ETV Bharat / state

ಗೌರಿ- ಗಣೇಶ ಹಬ್ಬದ ಹಿನ್ನೆಲೆ ಖಾಸಗಿ ಬಸ್ ದರ ಏರಿಕೆ: ಸಾರ್ವಜನಿಕರ ಬೇಸರ - ಉದ್ಯೋಗ, ವ್ಯವಹಾರ

ಪ್ರತಿ ವರ್ಷ ಗೌರಿ ಗಣೇಶ ಹಬ್ಬ ಬಂತು‌ ಅಂದರೆ‌‌‌ ಅರ್ಧ ಬೆಂಗಳೂರು ಖಾಲಿಯಾಗುತ್ತೆ, ಉದ್ಯೋಗ, ವ್ಯವಹಾರದ ನಿಮಿತ್ತ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿದವರು ಹಬ್ಬಕ್ಕೆ ತಮ್ಮ ಊರಿಗೆ ಹೊರಟು ನಿಂತಿರುತ್ತಾರೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಳ್ಳುವ‌ ಖಾಸಗಿ ಬಸ್ಸಿನವರು, ಬಸ್‌ಗಳ ಪ್ರಯಾಣ ದರ ದುಪ್ಪಟ್ಟು ಮಾಡೋದೇ ಕಾಯಕ ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಬೇಸರ
author img

By

Published : Aug 31, 2019, 2:32 AM IST

ಬೆಂಗಳೂರು: ಸಾಮಾನ್ಯ ದಿನಗಳಲ್ಲಿ 500ರಿಂದ 600 ರೂ.ಗಳು ಇರುತಿದ್ದ ಟಿಕೆಟ್ ದರ ಗೌರಿ- ಗಣೇಶ ಹಬ್ಬದ ಹಿನ್ನೆಲೆ 900 ರಿಂದ 1500 ರೂ.ವರೆಗೂ ಏರಿಸಲಾಗಿದೆ. ಮನಬಂದಂತೆ ದರಗಳನ್ನು ವಿಧಿಸಿ ಪ್ರಯಾಣಿಕರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.

ಬಸ್‌ಗಳೆಲ್ಲವೂ ಫುಲ್ ಆಗಲಿದ್ದು, ಹಬ್ಬಕ್ಕೆ ಹೊರಟು ನಿಂತವರಿಗೆ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಕಾರಣ ಯಾವುದೇ ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳನ್ನು ನೋಡಿದರೂ ಬಸ್‌ಗಳು ಫುಲ್ ಎಂದು ತೋರಿಸುತ್ತಿದೆ. ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದರೆ ದುಬಾರಿ ದರಗಳನ್ನು ಹೇಳುತ್ತಿದ್ದಾರೆ.

ಗೌರಿ- ಗಣೇಶ ಹಬ್ಬದ ಹಿನ್ನೆಲೆ ಖಾಸಗಿ ಬಸ್ ದರ ದುಪ್ಪಟ್ಟು

ಹಬ್ಬದ ಸೀಸನ್ ಬಂದಾಗ ಜನದಟ್ಟಣೆ ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಅದೇ ರೀತಿ ಈ ಬಾರಿಯೂ ಹೆಚ್ಚುವರಿ ಬಸ್ ಬಿಟ್ಟಿದೆ. ಆದರೂ, ಖಾಸಗಿ ಬಸ್​ಗಳಿಗೆ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಹತ್ತಾರು ಟ್ರಾವೆಲ್ಸ್ ಸಂಸ್ಥೆಗಳ ಬಸ್‌ಗಳು ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಕಾರವಾರ, ಹುಬ್ಬಳ್ಳಿ ಸೇರಿದಂತೆ ನಾನಾ ಊರುಗಳಿಗೆ ಸಂಚರಿಸುತ್ತಿವೆ. ಇಂತಹ ಕಡೆಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.

Intro:ಗೌರಿ- ಗಣೇಶ ಹಬ್ಬದ ಸಂಭ್ರಮ; ಖಾಸಗಿ ಬಸ್ ದರ ದುಪ್ಪಟ್ಟಿಗೆ ಸಾರ್ವಜನಿಕರ ಬೇಸರ..

