ETV Bharat / state

ಅಧಿಕಾರದಲ್ಲಿದ್ದಾಗ ಪಕ್ಷಾಂತರ ಆದ 15 ಜನರನ್ನೇ ಕಾಂಗ್ರೆಸ್​ಗೆ ತಡೆಯಲು ಆಗಿಲ್ಲ: ಇನ್ನೂ ಈಗ ಸಾಧ್ಯವೇ.. ಅಶೋಕ್​ ಪ್ರಶ್ನೆ - ETV Bharath Kannada

ನಮ್ಮ ಸಂಪರ್ಕದಲ್ಲಿರುವ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅಂದು ಕಾಂಗ್ರೆಸ್​ ಚಿನ್ಹೆಯಿಂದ ಗೆದ್ದ 15 ಜನ ಪಕ್ಷಾಂತರ ಮಾಡುವಾಗಲೇ ತಡೆಯಲಾಗಲಿಲ್ಲ. ಇನ್ನು ಈಗ ತೆಡೆಯಲು ಹೇಗೆ ಸಾಧ್ಯವೇ ಎಂದು ಕಂದಾಯ ಸಚಿವ ಆರ್ ಅಶೋಕ್ ಪ್ರಶ್ನಿಸಿದ್ದಾರೆ.

r-ashoka-statement-on-defection-form-congress
ಆರ್ ಅಶೋಕ್
author img

By

Published : Dec 12, 2022, 1:11 PM IST

ಅಧಿಕಾರದಲ್ಲಿದ್ದಾಗ ಪಕ್ಷಾಂತರ ಆದ 15 ಜನರನ್ನೇ ಕಾಂಗ್ರೆಸ್​ಗೆ ತಡೆಯಲು ಆಗಿಲ್ಲ, ಇನ್ನೂ ಈಗ ಸಾದ್ಯ ಇದೆಯಾ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟಬೇಕು, ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತ ಜಾರಿಯಾಗಿದ್ದಾಗಿದೆ. ಹೀಗಾಗಿ ಕಾಂಗ್ರೆಸ್ ಮುಳುಗುವ ಹಡಗಿನಂತಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಬೊಮ್ಮನಹಳ್ಳಿಯಲ್ಲಿ ಸಚಿವ ಆರ್ ಅಶೋಕ್ ಸತೀಶ್ ರೆಡ್ಡಿ ಹುಟ್ಟು ಹಬ್ಬ ನಿಮಿತ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ‌ ಜೊತೆ ಮಾತನಾಡಿದರು. ನಮ್ಮ ಸಂಪರ್ಕದಲ್ಲಿರುವ ಹತ್ತು ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಅಂದು ಕಾಂಗ್ರೆಸ್​ ಚಿನ್ಹೆಯಿಂದ ಗೆದ್ದ 15 ಜನ ಪಕ್ಷಾಂತರ ಮಾಡುವಾಗಲೇ ತಡೆಯಲಾಗಲಿಲ್ಲ. ಇನ್ನು ಈಗ ತೆಡೆಯಲು ಹೇಗೆ ಸಾಧ್ಯ ಎಂದರು.

ಮಾತು ಮುಂದುವರೆಸಿ ಈಗಾಗಲೇ ಕಾಂಗ್ರೆಸ್ ಪಕ್ಷದವರಿಗೆ ಭಯ ಶುರುವಾಗಿದೆ. ಎಲ್ಲ ಕಡೆ ಎಎಪಿ ಕಾಂಗ್ರೆಸ್​ನ್ನು ಪಕ್ಷವನ್ನು ಗುಡಿಸಿ ಹಾಕುತ್ತಿದೆ. ಆಮ್ ಆದ್ಮಿ ಕಾಂಗ್ರೆಸ್ ಮತವನ್ನು ಕಬಳಿಸುತ್ತಿದೆ. ಮೋದಿ ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಎಂದರೆ ಕಾಂಗ್ರೆಸ್​ನವರಿಗೆ ಭಯ ಶುರುವಾಗುತ್ತೆ ಎಂದರು.

ಕಾಂಗ್ರೆಸ್​ ಮತ್ತು ಜೆಡಿಎಸ್​ ಅಧಿಕಾರಕ್ಕೆ ಬಂದಾಗ ಕೆಂಪೇಗೌಡ ಪ್ರತಿಮೆ ಏಕೆ ಸ್ಥಾಪನೆ ಮಾಡಲಿಲ್ಲ. ಬಾಯಲ್ಲಿ ಮಾತ್ರ ಒಕ್ಕಲಿಗರ ಮೇಲೆ ಪ್ರೀತಿ ತೋರಿಸುತ್ತಾರೆ. ನಾವು ಒಕ್ಕಲಿಗರ ಅಭಿವೃದ್ಧಿ ಪ್ರಾಧಿಕಾರ ಮಾಡಿ ಬಡವರಿಗೆ ಸಹಕಾರ ಮಾಡಿದ್ದೇವೆ. ಅಧಿಕಾರದಲ್ಲಿದ್ದಾಗ ಎರಡು ಪಕ್ಷಗಳು ಆ ಸುಮದಾಯಕ್ಕೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ದಿಲ್ಲಿಗೆ ತೆರಳಿದ ಕೈ ನಾಯಕರು: ರಾತ್ರಿಯೇ ವಾಪಸ್ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.