ETV Bharat / state

ಕೊರೊನಾ ಕಷ್ಟಕಾಲದಲ್ಲೂ ಜನಸಾಮಾನ್ಯರ ರಕ್ತ ಹೀರಲು ಮುಂದಾದ ಖಾಸಗಿ ಆಸ್ಪತ್ರೆಗಳು

ಕೊರೊನಾ ವಿರುದ್ಧದ ಹೋರಾಟಕ್ಕೆ ಖಾಸಗಿ ಆಸ್ಪತ್ರೆಗಳು ಕೂಡ ಸರ್ಕಾರಕ್ಕೆ ಸಹಕರಿಸಬೇಕೆಂದು ಕೆಲ ನಿಯಮ ಮತ್ತು ಶುಲ್ಕವನ್ನು ಸರ್ಕಾರ ನಿಗದಿಪಡಿಸಿದೆ. ಅದರಂತೆಯೇ ಖಾಸಗಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸಬೇಕಿದೆ. ಆದ್ರೆ ಖಾಸಗಿ ಆಸ್ಪತ್ರೆ ಹಾಗೂ ಲ್ಯಾಬ್​​ಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಈಗಲೂ ಮುಂದುವರೆದಿರುವುದು ಮಾತ್ರ ವಿಪರ್ಯಾಸ.

author img

By

Published : Jun 10, 2021, 11:15 AM IST

Updated : Jun 10, 2021, 11:40 AM IST

privet hospitals, diagnostic centers taking more fee from patients
ದುಬಾರಿ ಶುಲ್ಕ ವಿಧಿಸುತ್ತಿವೆ ಖಾಸಗಿ ಆಸ್ಪತ್ರೆಗಳು!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗಿಂತ ಖಾಸಗಿ ಆಸ್ಪತ್ರೆಗಳ ಹಣದಾಹವೇ ಹೆಚ್ಚಾದಂತೆ ಕಾಣುತ್ತಿದೆ‌.‌ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವುದು ಮುಂದುವರೆದಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲೂ, ಈಗಿನ ಎರಡನೇ ಅಲೆಯಲ್ಲೂ ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಲ್ಯಾಬ್​​ಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ವರದಿಯಾಗುತ್ತಲೇ ಇದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್​​ನಡಿ ನೋಂದಾಯಿತ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿರುವ ದರಗಳಲ್ಲಿಯೇ ರೋಗಿಗಳಿಗೆ ಕೋವಿಡ್ ಚಿಕಿತ್ಸೆಯನ್ನು ನೀಡಬೇಕು.‌ ಆದರೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲಕ್ಷ-ಲಕ್ಷ ರೂಪಾಯಿ ಬಿಲ್ ಹಾಕುತ್ತಿರುವುದು ಆರೋಗ್ಯ ಇಲಾಖೆಯ ಗಮನಕ್ಕೆ ಬಂದಿದೆ. ಇದ್ರ ವಿರುದ್ಧ ಅದೆಷ್ಟೇ ಕ್ರಮ ಕೈಗೊಂಡರೂ ಕೂಡ ಅಕ್ರಮ ದಂಧೆಗೆ ಸಂಪೂರ್ಣ ಕಡಿವಾಣ ಬೀಳುತ್ತಿಲ್ಲ.

ಕಾರಣ ಕೇಳಿ ನೋಟಿಸ್ ಜಾರಿ:

ಕೋವಿಡ್-19 ಸಂಬಂಧ ಬಿಬಿಎಂಪಿ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದೇ ಹೆಚ್ಚುವರಿ ಹಣ ಪಾವತಿಸಿಕೊಂಡು ಚಿಕಿತ್ಸೆ ನೀಡುವುದು ಬೆಳಕಿಗೆ ಬಂದಿದೆ. ಈ ವಿಚಾರ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಗಮನಕ್ಕೆ ಬಂದಿದೆ. ಹೀಗಾಗಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ, ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.‌

ನಗರದ 12 ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೋವಿಡ್-19 ಚಿಕಿತ್ಸೆ ನೀಡುವಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಮಾಡಿವೆ. ಹಾಗಾಗಿ, ಈವರೆಗೆ ಕೋವಿಡ್ ಚಿಕಿತ್ಸೆಗಾಗಿ ಖಾಸಗಿಯಾಗಿ (direct admission) ದಾಖಲಾಗಿರುವ ರೋಗಿಗಳ ವಿವರ ಮತ್ತು ರೋಗಿಗಳಿಂದ ಭರಿಸಲಾದ ವೆಚ್ಚದ ವಿವರವನ್ನು ಇಲಾಖೆಗೆ ತಲುಪಿಸಲು ಸೂಚಿಸಲಾಗಿದೆ. ಒಂದು ವೇಳೆ ವರದಿ ಸಲ್ಲಿಸದೇ ಇದ್ದರೆ ಕೆಪಿಎಂಇ ಕಾಯ್ದೆ ಅಡಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಸರ್ಕಾರ ನಿಗಧಿ ಮಾಡಿರುವ ದರವೆಷ್ಟು?

