ETV Bharat / state

ಮದ್ಯದ ಅಮಲಲ್ಲಿ ಆಟೋ ಚಾಲನೆ: ಚಾಲಕನ ವಶಕ್ಕೆ ಪಡೆದು ಪೊಲೀಸ್ರಿಂದ ಮಕ್ಕಳ ರಕ್ಷಣೆ - ಮಕ್ಕಳನ್ನು ರಕ್ಷಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಕುಡಿದು ವಾಹನ ಚಾಲನೆ ಮಾಡಿ ಮಕ್ಕಳ ಪ್ರಾಣಕ್ಕೆ ಕುತ್ತು ತಂದಿದ್ದ ಆಟೋ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಂದ ಶಾಲಾ ಮಕ್ಕಳ ರಕ್ಷಣೆ
author img

By

Published : Oct 24, 2019, 1:38 PM IST

ಬೆಂಗಳೂರು: ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಆಟೋ ಚಲಾಯಿಸಿ ಶಾಲಾ ಮಕ್ಕಳ ಪ್ರಾಣಕ್ಕೆ ಕುತ್ತು ತಂದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೊಮ್ಮನಹಳ್ಳಿ ಜಂಕ್ಷನ್ ಬಳಿ ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿತ್ತು. ಚಾಲಕ ಉಮೇಶ್‌ಗೆ ಮಕ್ಕಳು ನಿಧಾನವಾಗಿ ಆಟೋ ಓಡಿಸುವಂತೆ ತಿಳಿ ಹೇಳಿದ್ದಾರೆ. ಆದ್ರೆ, ಆತ ಮಕ್ಕಳ ಮನವಿಗೆ ಕಿವಿಗೊಡಲಿಲ್ಲ. ಅಡ್ಡಾದಿಡ್ಡಿಯಾಗಿ ಆಟೋ ಚಲಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಬೊಮ್ಮನಹಳ್ಳಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಆಟೋ ತಡೆದು ಚಾಲಕನ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ದಾಖಲೆಗಳಿಲ್ಲದ ಕಾರಣ ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಆಟೋದಲ್ಲಿದ್ದ ಮಕ್ಕಳ ಐಡಿ ಕಾರ್ಡ್ ನೋಡಿ ಪೋಷಕರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಆಟೋಗೆ ಬದಲಿ ಚಾಲಕ ಬರದಿರುವುದೇ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಚಾಲಕ‌ ಉಮೇಶ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮನ್ನು ರಕ್ಷಿಸಿದ ಪೊಲೀಸರಿಗೆ ಶಾಲಾ ಮಕ್ಕಳು ಚಾಕ್ಲೆಟ್ ಕೊಟ್ಟು ಥ್ಯಾಂಕ್ಸ್ ಹೇಳಿದ್ದಾರೆ.

Intro:Body:ಕಾಪಾಡಿದ್ದಕ್ಕೆ ಪೊಲೀಸರಿಗೆ ಚಾಕ್ಲೇಟ್ ಕೊಟ್ಟು ಥ್ಯಾಂಕ್ಸ್ ಹೇಳಿದ ಸ್ಕೂಲ್ ಮಕ್ಕಳು..

