ETV Bharat / state

ಜವಳಿ ಅಂಗಡಿ ತೆರೆಯಲು ಅವಕಾಶ ಕೊಡಿ: ಪ್ರಕಾಶ್ ಪಿರ್ಗಲ್ - Prakash Pirgal

ಕಳೆದ 2 ತಿಂಗಳಿಂದ ಎಲ್ಲಾ ಅಂಗಡಿಗಳು ಮುಚ್ಚಿರುವ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸಿಎಂ ಯಡಿಯೂರಪ್ಪ ಶೇ. 30ರಷ್ಟು ಕೆಲಸಗಾರರನ್ನು ಬಳಸಿ ಗಾರ್ಮೆಂಟ್ಸ್ ತೆರೆಯಲು ಅವಕಾಶ ನೀಡಿದ್ದಾರೆ. ಆದರೆ ಅಂಗಡಿಗಳು ಬಾಗಿಲು ಮುಚ್ಚಿದರೆ ಏನು ಪ್ರಯೋಜನ ಎಂದು ನಗರ ಜವಳಿ ಅಂಗಡಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಬೇಸರ ವ್ಯಕ್ತಪಡಿಸಿದ್ದಾರೆ.

Prakash Pirgal
ಪ್ರಕಾಶ್ ಪಿರ್ಗಲ್
author img

By

Published : Jun 11, 2021, 2:56 PM IST

ಬೆಂಗಳೂರು: ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೂನ್ 14ರಿಂದ ಲಾಕ್​ಡೌನ್ ವಿನಾಯಿತಿ ನೀಡಿ ಶೇ. 30ರಷ್ಟು ಕೆಲಸಗಾರರನ್ನು ಬಳಸಿ ಗಾರ್ಮೆಂಟ್ಸ್ ತೆರೆಯಲು ಅವಕಾಶ ನೀಡಿದ್ದಾರೆ. ಆದರೆ ಅಂಗಡಿಗಳು ಬಾಗಿಲು ಮುಚ್ಚಿದರೆ ಏನು ಪ್ರಯೋಜನ ಎಂದು ನಗರ ಜವಳಿ ಅಂಗಡಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ಪಿರ್ಗಲ್

ಗಾರ್ಮೆಂಟ್ಸ್​ಗಳಲ್ಲಿ ತಯಾರಾಗುವ ಬಟ್ಟೆಗಳನ್ನ ಅಂಗಡಿ ಮುಂಗಟ್ಟಿಗೆ ಮಾರಾಟ ಮಾಡಲಾಗುತ್ತದೆ. ಇದರ ಜೊತೆಗೆ ಕಚ್ಚಾ ವಸ್ತುಗಳು ಸಗಟು ಅಂಗಡಿಗಳಿಂದ ಗಾರ್ಮೆಂಟ್ಸ್​ಗೆ ಮಾರಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣವಾಗದಿದ್ದರೆ ಗಾರ್ಮೆಂಟ್ಸ್ ಹಾಗೂ ಇತರೆ ಕೈಗಾರಿಕೆಗಳನ್ನ ತೆರೆದು ಯಾವುದೇ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.

ಕಳೆದ 2 ತಿಂಗಳಿಂದ ಎಲ್ಲಾ ಅಂಗಡಿಗಳು ಮುಚ್ಚಿರುವ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸರ್ಕಾರ ಇದನ್ನು ಪರಿಗಣಿಸಿ ಜವಳಿ ಅಂಗಡಿಗಳನ್ನ ತೆರೆಯಲು ಅವಕಾಶ ನೀಡಬೇಕು. ಇದರಿಂದ ಉದ್ಯಮ ಚೇತರಿಕೆ ಆಗುವುದು ಎಂದು ಮನವಿ ಮಾಡಿದ್ದಾರೆ.

ಓದಿ:ಮುಂದಿನ ಎರಡು ವರ್ಷ ನಾನೇ ಸಿಎಂ: ಹಾಸನದಲ್ಲಿ ಬಿಎಸ್‌ವೈ ಹೇಳಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.