ETV Bharat / state

ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ: ಪ್ರತಿ ಹರಿದು ಕಾಂಗ್ರೆಸ್​ - ಜೆಡಿಎಸ್​ ಸಭಾತ್ಯಾಗ - ಗೃಹ ಸಚಿವ ಆರಗ ಜ್ಞಾನೇಂದ್ರ

ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ವಿರೋಧ ನಡುವೆಯೂ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರವಾಗಿದೆ.

prohibition-of-conversion-act-passed-in-legislative-council
ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
author img

By

Published : Sep 15, 2022, 7:18 PM IST

Updated : Sep 15, 2022, 8:07 PM IST

ಬೆಂಗಳೂರು: ವಿಧಾನ ಪರಿಷತ್​ನಲ್ಲಿ ಇಂದು ಮತಾಂತರ ನಿಷೇಧ ವಿಧೇಯಕ ಅಂಗೀಕಾರವಾಗಿದೆ. ವಿಧಾನ ಪರಿಷತ್ ಕಲಾಪದಲ್ಲಿ ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಡಿಸಿದ್ದರು.

ಬೆಳಗಾವಿ ಅಧಿವೇಶನದ ವೇಳೆ ವಿಧಾನ ಪರಿಷತ್​ನಲ್ಲಿ ಈ ವಿಧೇಯಕ ಮಂಡನೆ ಆಗಿರಲಿಲ್ಲ. ಹೀಗಾಗಿ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತರಲಾಗಿತ್ತು. ಈಗ ಬಿಜೆಪಿಗೆ ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತ ಇರುವ ಹಿನ್ನೆಲೆ ಪರಿಷತ್​ನಲ್ಲಿ ಮಂಡಿಸಿ, ಸರ್ಕಾರ ವಿಧೇಯಕಕ್ಕೆ ಅಂಗೀಕಾರ ಪಡೆದಿದೆ. ಈ ವೇಳೆ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಅಲ್ಲದೇ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ವಿರೋಧಿಸಿ ವಿಧೇಯಕದ ಪ್ರತಿ ಹರಿದು ಎಸೆದು ಆಕ್ರೋಶ ಹೊರ ಹಾಕಿದರು.

ವಿಧೇಯಕ ಬಗ್ಗೆ ಮೇಲೆ ಚರ್ಚೆ ನಡೆಸಿದ ಹತ್ತು ಸದಸ್ಯರ ಮಾತಿನ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇಲ್ಲಿ ಯಾವುದೇ ವೋಟ್ ಬ್ಯಾಂಕ್ ರಾಜಕಾರಣ ಇಲ್ಲ. ಇದು ಜಾತ್ಯತೀತ ರಾಷ್ಟ್ರ. ಎಲ್ಲರನ್ನೂ ಒಪ್ಪುವ ಸಂಸ್ಕೃತಿ ನಮ್ಮದು. ಬೇರೆ ರಾಷ್ಟ್ರದ ಧರ್ಮದವರೂ ಇಲ್ಲಿ‌ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಅವರ ರಾಷ್ಟ್ರದಲ್ಲೇ ರಕ್ತಪಾತ ಹೆಚ್ಚಾಗುತ್ತಿದೆ. ಈ ರಾಷ್ಟ್ರದ ಸಂಸ್ಕೃತಿ ಅಂತದ್ದು. ಆದರೆ, ಬೇರೆ ಧರ್ಮದವರು ವ್ಯವಸ್ಥಿತವಾಗಿ ಯಾವ ಕಾರ್ಯ, ಕೃತ್ಯ ನಡೆಸುತ್ತಿದ್ದಾರೆ‌ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.

