ETV Bharat / state

ಕೇಂದ್ರದ ಯೋಜನೆಗಳಲ್ಲಿ ಮುಸಲ್ಮಾನರನ್ನು ಹೊರಗಿಟ್ಟಿದ್ದು ತೋರಿಸಿದರೆ ರಾಜಕೀಯ ನಿವೃತ್ತಿ: ರಾಜೀವ್ ಚಂದ್ರಶೇಖರ್ ಸವಾಲು - Asatoma Sadgamaya book release

ಕೇಂದ್ರದ ಯಾವುದೇ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ಪ್ರತಿಯೊಂದು ಯೋಜನೆಗಳು ಎಲ್ಲ ಸಮುದಾಯದ ಜನರಿಗೆ ಸಮಾನವಾಗಿ ತಲುಪಿವೆ. ಯಾವ ಯೋಜನೆಯಿಂದ ಯಾವುದೇ ಸಮುದಾಯವನ್ನೂ ಹೊರಗಿಟ್ಟಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.

Rajeev Chandrasekhar
ರಾಜೀವ್ ಚಂದ್ರಶೇಖರ್
author img

By

Published : Apr 26, 2023, 4:39 PM IST

ಬೆಂಗಳೂರು: ''ಕೇಂದ್ರ ಸರ್ಕಾರ ಧರ್ಮದ ಆಧಾರದಲ್ಲಿ ಯಾವುದೇ ಯೋಜನೆ ತಂದಿಲ್ಲ. ಕೇಂದ್ರದ ಎಲ್ಲ ಯೋಜನೆಗಳು ಎಲ್ಲ ಸಮುದಾಯಕ್ಕೂ ಸಿಕ್ಕಿವೆ. ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮಾಡಿರುವುದು. ಮುಸಲ್ಮಾನರನ್ನು ಹೊರಗಿಟ್ಟಿರುವುದನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುವುದು'' ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಮುಸ್ಲಿಂ ಮೀಸಲಾತಿ ರದ್ದುಪಡಿಸಿದ್ದನ್ನು ಸಮರ್ಥಿಸಿಕೊಂಡು ಸಂವಿಧಾನ ಬದ್ಧವಾಗಿಲ್ಲದ ಮೀಸಲಾತಿ ರದ್ದುಪಡಿಸಲಾಗಿದೆ. ಆದರೆ, ಅವರಿಗಿರುವ ಸವಲತ್ತುಗಳನ್ನು ತೆಗೆದಿಲ್ಲ. ನಮ್ಮ ಸರ್ಕಾರ ಸಬ್​ ಕಾ ಸಾತ್, ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಎನ್ನುವ ತತ್ವದ ಅಡಿ ಇದೆ. ಮುಸ್ಲಿಂ , ಕ್ರಿಶ್ಚಿಯನ್ ಹಿಂದೂ ಎಲ್ಲ ಧರ್ಮದ ಜನರಿಗೂ ನಮ್ಮ ಸರ್ಕಾರ ಎಲ್ಲ ಸೌಲಭ್ಯ ನೀಡಿದೆ. ಮುಸ್ಲಿಮರಿಗೆ ಅನ್ಯಾಯ ಮಾಡಿತು ಎನ್ನುವುದು ಸುಳ್ಳು ಆರೋಪ. ಆ ರೀತಿ ಹೇಳುವುದು ವಿಪಕ್ಷಗಳ ಕೇವಲ ಪ್ರಚಾರ ಮಾತ್ರ. ಕೇಂದ್ರದ ಯಾವುದೇ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ಎಲ್ಲ ಯೋಜನೆಗಳು ಎಲ್ಲ ಸಮುದಾಯದ ಜನರಿಗೆ ಸಮಾನವಾಗಿ ತಲುಪಿದೆ. ಯಾವ ಯೋಜನೆಯಿಂದ ಯಾವುದೇ ಸಮುದಾಯವನ್ನೂ ಹೊರಗಿಟ್ಟಿಲ್ಲ. ಅಭಿವೃದ್ಧಿ ಯೋಜನೆಗಳಲ್ಲಿ ತಾರತಮ್ಯ ಮಾಡಿಲ್ಲ. ತಾರತಮ್ಯ ಮಾಡಿದ್ದು, ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದರು.

