ETV Bharat / state

ಆರ್ಥಿಕ ಮುಗ್ಗಟ್ಟು: ಬಿಲ್​​ ಬಾಕಿ ಸುಳಿಯಲ್ಲಿ ಸಿಲುಕಿದ ಲೋಕೋಪಯೋಗಿ ಇಲಾಖೆ!

ಕೊರೊನಾ ಆರ್ಥಿಕ ಸಂಕಷ್ಟ ಹಿನ್ನೆಲೆ ಎಲ್ಲಾ ಇಲಾಖೆಗಳ ಅನುದಾನ ಕಡಿತಗೊಳಿಸಲಾಗಿದ್ದು, ಇದರಿಂದಾಗಿ ಲೋಕೋಪಯೋಗಿ ಇಲಾಖೆ ಕಾರ್ಯ ಸಾಧನೆಗೆ ಹೊಡೆತ ಬಿದ್ದಿದೆ. ಇದಲ್ಲದೆ ಗುತ್ತಿಗೆದಾರರಿಗೆ ನೀಡಬೇಕಿದ್ದ ಬಿಲ್​​​​ಗಳು ಬಾಕಿ ಉಳಿದಿದ್ದು, ಈ ಪಟ್ಟಿ ಬೆಳೆಯುತ್ತಲೇ ಇದೆ.

PWD hits large number of bill dues from financial crisis
ಆರ್ಥಿಕ ಮುಗ್ಗಟ್ಟಿನಿಂದ ಬಿಲ್​​ ಬಾಕಿ ಸುಳಿಯಲ್ಲಿ ಸಿಲುಕಿದ ಲೋಕೋಪಯೋಗಿ ಇಲಾಖೆ
author img

By

Published : Aug 31, 2020, 5:30 PM IST

ಬೆಂಗಳೂರು: ಕಳೆದ ವರ್ಷದ ಮಹಾಮಳೆಯ ಪ್ರಳಯದಿಂದ ರಾಜ್ಯ ಚೇತರಿಸಿಕೊಳ್ಳುತ್ತಿರುವಾಗಲೇ ಈ ಬಾರಿ ಮತ್ತೆ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ನೆರೆಯ ಹೊಡೆತಕ್ಕೆ ಹಾನಿಯಾಗಿರುವ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿಗೆ ಹಣ ಹೊಂದಿಸುವುದೇ ಲೋಕೋಪಯೋಗಿ ಇಲಾಖೆಗೆ ಅಸಾಧ್ಯ ಎಂಬಂತಾಗಿದೆ. ಈ ನಡುವೆ ಹಣವಿಲ್ಲದೆ ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ‌ ಬಿಲ್ ಮೊತ್ತವೇ ಬೆಟ್ಟದಷ್ಟಿದೆ.

ಕಳೆದ ವರ್ಷದ ಮಹಾ‌ಮಳೆಗೆ ಅತಿ ಹೆಚ್ಚು ನಷ್ಟ ಅನುಭವಿಸಿರುವ ಇಲಾಖೆಗಳ ಪೈಕಿ ಲೋಕೋಪಯೋಗಿ ಇಲಾಖೆ ಮೊದಲಿಗನಾಗಿತ್ತು. ಅಪಾರ ಪ್ರಮಾಣದ ರಸ್ತೆ, ಸೇತುವೆಗಳು ಹಾನಿಗೊಳಗಾಗಿದ್ದು, ಅವುಗಳ ದುರಸ್ತಿ ಕಾಮಗಾರಿಗೆ ಹಣಹೊಂದಿಸುವಲ್ಲೇ ಬೆವರಿಳಿಸಿತ್ತು.

ರಸ್ತೆ, ಸೇತುವೆ ದುರಸ್ತಿ ಕಾಮಗಾರಿ ಸ್ಥಿತಿಗತಿ

ಕಳೆದ ವರ್ಷ ಮಹಾಮಳೆಗೆ ರಾಜ್ಯಾದ್ಯಂತ ಒಟ್ಟು 2,091 ಕಿ.ಮೀ ರಸ್ತೆ ಹಾನಿಗೊಳಗಾಗಿತ್ತು. ಅಂದರೆ ಅಂದಾಜು 388.14 ಕೋಟಿ ರೂ. ಮೌಲ್ಯದ ರಸ್ತೆಗಳು ಹಾನಿಗೀಡಾಗಿದ್ದವು.

PWD hits large number of bill dues from financial crisis
ಲೋಕೋಪಯೋಗಿ ಇಲಾಖೆ ಕೈಗೊಂಡ ಕಾಮಗಾರಿ ವಿವರ

ಅದೇ ನೆರೆಗೆ ಒಟ್ಟು 669 ಸೇತುವೆಗಳು ಕೊಚ್ಚಿ ಹೋಗಿದ್ದವು‌. ಒಟ್ಟು 139.06 ಕೋಟಿ ರೂ. ಸೇತುವೆಗಳು ನಾಮಾವಶೇಷವಾಗಿದ್ದವು. ಅನುದಾನದ ಕೊರತೆಯ ಮಧ್ಯೆ ಲೋಕೋಪಯೋಗಿ ಇಲಾಖೆಗೆ ಈ ಅಪಾರ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ ಕಾಮಗಾರಿ ಕೈಗೊಳ್ಳುವ ಅನಿವಾರ್ಯತೆ ಇತ್ತು. ಹೀಗಾಗಿ ಅಳೆದುತೂಗಿ ಹಣ ಹೊಂದಿಸಿ ದುರಸ್ತಿ ಕಾಮಗಾರಿಯನ್ನು ಇಲಾಖೆ ಕೈಗೊಂಡಿದೆ. ಈ ಪೈಕಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ ಹಲವೆಡೆ ಕಾಮಗಾರಿಗಳು ಅಪೂರ್ಣವಾಗಿವೆ.

