ETV Bharat / state

ಪಲ್ಸ್ ಪೋಲಿಯೋ ಅಭಿಯಾನ.. ವಸಂತನಗರದಲ್ಲಿ ಚಾಲನೆ ನೀಡಿದ ಬಿಬಿಎಂಪಿ ಆಯುಕ್ತ..! - ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್

ದೇಶಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ ಮಾಡಲಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಲಸಿಕಾ ಅಭಿಯಾನ ನಡೆಸಲಾಗುತ್ತದೆ. ಇಂದು ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೂತ್​ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ನಾಳೆಯಿಂದ ಮನೆ ಬಾಗಿಲಿಗೂ ಹೋಗಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಹೇಳಿದರು.

dot
ಗುಪ್ತಾ
author img

By

Published : Jan 31, 2021, 12:42 PM IST

Updated : Jan 31, 2021, 2:43 PM IST

ಬೆಂಗಳೂರು : ಇಂದಿನಿಂದ 4 ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನವನ್ನು ದೇಶದೆಲ್ಲೆಡೆ ನಡೆಸಲಾಗುತ್ತಿದೆ. ಇಂದು ವಸಂತ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಬಿಬಿಎಂಪಿ ಆಯುಕ್ತರಿಂದ ಚಾಲನೆ

ಈ ವೇಳೆ ಮಾತನಾಡಿದ ಗೌರವ್ ಗುಪ್ತಾ, ದೇಶಾದ್ಯಂತ ಪಲ್ಸ್ ಪೋಲಿಯೋ ಅಭಿಯಾನ ಮಾಡಲಾಗುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಇಂದು ನಗರದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೂತ್​ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ನಾಳೆಯಿಂದ ಮನೆ ಬಾಗಿಲಿಗೂ ಹೋಗಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ. ಒಟ್ಟು 10 ಲಕ್ಷದ 84 ಸಾವಿರ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ. 3,340 ಬೂತ್‌ಗಳು ಸ್ಥಾಪನೆಯಾಗಿದ್ದು, ಇವುಗಳಲ್ಲಿ 400 ತಾತ್ಕಾಲಿಕ ಹಾಗೂ ಮೊಬೈಲ್ ಬೂತ್‌ಗಳನ್ನು ಸ್ಥಾಪಿಸಲಾಗಿದೆ. 14 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದು, ಮೊದಲ ದಿನ ಮಕ್ಕಳು ಬೂತ್‌ಗೆ ಬಂದು ಲಸಿಕೆ ಪಡೆಯಬಹುದು ಎಂದು ಹೇಳಿದರು.
ನಂತರ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಮಾಡಲಾಗುತ್ತಿರುವ ಸ್ಟೀಲ್ ಬ್ರಿಡ್ಜ್ ಕುರಿತು ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಶಿವಾನಂದ ಸರ್ಕಲ್ ಬಳಿ ನಿರ್ಮಿಸಲಾಗುತ್ತಿರುವ ಸ್ಟೀಲ್ ಫ್ಲೈ ಓವರ್‌ಗೆ ಸ್ಟೀಲ್‌ ಮತ್ತು ಫ್ಯಾಬ್ರಿಕೇಶನ್‌ಗಳನ್ನು ಬೇರೆ‌ ಕಡೆಯಿಂದ ತರಿಸಲಾಗುತ್ತಿದೆ.‌ ಕಾಮಗಾರಿ ಕೊನೆಯ ಹಂತದಲ್ಲಿದ್ದು, 2 ತಿಂಗಳಲ್ಲಿ‌ ಪೂರ್ಣಗೊಳ್ಳಲಿದೆ ಎಂದರು.

Last Updated : Jan 31, 2021, 2:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.