ಬೆಂಗಳೂರು: ಪಿಯು ಉಪನ್ಯಾಸಕರ ಅಹೋರಾತ್ರಿ ಧರಣಿ 8ನೇ ದಿನಕ್ಕೆ ಕಾಲಿಟ್ಟಿದ್ದು, ಇತ್ತ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆಯೂ ಪಿಯು ಬೋರ್ಡ್ ಮುಂದೆ ನಿಂತು ಮೌನವಾಗಿ ಪ್ರತಿಭಟಿಸುತ್ತಿದ್ದಾರೆ.
ನಡುಗಿಸುವ ಚಳಿ, ನಿರಂತರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೇ ಉಪನ್ಯಾಸಕರು ಮುಷ್ಕರ ನಡೆಸುತ್ತಿದ್ದು, ನೇಮಕಾತಿ ಪತ್ರ ಕೊಡುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದಿದ್ದಾರೆ.
ನಾವು ಹೆಣ್ಣು ಮಕ್ಕಳು ಬೀದಿಯಲ್ಲಿ ಇಷ್ಟು ದಿನ ಕೂತಿದ್ದೇವೆ. ಸರ್ಕಾರಕ್ಕೆ ಕೊಂಚವೂ ಮನಕರಗಲಿಲ್ಲವಾ? ಎಂದು ಪ್ರಶ್ನಿಸಿರುವ ಅವರು, ನಮ್ಮ ಮೇಲೆ ಕೊಂಚವಾದರೂ ಕರುಣೆ ತೋರಿಸಿ, ನ್ಯಾಯ ಕೊಡಿಸಿ ಎಂದು ಬೇಡಿಕೊಂಡಿದ್ದಾರೆ.