ETV Bharat / state

ಕೆಲಸ ಕೇಳಿ ಬಂದ ಯುವತಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ ದುರುಳರು, ಮೂವರ ಬಂಧನ - prostitution gang arrest

ಬೆಂಗಳೂರಿಗೆ ನೌಕರಿಗಾಗಿ ಬಂದಿದ್ದ ಯುವತಿಯನ್ನು ವೇಶ್ಯಾವಾಟಿಕೆ ದಂಧೆಗೆ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

prostitution gang arrest
ಮೂವರ ಬಂಧನ
author img

By

Published : Aug 21, 2022, 12:19 PM IST

Updated : Aug 21, 2022, 12:27 PM IST

ಬೆಂಗಳೂರು: ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವತಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಿದ್ದಲ್ಲದೇ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿಸಿದ ಇಬ್ಬರು ಆರೋಪಿಗಳು ಸೇರಿ ಓರ್ವ ಮಹಿಳೆಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಾಜಿನಗರ ನಿವಾಸಿ ಲಕ್ಷ್ಮೀ ಅಲಿಯಾಸ್ ಮಂಜುಳಾ ಮತ್ತು ಆಕೆಯ ಸಹಚರ ಬ್ರಹ್ಮೇಂದ್ರ ರಾವಣ್ ಹಾಗೂ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹೋಟೆಲ್ ಮಾಲೀಕ ಸಂತೋಷ್ ಬಂಧಿತರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕು ಮೂಲದ ಸಂತ್ರಸ್ತೆ ಕೆಲ ತಿಂಗಳ ಹಿಂದೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಲಕ್ಷ್ಮೀ, ತಾನು ವುಮೆನ್ಸ್ ರೈಟ್ಸ್ ಎಂಬ ಪತ್ರಿಕೆಯ ವರದಿಗಾರ್ತಿ ಎಂದು ಪರಿಚಯಸಿಕೊಂಡಿದ್ದಾಳೆ. ಬಳಿಕ ಸಂತ್ರಸ್ತೆಯು ಸಮಸ್ಯೆಗಳನ್ನು ಹೇಳಿಕೊಂಡಾಗ, ಎಲ್ಲವನ್ನೂ ಪರಿಹಾರ ಮಾಡುತ್ತೇನೆಂದು ನಂಬಿಸಿ ರಾಜಾಜಿನಗರದಲ್ಲಿರುವ ನವಭಾರತ ಸಂಸ್ಥೆಯ ಕಚೇರಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ಆಶ್ರಯಕ್ಕೆ ಅವಕಾಶ ನೀಡಿದ್ದಳು.

ಇದನ್ನೂ ಓದಿ: ಯುಪಿಯಲ್ಲಿ ನಿರ್ಭಯಾ ಮಾದರಿ ಕೇಸ್​: ವಿದ್ಯಾರ್ಥಿನಿ ಮೇಲೆ ಕಾಮುಕರಿಂದ ರೇಪ್​, ಬೆತ್ತಲೆಗೊಳಿಸಿ ಥಳಿತ

ಆಗಸ್ಟ್ 14ರಂದು ಶಿವಾನಂದ ವೃತ್ತದ ಬಳಿಯಿರುವ ಸಾಯಿ ಆರ್ಕೇಡ್ ಓಯೋ ಲಾಡ್ಜ್​ಗೆ ಯುವತಿಯನ್ನು ಕರೆದೊಯ್ದು, ಆಕೆ ಬಳಿಯಿದ್ದ ಹಣ ಕಸಿದುಕೊಂಡಿದ್ದಾಳೆ. ಬಳಿಕ ಬ್ರಹ್ಮೇಂದ್ರ ರಾವಣ್ ಕರೆತರುವ ಗ್ರಾಹಕರ ಜತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿ, ವೇಶ್ಯಾವಾಟಿಕೆ ದಂಧೆಗೆ ನೂಕಿದ್ದರು. ನಂತರ ಮೆಜೆಸ್ಟಿಕ್ ಬಳಿಯ ಬಾಲಾಜಿ ಲಾಡ್ಜ್ ಅಲಂಕಾರ್ ಗೆಸ್ಟ್ ಹೌಸ್ ಮತ್ತು ಆನಂದ್‌ರಾವ್ ವೃತ್ತದಲ್ಲಿರುವ ದುರ್ಗಾ ಲಾಡ್ಜ್​ಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು. ಗ್ರಾಹಕರಿಂದ ಪಡೆದ ಹಣವನ್ನು ಸಂತ್ರಸ್ತೆಗೆ ಕೊಡದೆ ಆರೋಪಿಗಳೇ ಪಡೆದು ಬಲವಂತದಿಂದ ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಬೆದರಿಸುತ್ತಿದ್ದರು. ಅದನ್ನು ಪ್ರಶ್ನಿಸಿದ ಸಂತ್ರಸ್ತೆಯ ಸ್ನೇಹಿತನಿಗೂ ಆರೋಪಿ ಬ್ರಹ್ಮೇಂದ್ರ ರಾವಣ್ ಹಲ್ಲೆ ನಡೆಸಿದ್ದಾನೆ. ಅಲ್ಲದೇ, ದೈಹಿಕವಾಗಿ ಸಾಧ್ಯವಿಲ್ಲ ಎಂದರೂ ಒಮ್ಮೆಗೆ 2-3 ಮಂದಿ ಗ್ರಾಹಕರನ್ನು ಕಳುಹಿಸಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.

ಯುವತಿ ಮೇಲೆ ಗ್ಯಾಂಗ್ ರೇಪ್: ಪೊಲೀಸ್​ ವಿಚಾರಣೆಯಲ್ಲಿ ಸಂತ್ರಸ್ತೆ ಆರೋಪಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಲಕ್ಷ್ಮೀ ಅಲಿಯಾಸ್ ಮಂಜುಳಾ ಮತ್ತು ಬ್ರಹ್ಮೇಂದ್ರ ರಾವಣ್ ಕರೆತರುತ್ತಿದ್ದ ಕೆಲ ರೌಡಿಶೀಟರ್‌ಗಳು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಇತ್ತೀಚೆಗೆ ಒಬ್ಬ ರೌಡಿಶೀಟರ್ ಹಾಗೂ ಆತನ ನಾಲ್ವರು ಸಹಚರರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾರೆ. ದೈಹಿಕವಾಗಿ ಸಹಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿಕೊಂಡರೂ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಸಹಕಾರ ನೀಡದಕ್ಕೆ ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಾಳೆ. ಹೀಗಾಗಿ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ರೌಡಿಶೀಟರ್‌ಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಹೋದರನಿಗೆ ರಾಖಿ ಕಟ್ಟಲು ಹೋಗ್ತಿದ್ದ ಅಪ್ರಾಪ್ತೆ ಮೇಲೆ ಗ್ಯಾಂಗ್​ ರೇಪ್​.. ಮೂವರು ಕಾಮುಕರಿಂದ ದುಷ್ಕೃತ್ಯ

Last Updated : Aug 21, 2022, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.