ಭ್ರಷ್ಟಾಚಾರದ ಆರೋಪ ಸುಳ್ಳು -ರಾಜೀವ್ ಚಂದ್ರಶೇಖರ್: ''ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಯಾವುದೇ ಸರ್ವೆ ವರದಿ ಏನೇ ಹೇಳಲಿ, ರಿಯಲ್ ಸರ್ವೆ ವರದಿ ಮೇ 13ಕ್ಕೆ ಬರಲಿದೆ. ಅದರಲ್ಲಿ ನಾವೇ ಗೆದ್ದಿರುತ್ತೇವೆ ಎಂದರು. ಯಾವುದೇ ವಿಷಯ ಇಲ್ಲದ ಕಾರಣಕ್ಕೆ 40 ಪರ್ಸೆಂಟ್ ಆರೋಪ ಮಾಡುತ್ತಿದ್ದಾರೆ. ಯಾವ ಪಕ್ಷ ಲೋಕಾಯುಕ್ತದ ಅಧಿಕಾರ ಮೊಟಕು ಮಾಡಿತು. ಯಾವ ಪಕ್ಷ ಮತ್ತೆ ಲೋಕಾಯುಕ್ತ ಬಲಪಡಿಸಿತು ಎನ್ನುವುದನ್ನು ನೋಡಿದರೆ ಭ್ರಷ್ಟಾಚಾರದ ಆರೋಪ ಸುಳ್ಳು ಎನ್ನುವುದು ಗೊತ್ತಾಗಲಿದೆ. ಪೊಲಿಟಿಕ್ಸ್ ಆಫ್ ಲೈಸ್ ವರ್ಸೆಸ್ ಡೆವಲಪ್ಮೆಂಟ್ ಇಶ್ಯೂ ಇರಿಸಿಕೊಂಡು ಚುನಾವಣೆಗೆ ಹೋಗುತ್ತೇವೆ'' ಎಂದರು.

ಅಸತೋಮ ಸದ್ಗಮಯ ಪುಸ್ತಕ ಬಿಡುಗಡೆ: ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಅಸತೋಮ ಸದ್ಗಮಯ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಪುಸ್ತಕದ ಕುರಿತು ಮಾಹಿತಿ ನೀಡಿದ ರಾಜೀವ್ ಚಂದ್ರಶೇಖರ್, ''ಈ ಅಸತೋಮ ಸದ್ಗಮಯ ರಿಸರ್ಚ್ ಮಾಡಲಾಗಿರುವ ಕಿರುಹೊತ್ತಿಗೆ ಆಗಿದೆ. ಕಾಂಗ್ರೆಸ್ ಪಕ್ಷದ ಹಲವು ಆರೋಪಗಳಿಗೆ ಇದರಲ್ಲಿ ಉತ್ತರ ಇದೆ. ರಾಹುಲ್ ಗಾಂಧಿ ಮತ್ತು ಅವರ ಕೆಲ ಆರೋಪಗಳ ವಿಚಾರಗಳಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬರೀ ಸುಳ್ಳು ಹೇಳುತ್ತಿದೆ. ಅದರ ಆರೋಪಗಳು ಮತ್ತು ಸತ್ಯದ ಬಗ್ಗೆ ಈ ಪುಸ್ತಕದಲ್ಲಿದೆ. ರಾಹುಲ್ ಗಾಂಧಿ ಕೆಲವು ದಿನಗಳ ಹಿಂದೆ ಬಂದು ಹೆಚ್.ಎ.ಎಲ್ ಮುಳುಗುತ್ತಿದೆ ಅಂತ ಹೇಳಿದ್ದರು.

ಆದರೆ, ಹೆಚ್ಎಎಲ್ ಉತ್ತಮವಾಗಿ ಬೆಳೆಯುತ್ತಿದೆ. ಅದರ ಸತ್ಯಾ ಸತ್ಯತೆ ಬಗ್ಗೆ ಇದೆ. ಹಾಗೆಯೇ ಅಮೂಲ್ ಮತ್ತು ನಂದಿನಿ ವಿಚಾರ ಕೂಡ ಇದೆ. ಅವರ ಕೆಲ ಆರೋಪಗಳಿಗೆ ಸಿಎಂ ಬೊಮ್ಮಾಯಿ ತಕ್ಷಣವೇ ಉತ್ತರ ಕೊಟ್ಟಿದ್ದಾರೆ. ಛತ್ತೀಸಗಢ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮಾಡಿದ ಪ್ರಾಮಿಸ್ ಮತ್ತು ಈಡೇರಿಸದ ಭರವಸೆ ಬಗ್ಗೆ ಉಲ್ಲೇಖ ಇದೆ. ರಾಜಸ್ಥಾನ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ವಿಚಾರಗಳ ಸತ್ಯ ಇದೆ. ಡಾ.ಸಮೀರ್ ಅವರು ರಿಸರ್ಚ್ ಮಾಡಿ, ಈ ಪುಸ್ತಕ ಬರೆದಿದ್ದಾರೆ. ಕರ್ನಾಟಕದ ಮತದಾರರು ಈ ಸತ್ಯವನ್ನು ತಿಳಿಯಬೇಕು ಎಂದು ಕಿರುಹೊತ್ತಿಗೆ ತಂದಿರುವುದು'' ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ರಚನೆಯಾಗಿರುವ ಮೀಸಲಾತಿ ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ: ಯೋಗಿ ಆದಿತ್ಯನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.