ಬೆಂಗಳೂರು: ಶಾಸಕ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆ ಹಿಂಪಡೆಯುವುದಾಗಿ ನಿನ್ನೆಯೇ ಮಾಧ್ಯಮಗಳಿಗೆ ಸ್ಪಷ್ಪಪಡಿಸಿದ್ದೇನೆ ಎಂದು ಬಿಟಿಎಂ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಪುನರುಚ್ಚಿಸಿದ್ದಾರೆ.
ವಿಧಾನಸೌಧಕ್ಕೆ ಮಗಳು ಸೌಮ್ಯರೆಡ್ಡಿ ಜೊತೆ ಆಗಮಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು ನಿನ್ನೆಯೇ ನನ್ನ ನಿರ್ಧಾರ ಬಗ್ಗೆ ಹೇಳಿದ್ದೇನೆ. ಈ ಬಗ್ಗೆ ಮತ್ತೆ ಮಾತನಾಡುವುದಿಲ್ಲ ಎಂದರು.
ಅತೃಪ್ತರು ಬಿಡುಗಡೆ ಮಾಡಿದ ವಿಡಿಯೊ ಬಗ್ಗೆ ಪ್ರತಿಕ್ರಿಯಿಸಿ, ಅತೃಪ್ತರ ಜೊತೆ ನಾನು ಇದ್ದೆ. ಅವರು ನನ್ನ ಜೊತೆ ಇರಲಿಲ್ಲ. ಅತೃಪ್ತರು ವಿಡಿಯೋ ಬಿಡುಗಡೆ ಮಾಡಿದ ವಿಚಾರ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳಿ ಒಳ ಪ್ರವೇಶಿಸಿದರು.