ಬೆಂಗಳೂರು: ಇಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ. ಈ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರೋ ಪುನೀತ್ ಸಮಾಧಿಗೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮೂಲದ ಕುಟುಂಬಸ್ಥರು ಬೃಹತ್ ಗಾತ್ರದ ರುದ್ರಾಕ್ಷಿ ಹಾರಗಳನ್ನು ತಂದಿದ್ದಾರೆ. ನಾವು ಅಪ್ಪು ಅವರನ್ನು ದೇವರೆಂದೇ ಭಾವಿಸುತ್ತೇವೆ. ಹಾಗಾಗಿ ರುದ್ರಾಕ್ಷಿ ಮಾಲೆ ಸಿದ್ಧಪಡಿಸಿ ತಂದಿದ್ದೇವೆ. ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಸಮಾಧಿಗೆ ಹಾಕಲು ಮೂರು ರುದ್ರಾಕ್ಷಿ ಹಾರಗಳನ್ನು ತಂದಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು.
ಇದರ ಜೊತೆಗೆ ಅಪ್ಪು ಅಭಿಮಾನಿ ಸಂಘದವರು ಪೂಜಾ ಕುಣಿತದಲ್ಲಿ ಅವರ ಫೋಟೋವಿಟ್ಟು ನೃತ್ಯ ಪ್ರದರ್ಶನ ಮಾಡುವ ಮೂಲಕ ಅಭಿಮಾನ ಮೆರೆದರು. ಪುನೀತ್ ರಾಜ್ಕುಮಾರ್ ಭಾವಚಿತ್ರ, ಕನ್ನಡ ಧ್ವಜ ಹಿಡಿದು ಸಾವಿರಾರು ಅಭಿಮಾನಿಗಳು ಅಪ್ಪ ಸಮಾಧಿ ಬಳಿ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಮೊದಲ ವರ್ಷದ ಪುಣ್ಯಸ್ಮರಣೆ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ದೊಡ್ಮನೆ ಕುಟುಂಬಸ್ಥರು