ETV Bharat / state

'ಮಾ.4 ರವರೆಗೆ ವಿಧಾನಸೌಧದ ಎದುರು ಧರಣಿ, ನಂತರ ಉಪವಾಸ ಸತ್ಯಾಗ್ರಹ' - panchamasaali community

ಮಾರ್ಚ್ 4 ರವರೆಗೆ ಶಾಂತಿಯುತ ಧರಣಿ ನಡೆಸಿ ನಂತರ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರವನ್ನು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಪ್ರಕಟಿಸಿದರು.

protest at bangalore till march 4th
ಮಾರ್ಚ್ 4 ರವರೆಗೆ ವಿಧಾನಸೌಧದ ಎದುರು ಧರಣಿ, ನಂತರ ಉಪವಾಸ ಸತ್ಯಾಗ್ರಹ; ಪಂಚಮಸಾಲಿ ಸಮಾವೇಶದಲ್ಲಿ ನಿರ್ಧಾರ..!
author img

By

Published : Feb 21, 2021, 5:14 PM IST

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ಬೇಡಿಕೆಯನ್ನಿಟ್ಟುಕೊಂಡು ವಿಧಾನಸೌಧದ ಎದುರು ಮಾರ್ಚ್ 4ರವರೆಗೆ ಶಾಂತಿಯುತ ಧರಣಿ ನಡೆಸಿ ನಂತರ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರವನ್ನು ಇಂದಿನ ಪಂಚಮಸಾಲಿ ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಪಂಚಮಸಾಲಿ ಸಮಾವೇಶದಲ್ಲಿ ಕೈಗೊಂಡ ನಿರ್ಧಾರ..!

ಸಮಾವೇಶದ ಅಂತಿಮದಲ್ಲಿ ಮಾತನಾಡಿದ ಶ್ರೀಗಳು, ಪಂಚಮಸಾಲಿ ನಡಿಗೆ ವಿಧಾನಸೌಧದ ಒಳಗೆ ಎನ್ನುವ ಘೋಷಣೆ ಇತ್ತು. ನಂತರ ಸಿಎಂ ಯಡಿಯೂರಪ್ಪ ಟಿಪ್ಪಣಿ ಹೊರಡಿಸಿ ಅಧ್ಯಯನಕ್ಕೆ ಶಿಫಾರಸ್ಸು ಮಾಡಿದರು. ಇಂದು ಸಿಎಂ ನಮ್ಮ ಸಮುದಾಯದ ಶಾಸಕರನ್ನು ಕರೆಸಿಕೊಂಡು ಸ್ವಲ್ಪ ಸಮಯ ಕೊಡಿ ಆತುರ ಬೇಡ, ಸರ್ಕಾರ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದ್ದಾರೆ. ಹಾಗಾಗಿ ನಾನು ಈಗ ಸಂದಿಗ್ಧ ಸ್ಥಿತಿಯಲ್ಲಿದ್ದೇನೆ. ಸಿಸಿ ಪಾಟೀಲ, ಮುರುಗೇಶ್ ನಿರಾಣಿ, ಕರಡಿ ಸಂಗಣ್ಣ ಎಲ್ಲರೂ ಮನವಿ ಮಾಡುತ್ತಿದ್ದಾರೆ. ಹಾಗಾಗಿ ಕಾಲಾವಕಾಶ ನೀಡೋಣ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಆದರೆ ಇದಕ್ಕೆ ಸ್ಥಳದಲ್ಲಿ ನೆರೆದಿದ್ದ ಸಮುದಾಯದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಹೋರಾಟ ಕೈಬಿಡದಂತೆ ಆಗ್ರಹಿಸಲಾಯಿತು. ಸಮುದಾಯದ ಜನರ ಒತ್ತಡಕ್ಕೆ ಮಣಿದ ಶ್ರೀಗಳು ತಮ್ಮ ಅಭಿಪ್ರಾಯ ಹಿಂಪಡೆದು, ಸ್ವಾಗತ ಸಮಿತಿ ಅಧ್ಯಕ್ಷರು, ಸಚಿವರ ಸಲಹೆ ಕೇಳಿ ನಿರ್ಧಾರ ಮಾಡುವುದಾಗಿ ಹೇಳಿದರು. ಸ್ವಾಗತ ಸಮಿತಿ ಅಧ್ಯಕ್ಷ ಯತ್ನಾಳ್​​ಗೆ ಅಭಿಪ್ರಾಯ ತಿಳಿಸಲು ಸೂಚಿಸಿದರು.

