ETV Bharat / state

Praveen Nettaru murder: ಸಿಎಂ ಬೊಮ್ಮಾಯಿ‌ಗೆ ತನಿಖೆ ಮಾಹಿತಿ ನೀಡಿದ ಡಿಜಿಪಿ ಸೂದ್ - Praveen Nettaru Murder case investigation

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಸಿಎಂ ನಿವಾಸಕ್ಕೆ ದೌಡಾಯಿಸಿದ ಡಿಜಿಪಿ- ತನಿಖೆ ಕುರಿತು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರವೀಣ್​ ಸೂದ್​ ಮಾಹಿತಿ

Praveen Nettaru murder: DG Praveen Sood gave detaile to CM Bommai about investigation
ಪ್ರವೀಣ್ ನೆಟ್ಟಾರು ಹತ್ಯೆ: ಸಿಎಂ ಬೊಮ್ಮಾಯಿ‌ಗೆ ತನಿಖಾ ಮಾಹಿತಿ ನೀಡಿದ ಡಿಜಿ ಪ್ರವೀಣ್ ಸೂದ್
author img

By

Published : Jul 27, 2022, 2:12 PM IST

ಬೆಂಗಳೂರು: ಕಳೆದ ರಾತ್ರಿ ನಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕಾಗಿ ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸಮಗ್ರ ಮಾಹಿತಿ ನೀಡಿದರು.

ಸಿಎಂ ಗೃಹ ಕಚೇರಿ ಕೃಷ್ಣಾಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಭೇಟಿ ನೀಡಿ 20 ನಿಮಿಷಕ್ಕೂ ಹೆಚ್ಚು ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಪ್ರವೀಣ್ ಹತ್ಯೆ ಸಂಬಂಧ ಆಗುತ್ತಿರುವ ಬೆಳವಣಿಗೆ ಹಾಗೂ ಕಾನೂನು ಸುವ್ಯವಸ್ಥೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿದರು. ಮಂಗಳೂರು ಎಸ್ಪಿ ನೀಡಿರುವ ಮಾಹಿತಿ, ಕಾಸರಗೋಡು ಪೊಲೀಸರ ಸಹಕಾರ ಪಡೆದುಕೊಂಡಿರುವುದು ಸೇರಿದಂತೆ ಕರ್ನಾಟಕ, ಕೇರಳ ಎರಡು ರಾಜ್ಯದ ಗಡಿ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಕಾರ್ಯಾಚರಣೆ ಕುರಿತು ಎಲ್ಲ ವಿವರವನ್ನು ಸಿಎಂಗೆ ವಿವರಿಸಿದರು.

ಪ್ರಕರಣ ಗಂಭೀರವಾಗಿದ್ದು, ಹಿಂದೂಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಬಹುದು. ಕಾನೂನು ಸುವ್ಯವಸ್ಥೆ ಹದಗೆಡಬಹುದು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲು ಎಲ್ಲ ಕ್ರಮ ಕೈಗೊಳ್ಳುವಂತೆ ಡಿಜಿಪಿ ಪ್ರವೀಣ್ ಸೂದ್​ಗೆ ಸಿಎಂ ಸೂಚನೆ ನೀಡಿದರು.

ಇದನ್ನೂ ಓದಿ: Praveen murder case.. ತನಿಖೆಗೆ 5 ತಂಡ ರಚನೆ, ಪೊಲೀಸರಿಂದ ಹಲವರ ವಿಚಾರಣೆ

ಸಿಎಂ ಭೇಟಿ ಮಾಡಿದ ಸಿ ಟಿ ರವಿ: ಹಿಂದು ಕಾರ್ಯಕರ್ತನ ಹತ್ಯೆ ವಿಚಾರ ‌ಸಂಬಂಧ ಸಿಎಂ ಜೊತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತುಕತೆ ನಡೆಸಿದರು. ಡಿಜಿ ಪ್ರವೀಣ್ ಸೂದ್ ಆಗಮನಕ್ಕೂ ಮುನ್ನವೇ ಆಗಮಿಸಿದ್ದ ಸಿ ಟಿ ರವಿ, ಬಿಜೆಪಿ ಸರ್ಕಾರವಿದ್ದಾಗಲೇ ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿದೆ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.