ಲೋಕೋಪಯೋಗಿ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ದಕ್ಷಿಣ ವಲಯದಲ್ಲಿ ಕಳೆದ ವರ್ಷ ಹಾನಿಗೀಡಾದ ಪ್ರವಾಹಕ್ಕೆ ಹಾನಿಗೀಡಾದ 164 ರಸ್ತೆ ದುರಸ್ತಿ ಕಾಮಗಾರಿಗಳ‌ ಪೈಕಿ 30 ಕಾಮಗಾರಿ ಅಪೂರ್ಣವಾಗಿವೆ. ಅದೇ ಉತ್ತರ ವಲಯದಲ್ಲಿನ ಹಾನಿಗೊಳಗಾದ 505 ರಸ್ತೆ ದುರಸ್ತಿ ಕಾಮಗಾರಿಗಳ ಪೈಕಿ 14 ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.

ಇತ್ತ ಈಶಾನ್ಯ ವಲಯದಲ್ಲಿನ 34 ಕಾಮಗಾರಿಗಳ ಪೈಕಿ ಎಲ್ಲವನ್ನೂ ಪೂರ್ಣಗೊಳಿಸಲಾಗಿದೆ. ಕೇಂದ್ರ ವಲಯದಲ್ಲಿನ 483 ದುರಸ್ತಿ ಕಾಮಗಾರಿಗಳ ಪೈಕಿ 32 ಕಾಮಗಾರಿಗಳು ಅಪೂರ್ಣವಾಗಿ ಉಳಿದುಕೊಂಡಿವೆ.

ಸೇತುವೆ ಕಾಮಗಾರಿಗಳಲ್ಲಿ ಬಹುತೇಕ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಒಟ್ಟು ಹಾನಿಗೊಳಗಾದ 669 ಸೇತುವೆಗಳಲ್ಲಿ 19 ಸೇತುವೆ ದುರಸ್ತಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಬೆಟ್ಟದಷ್ಟು ಮೊತ್ತದ ಬಿಲ್ ಬಾಕಿ

ದಕ್ಷಿಣ ವಲಯದಲ್ಲಿ ಕಳೆದ ಬಾರಿಯ ನೆರೆ ಹಾನಿ ರಸ್ತೆಗಳ ದುರಸ್ತಿ ಕಾಮಗಾರಿಗೆ 60.18 ಕೋಟಿ ರೂ. ತಗುಲಿದೆ. ಈ ಪೈಕಿ 41.36 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಇನ್ನು ಉತ್ತರ ವಲಯದಲ್ಲಿ ರಸ್ತೆ ದುರಸ್ತಿ ಕಾಮಗಾರಿಗಾಗಿ 104.74 ಕೋಟಿ ರೂ. ವೆಚ್ಚವಾಗಿದ್ದು, ಈ ಪೈಕಿ 51.89 ಕೋಟಿ ರೂ. ಹಣವನ್ನು ಗುತ್ತಿಗೆದಾರರಿಗೆ ನೀಡಲಾಗದೆ ಬಾಕಿ ಉಳಿಸಿಕೊಂಡಿದೆ.

ಈಶಾನ್ಯ ವಲಯದಲ್ಲಿ ರಸ್ತೆ ದುರಸ್ತಿಗಾಗಿ 12 ಕೋಟಿ ರೂ. ವೆಚ್ಚವಾಗಿದ್ದು, 3.91 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಇನ್ನು ಕೇಂದ್ರ ವಲಯದಲ್ಲಿ 110.13 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಈ ಪೈಕಿ 26.64 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ. ಒಟ್ಟು 302.19 ಕೋಟಿ ವೆಚ್ಚದ ಕಾಮಗಾರಿಯಲ್ಲಿ 126.62 ಕೋಟಿ ರೂ. ಮೊತ್ತದ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದೆ.

ಅದೇ ರೀತಿ ಸೇತುವೆಗಳ ದುರಸ್ತಿ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಇಲ್ಲಿಯವರೆಗೆ ಸುಮಾರು 121 ಕೋಟಿ ರೂ. ವ್ಯಯಿಸಿದೆ. ಈ ಪೈಕಿ 55.70 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ.

5,000 ಕೋಟಿ ರೂ. ಬಿಲ್ ಬಾಕಿ

ಆರ್ಥಿಕ ಸಂಕಷ್ಟದಲ್ಲಿರುವ ಲೋಕೋಪಯೋಗಿ ಇಲಾಖೆ ಸದ್ಯ ಬಿಲ್​ ಬಾಕಿ ಸುಳಿಯಲ್ಲಿ ಸಿಲುಕಿದೆ. ಕಳೆದ ಎರಡು ವರ್ಷಗಳಲ್ಲಿ ಏರುಗತಿಯಲ್ಲೇ ಇರುವ ಬಾಕಿ ಬಿಲ್ ಮೊತ್ತ ಸದ್ಯ ಸುಮಾರು 5,000 ಕೋಟಿ ರೂ.ಗೆ ತಲುಪಿದೆ ಎಂದು ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈ ಬಜೆಟ್​​​​ನಲ್ಲಿ ಲೋಕೋಪಯೋಗಿ ಇಲಾಖೆಗೆ 11,463 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಈ ಬಾರಿಯ ಲಾಕ್​​ಡೌನ್ ಹೊಡೆತ ಸರ್ಕಾರದ ಆರ್ಥಿಕ ಲೆಕ್ಕಾಚಾರವನ್ನೇ ಬುಡಮೇಲಾಗಿಸಿದೆ. ಹೀಗಾಗಿ ಎಲ್ಲಾ ಇಲಾಖೆಗಳ ಅನುದಾನ ಕಡಿತಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.