ಬೆಂಗಳೂರು: ಪ್ರತಿ ವರ್ಷ ಗೌರಿ ಗಣೇಶ ಹಬ್ಬ ಬಂತು‌ ಅಂದರೆ‌‌‌ ಬೆಂಗಳೂರು ಅರ್ಧ ಖಾಲಿಯಾಗಿರುತ್ತೆ.. ಉದ್ಯೋಗ, ವ್ಯವಹಾರದ ನಿಮಿತ್ತ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿದವರು ಹಬ್ಬಕ್ಕೆ ತಮ್ಮ ಕುಟುಂಬದವರ ಜತೆ ಆಚರಿಸಲು ಹೊರಟು ನಿಂತಿರುತ್ತಾರೆ..

ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ‌ ಖಾಸಗಿ ಬಸ್ಸಿನವರು, ಬಸ್‌ಗಳ ಪ್ರಯಾಣ ದರ ದುಪ್ಪಟ್ಟು ಮಾಡೋದೇ ಕಾಯಕ ಮಾಡಿಕೊಂಡಿದ್ದಾರೆ.. ಸಾಮಾನ್ಯ ದಿನಗಳಲ್ಲಿ 500ರಿಂದ 600 ರೂ.ಗಳ ಟಿಕೆಟ್ ದರ ಇದ್ದ ಸ್ಥಳಗಳಿಗೆ ಈಗ 900 ರಿಂದ 1500 ರೂ.ವರೆಗೂ ದರ ವಿಧಿಸಲಾಗುತ್ತಿದೆ. ಮನಬಂದಂತೆ ದರಗಳನ್ನು ವಿಧಿಸಿ ಪ್ರಯಾಣಿಕರ ಕೆಂಗಣ್ಣಿಗೆ ಕಾರಣವಾಗಿದ್ದಾರೆ..

ಬಸ್‌ಗಳೆಲ್ಲವೂ ಫುಲ್ ಆಗಲಿದ್ದು, ಹಬ್ಬಕ್ಕೆ ಹೊರಟು ನಿಂತವರಿಗೆ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಕಾರಣ ಯಾವುದೇ ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳನ್ನು ನೋಡಿದರೂ ‘ಬಸ್‌ಗಳು ಫುಲ್’ ಎಂಬ ಮಾಹಿತಿ ಸಿಗುತ್ತದೆ. ಹಾಗೂ ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದರೆ ದುಬಾರಿ ದರಗಳನ್ನು ಹೇಳೋದು, ಕೇಳಿದರೆ ಹಬ್ಬದ ಸೀಜನ್ ಇದೆ. ಎಲ್ಲರೂ ಪ್ರಯಾಣ ದರ ಹೆಚ್ಚು ಮಾಡಿದ್ದಾರೆ ಎಂಬ ಉಡಾಫೆ ಉತ್ತರಗಳು ಆಗಾಗ ಕೇಳಿ ಬರುತ್ತಿದೆ..

ಹಬ್ಬದ ಸೀಸನ್ ಬಂದಾಗ ಜನದಟ್ಟಣೆ ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಅದೇ ರೀತಿ ಈ ಬಾರಿಯೂ ಹೆಚ್ಚುವರಿ ಬಸ್ ಬಿಟ್ಟಿದೆ. ಆದರು ಖಾಸಗಿ ಬಸ್ ಗಳಿಗೆ ಬೇಡಿಕೆ ಮಾತ್ರ
ಕಡಿಮೆಯಾಗಿಲ್ಲ. ಹತ್ತಾರು ಟ್ರಾವೆಲ್ಸ್ ಸಂಸ್ಥೆಗಳು ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಕಾರವಾರ, ಹುಬ್ಬಳ್ಳಿ ಸೇರಿದಂತೆ ನಾನಾ ಊರುಗಳಿಗೆ ನೂರಾರು ಬಸ್‌ಗಳು ಸಂಚಾರಿಸುತ್ತಿವೆ.. ಇಂತಹ ಕಡೆಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ..

ಬೈಟ್; ಪರಿಸರ ಚಂದ್ರಶೇಖರ್, ಬಸ್ ಪ್ರಯಾಣಿಕರು

ಸದ್ಯ ಹಬ್ಬ ಬಂದರೆ ಸಾಕು ಸಂತೋಷ ಸಂಭ್ರಮಕ್ಕಿಂತ , ಓಡಾಡುವಾಗ ಎಲ್ಲ ಹಣವನ್ನ ಬಸ್ ಗಳಿಗೆ ತೆತ್ತಬೇಕಿದೆ. ಸರ್ಕಾರ ಹಾಗೂ ಆರ್ ಟಿ ಓ ಇಂತಹ ವ್ಯವಸ್ಥೆಗೆ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕಿದೆ.

KN_BNG_05_FEST_BUS_TIKCET_SCRIPT_7201801Body:..Conclusion:.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.