ETV Bharat / state

ರಾಗಿಣಿ ಭೇಟಿಯಾಗಲು ಬಂದ ಕುಟುಂಬಸ್ಥರು... ಮತ್ತೊಂದೆಡೆ ತನಿಖೆಗೆ ರೆಡಿಯಾದ ಸಿಸಿಬಿ - ಸ್ಯಾಂಡಲ್​ವುಡ್ ಡ್ರಗ್ಸ್​ ಮಾಫಿಯಾ

ಮಹಿಳಾ ಸಾಂತ್ವನ ಕೇಂದ್ರದಲ್ಲರುವ ನಟಿ ರಾಗಿಣಿಯನ್ನು ಭೇಟಿಯಾಗಲು ಅವರ ತಾಯಿ ಮತ್ತು ಸಹೋದರ ಆಗಮಿಸಿದ್ದಾರೆ.

Ragini dwivedi family came to meet her
ರಾಗಿಣಿ ಭೇಟಿಯಾಗಲು ಬಂದ ಕುಟುಂಬಸ್ಥರು
author img

By

Published : Sep 5, 2020, 10:59 AM IST

ಬೆಂಗಳೂರು: ರಾಗಿಣಿಯನ್ನ ಎಲ್ಲಿ ವಿಚಾರಣೆ ನಡೆಸಬೇಕು ಎಂಬ ಗೊಂದಲ ತನಿಖಾಧಿಕಾರಿಗಳಲ್ಲಿ ಎದ್ದಿದೆ. ಯಾಕಂದ್ರೆ ಸದ್ಯ ಸಿಸಿಬಿ ಕಚೇರಿಯಲ್ಲಿ ರಾಗಿಣಿ ಆಪ್ತ ರವಿಶಂಕರ್, ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ಮತ್ತೋರ್ವ ಬಂಧಿತ ವೀರೆನ್ ಖನ್ನಾ ವಿಚಾರಣೆ ನಡೆಯುತ್ತಿದೆ. ಹೀಗಾಗಿ FSL ಕಚೇರಿಯಲ್ಲೋ ಅಥವಾ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸೋದ ಅನ್ನೋ ಗೊಂದಲ ಎದ್ದಿದೆ.

ನಿನ್ನೆ ರಾಗಿಣಿ ಮನೆ ಮೇಲೆ ದಾಳಿ ಮಾಡಿದಾಗ ತನಿಖೆಗೆ ಬೇಕಾದ ಬಹುತೇಕ ವಸ್ತುಗಳು ಪತ್ತೆಯಾಗಿದ್ದವು. ಈ ವೇಳೆ ತನಿಖಾಧಿಕಾರಿಗಳು ಕೂಡ ಮನೆಯಲ್ಲಿ ಜಪ್ತಿಯಾದ ವಸ್ತು ಯಾವುದು ಎಂದು ಹೇಳಲು ಸಾಧ್ಯವಿಲ್ಲವೆಂದು ತಿಳಿಸಿದ್ರು. ನಿನ್ನೆ ದಾಳಿ ವೇಳೆ ಮತ್ತಷ್ಟು ಶೋಧ ಮಾಡೋದು ಬಾಕಿ ಇತ್ತು. ಹೀಗಾಗಿ ರಾಗಿಣಿಯನ್ನ ಮನೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡಬೇಕಾ.? ಅಥವಾ ಎಫ್​ಎಸ್​ಎಲ್​ಗೆ ಕರೆದೊಯ್ಯಬೇಕಾ ಎಂಬುದರ ಬಗ್ಗೆ ಅದಿಕಾರಿಗಳು 11 ಗಂಟೆಯ ಒಳಗಡೆ ನಿರ್ಧಾರ ಮಾಡಲಿದ್ದಾರೆ.

‌ಮತ್ತೊಂದೆಡೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಾಗಿಣಿ ಇರುವ ಕಾರಣ ರಾಗಿಣಿ ಪೋಷಕರು ರಾತ್ರಿ ಕೂಡ ಆಗಮಿಸಿದ್ರು. ಈ ವೇಳೆ ಪೊಲೀಸರು ಪೋಷಕರ ಭೇಟಿಗೆ ಅನುಮತಿ ಕೊಟ್ಟಿರಲಿಲ್ಲ. ಮುಂಜಾನೆ ರಾಗಿಣಿ‌ ತಾಯಿ ಹಾಗೂ ಸಹೋದರ ಒಂದು ಬ್ಯಾಗ್, ಬಟ್ಟೆಯನ್ನ ಕೊಡಲು ಬಂದಿದ್ದಾರೆ. ಸದ್ಯ ಪೊಲೀಸರು ಪೋಷಕರನ್ನ ಒಳಗಡೆ ಬಿಟ್ಟಿದ್ದಾರೆ.

ರಾಗಿಣಿ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಪಕ್ಕಾ‌ ಮಾಹಿತಿ ಸಿಸಿಬಿ ಪೊಲೀಸರಲ್ಲಿದ್ದು, ಇಂದು ಡ್ರಗ್ಸ್​ ಮಾಫಿಯಾದ ಬಗ್ಗೆ ರಾಗಿಣಿಗೆ ಪ್ರಶ್ನೆಗಳ ಸುರಿಮಳೆ ಕಾಡಲಿದೆ. ರಾಗಿಣಿ ಆಪ್ತ ರವಿಶಂಕರ್ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಪಾರ್ಟಿಯಲ್ಲಿ ಮದ್ಯದ ಜೊತೆ ಡ್ರಗ್ಸ್ ತಗೋಳ್ತಿದ್ರು ಅನ್ನೋ ಆರೋಪ ಕೂಡ ಮಾಡಿದ್ದಾರೆ. ಹೀಗಾಗಿ ರವಿಶಂಕರ್ ಹೇಳಿಕೆ ಆಧರಿಸಿ ಡ್ರಗ್ಸ್​ ಪೆಡ್ಲರ್​ಗಳ ನಂಟಿನ ಬಗ್ಗೆ ‌ಇಂದು ರಾಗಿಣಿ ವಿಚಾರಣೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.