ಬೆಂಗಳೂರು: ಸೋಮವಾರ (ನಾಳೆ) ಯಶವಂತಪುರ ಕ್ಷೇತ್ರದ ಉಪಸಮರದ ಮತ ಎಣಿಕೆಗಾಗಿ ಮೈಸೂರು ರಸ್ತೆಯ ಆರ್.ವಿ.ಕಾಲೇಜಿನಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಬೆಳಗ್ಗೆ 8 ಗಂಟೆಯಿಂದ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ.
ಮತಎಣಿಕೆ ಕಾರ್ಯಕ್ಕಾಗಿ 21 ಮೇಜುಗಳನ್ನು ಬಳಸಲಾಗುತ್ತಿದೆ. ಕ್ಷೇತ್ರದಲ್ಲಿ 461 ಮತಗಟ್ಟೆಗಳಿದ್ದು ಕೌಂಟಿಂಗ್ 22 ಸುತ್ತುಗಳಲ್ಲಿ ನಡೆಯಲಿದೆ. ಸುಮಾರು 100 ಜನ ಸಿಬ್ಬಂದಿ, ಸಹಾಯಕ್ಕಾಗಿ ಡಿ ಗ್ರೂಪ್ ನೌಕರರು, ಡಾಟಾ ಎಂಟ್ರಿಗೆ 5 ಜನ ಕರ್ತವ್ಯ ನಿರ್ವಹಿಸಲಿದ್ದಾರೆ. ಒಟ್ಟು 800 ಪೊಲೀಸ್ ಸಿಬ್ಬಂದಿ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ನವೀನ್ ಜೋಸೆಫ್ ತಿಳಿಸಿದರು.