯಾರ ಕೈಗೂ ಸಿಗದಂತೆ ಎಸ್ಕೇಪ್ ಅಗಿದ್ದೆ' ಅಂತ ಸಿಐಡಿ ಅಧಿಕಾರಿಗಳ‌ ಮುಂದೆ ರಚನಾ ಕಣ್ಣೀರು ಹಾಕಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ.

ಇದನ್ನೂ ಓದಿ: ಮನೆಗೆಲಸದಾಕೆಗೆ ಚಿತ್ರಹಿಂಸೆ: ಬಿಜೆಪಿ ಮಾಜಿ ನಾಯಕಿ ಬಂಧನ, 14 ದಿನ ಪೊಲೀಸ್ ಕಸ್ಟಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.