ಬೆಂಗಳೂರು: ಕುಡಿದು ಆಟೊ ಚಲಾಯಿಸಿ ಅಡ್ಡಾದಿಡ್ಡಿ ಓಡಿಸುತ್ತಿದ್ದ ಚಾಲಕನನ್ನು ತಡೆಯುವ ಮೂಲಕ ಅಪಾಯದಲ್ಲಿದ್ದ ಶಾಲಾ‌ ಮಕ್ಕಳನ್ನು ತಡೆದಿದ್ದಾರೆ.
ನಿನ್ನೆ ಮಧ್ಯಾಹ್ನ ಬೊಮ್ಮನಹಳ್ಳಿ ಜಂಕ್ಷನ್ ಬಳಿ ಆಟೊ‌ ಡ್ರೈವರ್ ಸ್ಕೂಲ್ ಮಕ್ಕಳನ್ನ ಕರೆದೊಯ್ಯುತ್ತಿದ್ದ..‌ಕುಡಿದ ನಶೆಯಲ್ಲು ಆಟೋ ಚಲಾಯಿಸಿ ಹೇಗೆಂದರೆ ಹಾಗೆ ಆಟೋ ಓಡಿಸುತ್ತಿದ್ದ ಎನ್ನಲಾಗಿದ್ದು.. ಇದರಿಂದ ಗಾಬರಿಗೊಂಡಿದ್ದ ಸ್ಕೂಲ್ ಮಕ್ಕಳು ಚಾಲಕನಿಗೆ ನಿಧಾನವಾಗಿ ಓಡಿಸಲು ಹೇಳಿದ್ದರಂತೆ.. ಇದಾದ ಬಳಿಕ ಆಟೋ ಡ್ರೈವರ್ ಅಡ್ಡಾದಿಡ್ಡಿ ಓಡಿಸುತ್ತಿರುವುದನ್ನ ಗಮನಿಸಿದ್ದ ಇತರೆ ಸವಾರರು ಗಮನಿಸಿದ್ದಾರೆ. ಕೂಡಲೇ ಬೊಮ್ಮನಹಳ್ಳಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳದಲ್ಲಿ ನಿಯೋಜನೆ ಮಾಡಿದ್ದ ಟ್ರಾಫಿಕ್ ಪೊಲೀಸರು ಆಟೋ ಡ್ರೈವರ್ ನ ತಡೆದಿದ್ದಾರೆ. ಕೂಡಲೇ ಚಾಲಕನ ದಾಖಲೆ ಪರಿಶೀಲಿಸಿದಾಗ ಆತನ ಬಳಿ ಯಾವುದೇ ದಾಖಲೆಯಿರಲಿಲ್ಲ. ಹೀಗಾಗಿ ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆಟೊದಲ್ಲಿ ಮಕ್ಕಳನ್ನ ಕೆಳಗಿಳಿಸಿ ಮಕ್ಕಳ ಬಳಿ ಇದ್ದ ಐಡಿ ಕಾರ್ಡ್ ನೋಡಿ ಪೋಷಕರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ.

ಆಟೊ ಚಾಲಕನನ್ನು ನೋಡಿದ ಪೋಷಕರಿಗೆ ಶಾಕ್ ಗೆ ಒಳಗಾಗಿದ್ದಾರೆ. ಯಾಕೆಂದರೆ ಪ್ರತಿ ದಿನ ಮಕ್ಕಳನ್ನು ಕರೆದೊಯ್ಯುವ ಚಾಲಕ ಈತನಾಗಿರಲಿಲ್ಲ.. ಅಸಲಿ ಚಾಲಕ ಎಂದಿನಂತೆ ನಿನ್ನೆ ಬೆಳಗ್ಗೆ ಕರೆ ಮಾಡಿ ನನ್ನ ಕುಟುಂಬದಲ್ಲಿ ಸಾವಾಗಿದೆ ಇಂದು ಬರುವುದಿಲ್ಲ.‌ ನನ್ನ ಬದಲಾಗಿ ತನ್ನ ನನ್ನ ಸ್ನೇಹಿತನೇ ಮಕ್ಕಳನ್ನು ಪಿಕ್ ಮಾಡಲು ಬರುತ್ತಾನೆ ಎಂದು ತಿಳಿಸಿದ್ದಂತೆ. ಇದರಂತೆ ಚಾಲಕ‌ ಉಮೇಶ್ ಕುಡಿದು ಬಂದು ಆಟೋ ಚಲಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ಪ್ರಾಣ ಉಳಿಸಿದ ಪೊಲೀಸರಿಗೆ ಶಾಲಾ ಪುಟಾಣಿಗಳು ಚಾಕ್ಲೇಟ್ ಕೊಟ್ಟು ಥ್ಯಾಂಕ್ಸ್ ಹೇಳಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.