ETV Bharat / state

ನಾಳೆ ಏರ್ ಶೋ ಉದ್ಘಾಟನೆ: ಇಂದು ರಾತ್ರಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ

ಯಲಹಂಕ ವಾಯುನೆಲೆಯಲ್ಲಿ ಸೋಮವಾರದಿಂದ ನಡೆಯಲಿರುವ ಏರೊ ಇಂಡಿಯಾ 2023 - ಏರ್ ಶೋ ಉದ್ಘಾಟನೆಗಾಗಿ ಪ್ರಧಾನಿ ಮೋದಿ ಇಂದು ರಾತ್ರಿ ಬೆಂಗಳೂರಿಗೆ ಆಗಮನ - ನಾಳೆ ಪ್ರಧಾನಿಯಿಂದ ಏರ್​ ಶೋ ಗೆ ಚಾಲನೆ.

Prime Minister will drive to the air show
ನಾಳೆ ಏರ್ ಶೋ ಉದ್ಘಾಟನೆ: ಇಂದು ರಾತ್ರಿ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ
author img

By

Published : Feb 12, 2023, 3:54 PM IST

ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವಾದ ಏರ್ ಶೋ ನಡೆಯಲಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಉದ್ಘಾಟನೆಗಾಗಿ ಇಂದು ರಾತ್ರಿಯೇ ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಲಿದ್ದಾರೆ. ಇಂದು ಸಂಜೆ 7.40ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ 8 ಗಂಟೆಗೆ ರಾಜಭವನ ತಲುಪಲಿದ್ದಾರೆ.

ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹೊರಡಲಿರುವ ಮೋದಿ 9.20ಕ್ಕೆ ಯಲಹಂಕ ವಾಯುನೆಲೆ ತಲುಪಲಿದ್ದಾರೆ. ನಂತರ 9.30ಕ್ಕೆ ಕಾರ್ಯಕ್ರಮ ಸ್ಥಳ ತಲುಪಲಿದ್ದಾರೆ. 9.30ಕ್ಕೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದು, 10.30 ರವರೆಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. 10.30 ರಿಂದ 11.30 ರವರೆಗೆ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿ ಇಂಡಿಯಾ ಪೆವಿಲಿಯನ್, ಕರ್ನಾಟಕ ಪೆವಿಲಿಯನ್​ಗೆ ಭೇಟಿ ನೀಡಲಿದ್ದಾರೆ. 11.45ಕ್ಕೆ ಯಲಹಂಕ ವಾಯುನೆಲೆಯಿಂದ ನಿರ್ಗಮಿಸಲಿದ್ದು, ನಂತರ ಅವರು 3.15ಕ್ಕೆ ತ್ರಿಪುರಕ್ಕೆ ಭೇಟಿ ನೀಡಲಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 1996 ರಿಂದ ಆರಂಭಗೊಂಡಿರುವ ಏರ್ ಶೋ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದು, ಈವರೆಗೆ ಒಟ್ಟು 13 ಆವೃತ್ತಿಗಳು ನಡೆದಿದ್ದು, ಇದು 14ನೇ ಆವೃತ್ತಿಯಾಗಿದೆ. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಒಟ್ಟು 809 ವೈಮಾನಿಕ ವಲಯದ ಪ್ರದರ್ಶಕರು ರಕ್ಷಣಾ ವಲಯಕ್ಕೆ ಸೇರಿದ ಪರಿಕರಗಳ ಪ್ರದರ್ಶನ ಮಾಡಲಿದ್ದು, ಇದರಲ್ಲಿ 699 ಭಾರತೀಯ ಪ್ರದರ್ಶಕರು ಮತ್ತು 110 ವಿದೇಶಿ ಪ್ರದರ್ಶಕರು ಭಾಗಿಯಾಗಲಿದ್ದಾರೆ. 25 ದೇಶಗಳ ರಕ್ಷಣಾ ಸಚಿವರು ಏರ್ ಶೋನಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ.

ಮೋದಿ ಭೇಟಿ ವೇಳೆ ಸಭೆ ಇಲ್ಲ: ಇನ್ನು, ಏರ್ ಶೋ ಉದ್ಘಾಟನೆಗಾಗಿ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡುತ್ತಿದ್ದು, ಪಕ್ಷದ ನಾಯಕರ ಜೊತೆ ಯಾವುದೇ ಸಭೆ ನಡೆಸುತ್ತಿಲ್ಲ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾಜಭವನದಲ್ಲಿ ರಾತ್ರಿಯಾಗಲಿ ಬೆಳಗ್ಗೆಯಾಗಲಿ ಬಿಜೆಪಿ ನಾಯಕರ ಜೊತೆ ಸಭೆಗೆ ಸಮಯ ನಿಗದಿಪಡಿಸಿಲ್ಲ. ಏರ್ ಶೋ ಉದ್ಘಾಟನೆ ನಡೆಸಿದ ನಂತರ ನೇರವಾಗಿ ತ್ರಿಪುರಕ್ಕೆ ಪ್ರಧಾನಿ ನಿರ್ಗಮಿಸಲಿದ್ದಾರೆ. ಹಾಗಾಗಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಚರ್ಚೆಗಳು ನಡೆಯುವುದಿಲ್ಲ.

ಈವರೆಗಿನ ರಾಜ್ಯ ಭೇಟಿ ವೇಳೆ ಸರ್ಕಾರಿ ಕಾರ್ಯಕ್ರಮದ ಜೊತೆ ಜೊತೆಗೆ ಪಕ್ಷದ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗುತ್ತಿತ್ತು ಹಾಗಾಗೀ ಪ್ರಧಾನಿ ಮೋದಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಕ್ಷದ ವೇದಿಕೆಯಲ್ಲಿ ಭಾಷಣ ಮಾಡಿ ಬಿಜೆಪಿಗೆ ಬೂಸ್ಟ್ ನೀಡುವ ಕೆಲಸ ಮಾಡುತ್ತಿದ್ದರು. ಇದರ ಜೊತೆಗೆ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸುತ್ತಿದ್ದರು. ಆದರೆ ಈ ಬಾರಿಯ ಭೇಟಿ ವೇಳೆ ಅಂತಹ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿಲ್ಲ ಎಂದು ತಿಳಿದುಬಂದಿದೆ.

ನಾಳೆ ಕಾರ್ಯಕ್ರಮದ ಬಳಿಕ ದೆಹಲಿಗೆ ವಾಪಸಾಗಲಿರುವ ಪ್ರಧಾನಿ ಮೋದಿ ಫೆ. 27 ರಂದು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅಂದು ರಾಜ್ಯ ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಹುಟ್ಟುಹಬ್ಬವಾಗಿದ್ದು ಅಂದೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡಲಿದ್ದಾರೆ. ನಂತರ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕುರಿತು ಇನ್ನು ಅಂತಿಮವಾಗಿಲ್ಲದ ಕಾರಣ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:ಏರೊ ಇಂಡಿಯಾ 2023: ಸಾರ್ವಜನಿಕರ ಅನುಕೂಲಕ್ಕೆ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಿದ ಬಿಎಂಟಿಸಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.