ಕಳೆದ ವರ್ಷ ಜೂನ್ 23ರಂದು ಹೊರಡಿಸಿರುವ ಆದೇಶದ ಪ್ರಕಾರ, ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾಗುವ ಕೋವಿಡ್ ರೋಗಿಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಿಂದ ರೆಫರ್ ಮೂಲಕ ಹೋಗುವ ರೋಗಿಗಳಿಗೆ ಪ್ರತ್ಯೇಕ ದರ ಇರಲಿದೆ. ಇದರಲ್ಲಿ ರೆಫರ್ ಮೂಲಕ ಹೋಗುವ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ. ಇನ್ನು ನೇರವಾಗಿ ರೋಗಿಗಳು ಹೋಗಿ ದಾಖಲು ಆದರೆ ಅಂತಹವರಿಗೆ ಸರ್ಕಾರ ನಿಗಧಿ ಪಡಿಸಿರುವ ಶುಲ್ಕವನ್ನು ಆಸ್ಪತ್ರೆಗಳು ಪಡೆಯಬೇಕಿದೆ.

ನೇರವಾಗಿ ದಾಖಲಾಗುವ ರೋಗಿಗಳಿಗೆ ನಿಗಧಿ ಪಡಿಸಿರುವ ಶುಲ್ಕ:

  • ಜನರಲ್ ವಾರ್ಡ್- 10,000ರೂ.
  • ಹೆಚ್ ಡಿ ಯು- 12,000ರೂ.
  • ಐಸಿಯು ವಿಥ್ ಔಟ್ ವೆಂಟಿಲೇಟರ್- 15,000ರೂ.
  • ಐಸೋಲೇಷನ್ ವಿಥ್ ವೆಂಟಿಲೇಟರ್- 25,000ರೂ.

ರೆಫರೆನ್ಸ್ ಮೂಲಕ ದಾಖಲಾಗುವ ರೋಗಿಗಳಿಗೆ ನಿಗಧಿ ಪಡಿಸಿರುವ ಶುಲ್ಕ( ಪರಿಷ್ಕೃತ ದರ):

  • ಜನರಲ್ ವಾರ್ಡ್- 5200ರೂ.
  • ಹೆಚ್ ಡಿ ಯು- 8,000ರೂ.
  • ಐಸಿಯು ವಿಥ್ ಔಟ್ ವೆಂಟಿಲೇಟರ್- 9,750ರೂ.
  • ಐಸೋಲೇಷನ್ ವಿಥ್ ವೆಂಟಿಲೇಟರ್-11,500ರೂ.

24 ಗಂಟೆಯಲ್ಲಿ ಲ್ಯಾಬ್ ವರದಿ ತಲುಪಬೇಕು:

ಕೋವಿಡ್ ಪರೀಕ್ಷೆ ನಡೆಸುವ ಲ್ಯಾಬೋರೇಟರಿಗಳಿಗೆ ಸರ್ಕಾರ ಕೆಲ ನಿಯಮಗಳನ್ನು ಪಾಲಿಸುವಂತೆ ತಿಳಿಸಿದೆ. 24 ಗಂಟೆಯಲ್ಲಿ ರಿಸಲ್ಟ್‌ ನೀಡದೇ ಇದ್ದರೆ, ವಿಳಂಬ ಮಾಡಿದರೆ ದಂಡ ವಿಧಿಸುವ ಕೆಲಸವೂ ಆಗುತ್ತಿದೆ‌. ಮೊದಲಿಗೆ ನೋಟಿಸ್ ಪಾಠ, ನಂತರ ದಂಡದ ಅಸ್ತ್ರ ಪ್ರಯೋಗವನ್ನು ಮಾಡಲಾಗುತ್ತಿದೆ. ಇತ್ತೀಚೆಗೆ ಕೊರೊನಾ ಸೋಂಕಿನ ಜತೆಗೆ ಬ್ಲ್ಯಾಕ್ ಫಂಗಸ್​​ ಉಪಟಳ ಹೆಚ್ಚಾಗಿ ಇರುವುದರಿಂದ ಖಾಸಗಿ ಲ್ಯಾಬ್​ಗಳು 4-5 ದಿನಗಳ ಸಮಯ ತೆಗೆದುಕೊಳ್ಳದೇ ವರದಿಯನ್ನು ಬೇಗ ಅಪ್‌ಲೋಡ್ ಮಾಡುವಂತೆ ತಾಕೀತು ಮಾಡಲಾಗಿದೆ. ರಿಸಲ್ಟ್ ತಡವಾಗಿ ಕೊಟ್ಟರೆ, ಪ್ರತಿ ಟೆಸ್ಟ್​​ಗೆ 150 ರೂಪಾಯಿಯಂತೆ ಲ್ಯಾಬ್​​ಗಳಿಗೆ ದಂಡ ವಿಧಿಸಲಾಗುತ್ತದೆ.