ವಿಧಾನ ಪರಿಷತ್​ನಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ, ಮತಾಂತರ ಕಾನೂನುಬದ್ಧ ಮಾಡುತ್ತಿದ್ದೇವೆ: ಸಿಎಂ

ಈ ವಿಧೇಯಕಯಲ್ಲಿ ಏನಿದೆ ಎನ್ನುವುದನ್ನು ನೋಡಬಹುದು. ಮತಾಂತರವಾದರೆ ಶಿಕ್ಷೆ ಏನು ಎನ್ನುವುದು ಸಂವಿಧಾನದಲ್ಲಿ ಇರಲಿಲ್ಲ. ಈಗ ಅದನ್ನು ತಂದಿದ್ದೇವೆ. ಹೋಗುವಾಗ ಹೇಳಿ ಹೋಗು ಎಂದು ಕಾನೂನು ಹೇಳಿದೆ. ಸಂವಿಧಾನ ರಚನೆ ಸಂದರ್ಭ ಈ ಪ್ರಮಾಣದ ಮತಾಂತರ ಆಗುವ ನಿರೀಕ್ಷೆ ಇರಲಿಲ್ಲ. ಆದರೆ, ಮತಾಂತರ ಆಗುತ್ತಿರುವ ಹಿನ್ನೆಲೆ ಕಾನೂನು ತಡೆ ತರಲು ಮುಂದಾಗಿದ್ದೇವೆ. ಬಲವಂತವಾಗಿ ಮತಾಂತರ ಆದಾಗ ಶಿಕ್ಷೆ ವಿಧಿಸಲು ಕಾನೂನು ಬದಲಾವಣೆ ಮಾಡಲಾಗಿದೆ ಎಂದರು.

ಇದರಲ್ಲಿ ಯಾವ ಧರ್ಮ ಆಚರಿಸಲು ಬಾಧಕವಿಲ್ಲ. ಮತಾಂತರ ನಂತರ ಅವನು ತಮ್ಮ ಮೂಲ ಧರ್ಮದ ಸವಲತ್ತನ್ನು ಕಳೆದುಕೊಳ್ಳುತ್ತಾನೆ. ಇದು ನಮ್ಮ ಇಚ್ಛೆ ಮಾತ್ರವಲ್ಲ. ಇದನ್ನು ಸಿದ್ದರಾಮಯ್ಯ ಸಹ ಮಂಡಿಸಿದ್ದರು. ಆದರೆ, ಕಾಯ್ದೆ ಜಾರಿಗೆ ಬಂದಿರಲಿಲ್ಲ. ಇದೀಗ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಇಲ್ಲಿಯೂ ಅಂಗೀಕಾರ ನೀಡಬೇಕೆಂದು ಮನವಿ ಮಾಡಿದರು.

ಧರ್ಮ ಸಂರಕ್ಷಣೆಗೆ ಈ ಕಾಯ್ದೆ ತರಲಾಗಿದೆ. ಬಲವಂತವಾಗಿ ಮತಾಂತರಕ್ಕೆ ಮುಂದಾದರೆ ತಡೆಯಲು ಕಾಯ್ದೆ ತರುತ್ತಿದ್ದೇವೆ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು. ಕಾನೂನು ವಿಚಾರವಾಗಿ ಸದನದಲ್ಲಿ ಸದಸ್ಯರು ತಕರಾರು ಎತ್ತಿದರು. ಪ್ರತಿಪಕ್ಷ ಸದಸ್ಯರಿಗೆ ಇನ್ನಷ್ಟು ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದರು.

ಆದರೆ, ಇದಕ್ಕೆ ಅವಕಾಶ ಸಿಗದಿದ್ದಾಗ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಗದ್ದಲದ ಮಧ್ಯೆಯೇ ಸಭಾಪತಿಗಳು ವಿಧೇಯಕ ಮಂಡಿಸಿ ಅನುಮೋದನೆ ಪಡೆದರು. ಬಿಜೆಪಿ ಸದಸ್ಯರು ವಿಧೇಯಕಕ್ಕೆ ಬೆಂಬಲಿಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಇದನ್ನೂ ಓದಿ: ಪರಿಷತ್​ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ: ಬಿಜೆಪಿ - ಕಾಂಗ್ರೆಸ್ ಮಧ್ಯೆ ಜಟಾಪಟಿ

Last Updated : Sep 15, 2022, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.