ETV Bharat / state

ಹೊಯ್ಸಳರ ಸ್ಮಾರಕಗಳಿಗೆ ವಿಶ್ವ ಪರಂಪರೆ ಸ್ಥಾನಮಾನ ಸಿಗಲು ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು: ದೇವೇಗೌಡ ಒತ್ತಾಯ

author img

By

Published : Feb 2, 2022, 11:30 PM IST

ಹೊಯ್ಸಳರ ಸ್ಮಾರಕಗಳಿಗೆ ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನಮಾನ ನೀಡುವ ಸಂಬಂಧ ಭಾರತೀಯ ಪುರಾತತ್ವ ಇಲಾಖೆಯಿಂದ ಯುನೆಸ್ಕೋಗೆ ನಾಮನಿರ್ದೇಶನ ಮಾಡಲಾಗಿದೆ. ಪ್ರಧಾನಿ ಮಧ್ಯಸ್ಥಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೆಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.

HD Devegowda writes letter to  Prime Minister
ಹೆಚ್.ಡಿ.ದೇವೇಗೌಡ ಒತ್ತಾಯ

ಬೆಂಗಳೂರು: ರಾಜವಂಶರ ಪೈಕಿ ಹೊಯ್ಸಳ ರಾಜವಂಶ ಕೂಡ ಒಂದಾಗಿದ್ದು, ಅವರ ಸ್ಮಾರಕಗಳಿಗೆ ವಿಶ್ವ ಪರಂಪರೆಯ ಸ್ಥಾನಮಾನ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ. ದೇವೇಗೌಡ ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ದೇವೇಗೌಡರು, ಹೊಯ್ಸಳ 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶವಾಗಿದೆ. ಕಲೆ, ಸಾಹಿತ್ಯ ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದೆ. ಹೊಯ್ಸಳರ ಸ್ಮಾರಕಗಳಿಗೆ ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನಮಾನ ನೀಡುವ ಸಂಬಂಧ ಭಾರತೀಯ ಪುರಾತತ್ವ ಇಲಾಖೆಯಿಂದ ಯುನೆಸ್ಕೋಗೆ ನಾಮನಿರ್ದೇಶನ ಮಾಡಲಾಗಿದೆ. ಮತ್ತಷ್ಟು ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹೆಚ್​ಡಿಡಿ ಬರೆದ ಪತ್ರ
ಹೆಚ್​ಡಿಡಿ ಬರೆದ ಪತ್ರ

ಇದನ್ನೂ ಓದಿ: ವಿವಿಧ ಯೋಜನೆಗಳಿಗೆ ಅರಣ್ಯ ಇಲಾಖೆ ಅನುಮೋದನೆ ಪಡೆಯಲು ಉನ್ನತ ಮಟ್ಟದ ಸಮಿತಿ ರಚನೆಗೆ ತೀರ್ಮಾನ..

ಹೊಯ್ಸಳ ದೇವಾಲಯಗಳು ಬಹಳ ಪ್ರಬಲವಾಗಿವೆ. ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿನ ಶಿಲ್ಪಕಲೆಗಳು ಅಪ್ರತಿಮವಾಗಿವೆ. ಸ್ಮಾರಕಗಳ ನಿರ್ಮಾಣಕ್ಕೆ 127 ವರ್ಷಗಳ ಕಾಲ ತೆಗೆದುಕೊಂಡರು ಮತ್ತು ಕಲ್ಲಿನ ಕೆತ್ತನೆಗಳು ತುಂಬಾ ಸೂಕ್ಷ್ಮವಾಗಿವೆ. ಹೊಯ್ಸಳ ದೇವಾಲಯಗಳು ವಿಶ್ವ ಪರಂಪರೆಯ ತಾಣಗಳೆಂದು ಗುರುತಿಸುವಲ್ಲಿ ಅರ್ಹವಾಗಿವೆ.

ಇದೇ ವರ್ಷ ಜನವರಿಯಲ್ಲಿ ನಾಮನಿರ್ದೇಶನಕ್ಕೆ ಸಲ್ಲಿಕೆ ಮಾಡಲಾಗಿದೆ. ಇದರ ಫಲಿತಾಂಶವು 2023 ರ ಜುಲೈ ತಿಂಗಳಲ್ಲಿ ಘೋಷಣೆಯಾಗಲಿದೆ. ವಿಶ್ವಪರಂಪರೆ ಸ್ಥಾನಮಾನ ಲಭಿಸಿದರೆ ತವರು ಜಿಲ್ಲೆ ಹಾಸನದ ಜನರಿಗೆ ವಿಶೇಷ ಗೌರವ ಲಭಿಸಿದಂತಾಗುತ್ತದೆ. 1986 ರಲ್ಲಿ ಹಂಪಿ ಮತ್ತು 1987 ರಲ್ಲಿ ಪಟ್ಟದಕಲ್ಲು ಯುನೆಸ್ಕೋ ಪಟ್ಟಿಗೆ ಸೇರಿವೆ. ನಂತರ ಕರ್ನಾಟಕದ ಯಾವುದೇ ಸ್ಮಾರಕಗಳು ಸೇರ್ಪಡೆಯಾಗಿಲ್ಲ ಎಂದು ಪತ್ರದಲ್ಲಿ ಮಾಜಿ ಪ್ರಧಾನಿ ತಿಳಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.