ಇನ್ನು ಖಾಸಗಿ ಆಸ್ಪತ್ರೆಯ ಲ್ಯಾಬ್‌ಗಳಲ್ಲಿ ಸಿ.ಟಿ ಸ್ಕ್ಯಾನ್​​ಗೆ 1,500ರೂ. ನಿಗಧಿ ಮಾಡಲಾಗಿದೆ. ಕೊರೊನಾ ಪರೀಕ್ಷೆಗೆ ಖಾಸಗಿ ಲ್ಯಾಬ್​ಗಳಲ್ಲಿ 2,250ರೂ. ಇದಿದ್ದು ಹಂತ ಹಂತವಾಗಿ ಕಡಿಮೆ ಮಾಡಲಾಗಿದೆ. ಸರ್ಕಾರದಿಂದ ಇಂದಿಗೂ ಉಚಿತವಾಗಿ ಪರೀಕ್ಷೆ ಮಾಡಲಾಗುತ್ತಿದೆ. ಸ್ಕ್ರೀನಿಂಗ್ ಪರೀಕ್ಷೆ ಹಾಗೂ ಕೊರೊನಾ ಖಚಿತ ಪರೀಕ್ಷೆಗಳಿಗೆ ಪಿಪಿಇ ಕಿಟ್ ದರವನ್ನು ಒಳಗೊಂಡ ಪರಿಷ್ಕೃತ ದರವನ್ನು ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ನಿಗಧಿ ಮಾಡಲಾಗಿತ್ತು.

ಪರೀಕ್ಷೆಗಳಿಗೆ ನಿಗದಿಪಡಿಸಿರುವ ಶುಲ್ಕ:

  • ಆರ್​ಟಿ-ಪಿಸಿಆರ್ ಪರೀಕ್ಷೆ (ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಲ್ಯಾಬ್​ಗಳಿಗೆ ಕಳುಹಿಸಿದಾಗ) - 500ರೂ.
  • ಆರ್​ಟಿ-ಪಿಸಿಆರ್ ಪರೀಕ್ಷೆ (ಖಾಸಗಿ ಆಸ್ಪತ್ರೆಯಿಂದ ಖಾಸಗಿ ಲ್ಯಾಬ್​ಗಳಿಗೆ ಕಳುಹಿಸಿದಾಗ) - 800ರೂ.
  • ಟ್ರೂ ನ್ಯಾಟ್ ಪರೀಕ್ಷೆ (ಖಾಸಗಿ ಲ್ಯಾಬ್)- 1,250ರೂ.
  • ಸಿ.ಬಿ ನ್ಯಾಟ್ ಪರೀಕ್ಷೆ (ಖಾಸಗಿ ಲ್ಯಾಬ್)- 2,400ರೂ.
  • ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ (ಖಾಸಗಿ ಲ್ಯಾಬ್) 400ರೂ.
  • ರ್ಯಾಪಿಡ್ ಆ್ಯಂಟಿಬಾಡಿ ಪರೀಕ್ಷೆ- 500ರೂ.

ಇದನ್ನೂ ಓದಿ: ರೈಲ್ವೆ ನಿಲ್ದಾಣದ ಕ್ಯಾಂಟೀನ್​​ಗಳಲ್ಲಿ ಗ್ರಾಹಕರಿಲ್ಲದೇ ವ್ಯಾಪಾರ ಕುಸಿತ

Last Updated : Jun 10, 2021, 11:40 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.