ETV Bharat / state

ಆರೋಗ್ಯ ಇಲಾಖೆಯಲ್ಲಿನ ಅಕ್ರಮಗಳ ಮೇಲಿನ ಪಿಎಸಿ ವರದಿ ಮಂಡನೆ: ರಿಪೋರ್ಟ್​​ನಲ್ಲಿರುವ ಆಕ್ಷೇಪಗಳೇನು?

ವರದಿ ಶಿಫಾರಸಿನಲ್ಲಿ ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಲಾಗಿದೆ. 2014-15ರಿಂದ 2016-17ರ ಅವಧಿಯಲ್ಲಿ ಇಲಾಖೆಯ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯ ಗುಣವಿಶೇಷಣಾ ಶಾಖೆಯಲ್ಲಿ ನುರಿತ ಫಾರ್ಮಾಸಿಸ್ಟ್ ಸಿಬ್ಬಂದಿಗಳ ಕೊರತೆ ಇತ್ತೆಂದು ಉತ್ತರದಲ್ಲಿ ತಿಳಿಸಲಾಗಿದೆ.

ವಿಧಾನಸಭೆ
ವಿಧಾನಸಭೆ
author img

By

Published : Dec 14, 2021, 8:59 PM IST

ಬೆಳಗಾವಿ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ 2014-15, 2016-17, 2017-18 ಮತ್ತು 2018-19ನೇ ಸಾಲಿನ ವರದಿಗಳ ಮೇಲಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಶಿಫಾರಸುಗಳನ್ನೊಳಗೊಂಡ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ವರದಿ ಶಿಫಾರಸಿನಲ್ಲಿ ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಲಾಗಿದೆ. 2014-15ರಿಂದ 2016-17ರ ಅವಧಿಯಲ್ಲಿ ಇಲಾಖೆಯ ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯ ಗುಣವಿಶೇಷಣಾ ಶಾಖೆಯಲ್ಲಿ ನುರಿತ ಫಾರ್ಮಾಸಿಸ್ಟ್ ಸಿಬ್ಬಂದಿಗಳ ಕೊರತೆಯಿತ್ತೆಂದು ಉತ್ತರದಲ್ಲಿ ತಿಳಿಸಲಾಗಿದೆ.

ಕಳಪೆ ಗುಣಮಟ್ಟದ ಔಷಧ ವಿತರಣೆ ಆರೋಪ

ಆದರೆ, ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಔಷಧಗಳನ್ನು ನೀಡಿ, ಉಪಚರಿಸುವುದು ಇಲಾಖೆಯ ಪ್ರಮುಖ ದ್ಯೇಯೋದ್ದೇಶವಾಗಿದ್ದರೂ, ಕಳಪೆ ಗುಣಮಟ್ಟದ ಔಷಧಗಳನ್ನು ಖರೀದಿ ಮಾಡಿರುವುದಲ್ಲದೇ, ಅಂತಹ ಕಳಪೆ ಗುಣಮಟ್ಟದ ಔಷಧಗಳನ್ನು ಸಾರ್ವಜನಿಕ ಬಳಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮುಖಾಂತರ ವಿತರಿಸಿರುವುದು ಇಲಾಖಾಧಿಕಾರಿಗಳ ಅಕ್ಷಮ್ಯ ಅಪರಾಧವಾಗಿದೆ ಎಂದು ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

ಶಿಸ್ತು ಕ್ರಮಕ್ಕೆ ಶಿಫಾರಸು

ಇಂತಹ ಗಂಭೀರ ಲೋಪ ದೋಷಗಳಿಗೆ ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತಿನ ಕ್ರಮಕೈಗೊಳ್ಳಲು ಸಮಿತಿ ಶಿಫಾರಸು ಮಾಡಿದೆ. 2014-15ರಿಂದ 2016-17ರ ಅವಧಿಯಲ್ಲಿ ಸೊಸೈಟಿಯು 6,776 ಔಷಧಗಳ ಬ್ಯಾಚ್‌ಗಳಲ್ಲಿ 1.23 ಕೋಟಿ ರೂ. ಮೌಲ್ಯದ 27 ಬ್ಯಾಚ್‌ಗಳ ಔಷಧಗಳ ಬ್ಯಾಚ್‌ಗಳನ್ನು ಉತ್ತಮ ಗುಣಮಟ್ಟದ್ದಾಗಿರಲಿಲ್ಲ ಎಂದು ಘೋಷಿಸಿತ್ತು. ಅದೇ ಅವಧಿಯಲ್ಲಿ ರಾಜ್ಯ ಔಷಧ ನಿಯಂತ್ರಕರು ರೂ. 4.08 ಕೋಟಿ ಮೊತ್ತದ 77 ಬ್ಯಾಚ್‌ಗಳ ಔಷಧಗಳನ್ನು ಉತ್ತಮ ಗುಣಮಟ್ಟದ್ದಾಗಿರಲಿಲ್ಲವೆಂದು ಘೋಷಿಸಿದ್ದರು.

ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸೊಸೈಟಿ ಮತ್ತು ಔಷಧ ನಿಯಂತ್ರಕರ ನಡುವೆ ಸಮನ್ವಯ ಕೊರತೆ ಇರುವುದರ ಬಗ್ಗೆ ಸಮಿತಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಸಾರ್ವಜನಿಕರ ಆರೋಗ್ಯ ಬದುಕು ಮತ್ತು ಜೀವಗಳ ಮೇಲೆ ಅಧಿಕಾರಿಗಳಿಗೆ ಇರುವಂತಹ ದುರಂಹಕಾರಪೂರಿತ ಅಲಕ್ಷ್ಯ ಮನೋಭಾವ ಸಾಬೀತಾಗಿರುವುದರಿಂದ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾದ 20 ಸಂಸ್ಥೆಗಳಿಂದ ರೂ. 2.11 ಕೋಟಿ ಮೊತ್ತವನ್ನು ಇಲ್ಲಿಯವರೆಗೂ ವಸೂಲಾತಿ ಮಾಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ. 2016-17ರ ಅವಧಿಯಲ್ಲಿಯೇ ಪ್ರಧಾನ ಮಹಾಲೇಖಪಾಲರು ಆಕ್ಷೇಪಣೆಗಳನ್ನು ಇಲಾಖೆಯ ಗಮನಕ್ಕೆ ತಂದರೂ, ಇಲ್ಲಿಯವರೆಗೂ, ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಸಮಿತಿ ಗಂಭೀರವಾಗಿ ಪರಿಗಣಿಸುತ್ತದೆ. ಸಮಿತಿಯ ವರದಿಯು ಸ್ವೀಕೃತವಾದ ಒಂದು ತಿಂಗಳ ಒಳಗಾಗಿ ಅಗತ್ಯ ಕ್ರಮಕೈಗೊಂಡು ವರದಿಯನ್ನು ಸಲ್ಲಿಸುವಂತೆ ಸಮಿತಿ ಶಿಫಾರಸು ಮಾಡಿದೆ.

ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಸಮಿತಿ

ಪ್ರಸುತಿ ಆರೋಗ್ಯ ಕಾರ್ಯಕ್ರಮಕ್ಕೆ ಮೀಸಲಿಟ್ಟಿದ್ದ ರೂ. 2.18 ಲಕ್ಷ ಮೊತ್ತ ದುರುಪಯೋಗವಾಗಿದ್ದನ್ನು ಮತ್ತು ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ನೀಡದಿರುವ ಪ್ರಕರಣವನ್ನು ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಮೈಸೂರು ವೈದ್ಯಕೀಯ ಸಂಸ್ಥೆ ಮತ್ತು ಬೆಳಗಾವಿ ವಿಜ್ಞಾನ ಸಂಸ್ಥೆಯಲ್ಲಿ ಯೋಜನೆ ಅನುಷ್ಠಾನ ಏಪ್ರಿಲ್, 2010ರಲ್ಲಿ ಪ್ರಾರಂಭವಾಗಿದ್ದರೂ, ಮೇ, 2010ರಲ್ಲಿ ನೀಡಲಾಗಿದ್ದ ತಾಂತ್ರಿಕ ಮೌಲ್ಯಮಾಪನ ವರದಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದೆಯೆಂದು ತಪ್ಪಾಗಿ ನಮೂದಿಸಿದ್ದನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ತಪ್ಪಾದ ಮಾಹಿತಿ ಒದಗಿಸಿದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಶಿಪಾರಸು ಮಾಡಲಾಗಿದೆ.

29.06.2021ರಂದು ನಡೆದ ಸಮಿತಿ ಸಭೆಯಲ್ಲಿ ಕಂಡಿಕೆಯ ಕುರಿತಂತೆ ಇಲಾಖೆಯಿಂದ ಆಗಿರುವ ಲೋಪದೋಷಗಳ ಕುರಿತಂತೆ ಸಮಗ್ರ ವರದಿಯನ್ನು ಹದಿನೈದು - ದಿನಗಳೊಳಗಾಗಿ ಸಮಿತಿಗೆ ಸಲ್ಲಿಸಬೇಕೆಂದು ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದ್ದರೂ, ಇಲ್ಲಿಯವರೆಗೂ ಸಮಿತಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ, ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಾಗಿರುವ ಅನುತ್ಪಾದಕ - ಹೂಡಿಕೆ ಮೊತ್ತವನ್ನು ಸಂಬಂಧಪಟ್ಟವರಿಂದ ವಸೂಲಾತಿ ಮಾಡಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಸಮಿತಿ ಶಿಫಾರಸುಗಳನ್ನು ಆರು ತಿಂಗಳುಗಳ ಕಾಲಮಿತಿಯೊಳಗೆ ಇಲಾಖೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.