ಈ ವೇಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಯತ್ನಾಳ್, ಸರ್ಕಾರದಿಂದ ಇಬ್ಬರು ಸಚಿವರು ಅವರ ಕೆಲಸ ಮಾಡಿದ್ದಾರೆ. ಹೇಗಾದರೂ ಮಾಡಿ ನಮ್ಮನ್ನು ಇಲ್ಲಿಂದ ಎಬ್ಬಿಸಿ ಕಳಿಸಬೇಕು ಎಂದು ಬಂದಿದ್ದಾರೆ. ಆದರೆ ನಾವು ಶಾಂತ ರೀತಿಯಲ್ಲಿ ಧರಣಿ ಮಾಡಬೇಕು ಎಂದು ಮನವಿ ಮಾಡಿದರು.

2ಎ ಮೀಸಲಾತಿ ಪಾದಯಾತ್ರೆ ಸಮಾವೇಶ ಮುಕ್ತಾಯ : ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್​​

ಕಳೆದ ಅಧಿವೇಶನದ ವೇಳೆ ನಾನು ಸಮುದಾಯದ ಬೇಡಿಕೆ ಇಟ್ಟಾಗ ಸಿಎಂ ನನಗೆ ಮೇಲಿನವರ ಬಳಿ ಕೇಳಿ ಅಂದಿದ್ದಾರೆ. ಮೇಲಿನವರ ಬಳಿ ಕೇಳೋದೇನಿಲ್ಲ, ಇವರಿಗೆ ಇಚ್ಛಾಶಕ್ತಿ ಇಲ್ಲ ಅಷ್ಟೇ. ಇಬ್ಬರು ಗುರುಗಳು ಹೋರಾಟದ ನೇತೃತ್ವ ವಹಿಸಿದ್ದಾರೆ. ನಾವು ಧರಣಿ ಸತ್ಯಾಗ್ರಹ ಮುಂದುವರೆಸಬೇಕು. ಸಿಎಂ ಅಧಿವೇಶನದಲ್ಲಿ ಇತ್ಯರ್ಥ ಮಾಡಬೇಕು, ಇಲ್ಲದೇ ಇದ್ದಲ್ಲಿ ಈ ಹೋರಾಟ ಎಲ್ಲಿಗೆ ಹೋಗಲಿದೆಯೋ ಗೊತ್ತಿಲ್ಲ. ನನ್ನ ಸಲಹೆ 'ಮಾಡು ಇಲ್ಲ ಮಡಿ' ಎನ್ನುವುದಾಗಿದ್ದು, ಹೋರಾಟ ನಿಲ್ಲಬಾರದು. ಸಿಎಂ ಬಳಿ ಹೋಗಿ ಸಮುದಾಯದ ಬೇಡಿಕೆ ಈಡೇರಿಕೆ ಮಾಡದಿದ್ದಲ್ಲಿ ರಾಜೀನಾಮೆ ಕೊಡುತ್ತೇವೆ ಎಂದು ನಿರಾಣಿ, ಸಿಸಿ ಪಾಟೀಲ ಹೇಳಲಿ. ಆಗ ಯಾಕೆ ನಮ್ಮ ಬೇಡಿಕೆ ಈಡೇರಿಸಲ್ಲ ನೋಡೋಣ ಎಂದರು.

ನಂತರ ವಿಧಾನಸೌಧದ ಮುಂದೆ ಮಾರ್ಚ್ 4 ರವರೆಗೆ ಶಾಂತಿಯುತ ಧರಣಿ ನಡೆಸಿ ನಂತರ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರವನ್ನು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಶ್ರೀಗಳು ಪ್ರಕಟಿಸಿದರು. ಈಗ ಪಾದಯಾತ್ರೆ ಮೂಲಕ ವಿಧಾನಸೌಧಕ್ಕೆ ತೆರಳಿ ಧರಣಿ ಆರಂಭಿಸುತ್ತೇವೆ. ಸಿಎಂ ತಮ್ಮ ಪರಮಾಧಿಕಾರ ಬಳಸಿ 2ಎ ನಿರ್ಧಾರ ಪ್ರಕಟಿಸಬೇಕು, ಇಲ್ಲದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಅನಿವಾರ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.