ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್ನಲ್ಲಿ ಅವಧಿ ಮೀರಿ ಡಿಸ್ಕೋಥೆಕ್ ಮತ್ತು ಪಬ್ ನಡೆಸುತ್ತಿದ್ದ ಆರೋಪದಡಿ ಮಾಲೀಕ ಸೇರಿ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅವಧಿ ಮುಗಿದಿದ್ದರೂ ಮದ್ಯರಾತ್ರಿ 3 ಗಂಟೆವರೆಗೂ ಪಬ್ ನಡೆಸಲಾಗುತ್ತಿತ್ತು. ಕಳೆದ ಮಾರ್ಚ್ ನಲ್ಲಿಯೇ ಪಬ್ ಪರವಾನಗಿ ಕಾಲಾವಧಿ ಮುಗಿದಿದ್ದರೂ, ನವೀಕರಣ ಮಾಡಿಕೊಳ್ಳದೇ ಅಕ್ರಮವಾಗಿ ಪಬ್ ಮತ್ತು ಡಿಸ್ಕೋಥೆಕ್ ನಡೆಸುತ್ತಿದ್ದರು. ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ಕಾರ್ಯಾಚರಣೆ ನಡೆಸಿದಾಗ 200ಕ್ಕೂ ಹೆಚ್ಚು ಜನ ಡಿಸ್ಕೋಥೆಕ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.
ಪಬ್ ನಲ್ಲಿ ಬಳಸಲಾಗುತ್ತಿದ್ದ ಮ್ಯೂಸಿಕ್ ಪರಿಕರಗಳ ವಶಪಡಿಸಿಕೊಂಡ ಸಿಸಿಬಿ ಪೊಲೀಸರು ಪ್ರಕರಣ ದಾಕಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.