ETV Bharat / state

ಬೆಂಗಳೂರಲ್ಲಿ ವರುಣಾರ್ಭಟ : 4 ದಿನ ಯೆಲ್ಲೋ ಅಲರ್ಟ್, ಹಲವೆಡೆ ಮರಗಳು ಧರಾಶಾಹಿ

ಶುಕ್ರವಾರ ಬೆಂಗಳೂರಿನ ವಿಶ್ವೇಶ್ವರಯ್ಯಪುರ, ಚಾಮರಾಜಪೇಟೆ, ಆಂಜನೇಯ ದೇವಸ್ಥಾನ, ಯಲಹಂಕ, ಜಯನಗರ, ಜೆ.ಪಿ.ನಗರ, ಮಾರುಕಟ್ಟೆ ಸೇರಿ ಇತರ ಬಡಾವಣೆ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಮಳೆ ಸುರಿದಿತ್ತು. ಇಂದು ಸೇರಿ 4 ದಿನ ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ..

rain-update-yellow-alert-for-four-days-in-bengaluu
ಬೆಂಗಳೂರಲ್ಲಿ ವರುಣಾರ್ಭಟ: 4 ದಿನ ಯೆಲ್ಲೋ ಅಲರ್ಟ್, ಹಲವೆಡೆ ಮರಗಳು ಧರಾಶಾಹಿ
author img

By

Published : Jun 4, 2022, 5:11 PM IST

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕೊಂಚ ಬಿಡುವು ನೀಡಿದ್ದ ಮಳೆ ಮತ್ತೆ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದಿದೆ. ಇಂದು ಸೇರಿದಂತೆ 4 ದಿನ ನಗರದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಹವಾಮಾನ ಇಲಾಖೆಯು ಹಳದಿ ಅಲರ್ಟ್ ಘೋಷಿಸಿದೆ.

ಶುಕ್ರವಾರ ಬೆಂಗಳೂರಿನ ವಿಶ್ವೇಶ್ವರಯ್ಯಪುರ, ಚಾಮರಾಜಪೇಟೆ, ಆಂಜನೇಯ ದೇವಸ್ಥಾನ, ಯಲಹಂಕ, ಜಯನಗರ, ಜೆ.ಪಿ.ನಗರ, ಮಾರುಕಟ್ಟೆ ಸೇರಿ ಇತರ ಬಡಾವಣೆ ಪ್ರದೇಶಗಳಲ್ಲಿ ಗಂಟೆಗಟ್ಟಲೆ ಮಳೆ ಸುರಿದಿತ್ತು. ಕೆಲಸ ಮುಗಿಸಿಕೊಂಡು ಮನೆಗಳಿಗೆ ತೆರಳುವ ಧಾವಂತದಲ್ಲಿದ್ದ ಜನರು ಪರದಾಡುವಂತಾಯಿತು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ಮಳೆಯಲ್ಲೇ ನೆನೆದುಕೊಂಡು ಮನೆಗಳತ್ತ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

26 ಮರಗಳು ಧರೆಗೆ : ನಗರದಲ್ಲಿ ಗುಡುಗು, ಗಾಳಿ ಸಮೇತ ಭರ್ಜರಿ ಮಳೆಗೆ ಬರೋಬ್ಬರಿ 26 ಮರಗಳು ಧರೆಗುರುಳಿವೆ. ರಾಜಾಜಿನಗರ, ಬಸವೇಶ್ವರನಗರ, ಬಿಟಿಎಂ, ಹನುಮಂತನಗರ ಸೇರಿದಂತೆ ನಗರದ ವಿವಿಧೆಡೆ 26 ಮರಗಳು ನೆಲಕ್ಕುರುಳಿವೆ. ಈ ಪೈಕಿ ಮೂರು ಮರಗಳ ರೆಂಬೆಗಳು ಮುರಿದು ಬಿದ್ದಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಹಲವೆಡೆ ಕಾಮಗಾರಿ : ಮಳೆ ನೀರು ರಸ್ತೆಯಲ್ಲಿ ಅಧಿಕವಾಗಿ ಹರಿಯುತ್ತಿದ್ದ ಕಾರಣ ಕೆಲ ದ್ವಿಚಕ್ರ ವಾಹನಗಳು ನೀರಿನಲ್ಲೇ ಕೆಟ್ಟು ನಿಂತಿದ್ದವು. ಸ್ಥಳೀಯರೇ ವಾಹನಗಳನ್ನು ತಳ್ಳಿ ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು. ಚಿಕ್ಕಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ, ಕೆಂಪೇಗೌಡ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಅಲ್ಲೆಲ್ಲ ರಸ್ತೆ ಅಗೆದಿದ್ದರಿಂದ ಗುಂಡಿಗಳು ಬಿದ್ದಿವೆ. ರಾತ್ರಿ ಸುರಿದ ನೀರು ಗುಂಡಿಯಲ್ಲಿ ನಿಂತುಕೊಂಡಿದ್ದ ದೃಶ್ಯ ಕಂಡು ಬಂತು.

ಇದನ್ನೂ ಓದಿ: ತುಮಕೂರಿನಲ್ಲಿ ಭಾರಿ ಮಳೆ..ಧರೆಗುರುಳಿದ ಅಡಕೆ, ತಂಗಿನ ಮರಗಳು..ರೈತರು ಕಂಗಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.