ETV Bharat / state

ಪ್ರಣಬ್ ಅವರೊಂದಿಗಿನ ಒಡನಾಟ ನೆನೆದ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಇಂದು ನಿಧನರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕುರಿತಾದ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

Bangalore
ಮಂಜುನಾಥ್ ಪ್ರಸಾದ್
author img

By

Published : Aug 31, 2020, 8:58 PM IST

ಬೆಂಗಳೂರು: ಪ್ರಸ್ತುತ ಬಿಬಿಎಂಪಿಯ ಆಯುಕ್ತರಾಗಿರುವ ಮಂಜುನಾಥ್ ಪ್ರಸಾದ್, ತಮ್ಮ ಐಎಎಸ್ ವೃತ್ತಿಯ ಆರಂಭದ ವರ್ಷಗಳಲ್ಲಿ ಎರಡು ವರ್ಷ ಪ್ರಣಬ್ ಮುಖರ್ಜಿಯವರ ಜೊತೆ ಕೆಲಸ ಮಾಡಿದ್ದರು. ಇಂದು ನಿಧನರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಕುರಿತಾದ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಬಿಬಿಎಂಪಿಯ ಆಯುಕ್ತ ಮಂಜುನಾಥ್ ಪ್ರಸಾದ್

ಈ ಬಗ್ಗೆ ಮಾತನಾಡಿರುವ ಆಯುಕ್ತರು, 1994 ರಲ್ಲಿ ಐಎಎಸ್ ಅಧಿಕಾರಿಯಾಗಿ ಪಶ್ಚಿಮ ಬಂಗಾಳಕ್ಕೆ ನೇಮಕವಾಗಿದ್ದೆ. ಹತ್ತು ವರ್ಷಗಳ ನಂತರ ಕೋಲ್ಕತ್ತಾದಿಂದ 200 ಕಿ.ಮೀ ದೂರದಲ್ಲಿರುವ ಮುರ್ಷಿದಾಬಾದ್​ಗೆ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದೆ. ಅದು 70 ಲಕ್ಷ ಜನಸಂಖ್ಯೆಯ, ಅತಿ ಕಡುಬಡವರು ಇರುವ ಜಿಲ್ಲೆಯಾಗಿತ್ತು. ಅದೇ ಸಮಯದಲ್ಲಿ 2004 ರಲ್ಲಿ ಅಲ್ಲಿಂದ ಸಂಸದರಾಗಿ ಪ್ರಣಬ್ ಮುಖರ್ಜಿಯವರು ಪ್ರಥಮ ಬಾರಿಗೆ ಚುನಾಯಿತರಾದರು. 2004 ರವರೆಗೂ ರಾಜ್ಯಸಭಾ ಸದಸ್ಯರಾಗಿಯೇ ಇದ್ದರು.

ಇದಾದ ನಂತರ 2004 ರಲ್ಲಿ ಲೋಕಸಭಾ ಸದಸ್ಯರಾದ ಮೇಲೆ ದೇಶದ ರಕ್ಷಣಾ ಸಚಿವರಾದರು. ಆಗ ಪ್ರತೀ ತಿಂಗಳು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ರೈಲು, ಕಾರಿನ ಮೂಲಕ ಜಿಲ್ಲೆಗೆ ಬರುತ್ತಿದ್ದರು. ಈ ವೇಳೆ ಹಲವಾರು ಬಾರಿ ಮುಂಜಾನೆ ಮೂರು, ನಾಲ್ಕು ಗಂಟೆಗೆ ರೈಲ್ವೆ ನಿಲ್ದಾಣಕ್ಕೆ ಹೋಗಿ ಸ್ವಾಗತಿಸುತ್ತಿದ್ದೆ. ಅವರೊಂದಿಗೆ ನನಗೆ ಆತ್ಮೀಯತೆ ಇತ್ತು. ಆ ಜಿಲ್ಲೆಯಲ್ಲಿ ಮೂವರು ಸಂಸದರು ಇದ್ದರೂ ಕೂಡಾ, ಅವರು ಮಾಡುತ್ತಿದ್ದ ಮೊದಲ ಕೆಲಸವೆಂದರೆ ಜಿಲ್ಲಾಧಿಕಾರಿಯ ಜೊತೆ ಸಭೆ ನಡೆಸುವುದು. ಜಿಲ್ಲೆಯ ಸ್ಥಿತಿಗತಿ ಬಗ್ಗೆ ಸಭೆ ನಡೆಸಿದ ಬಳಿಕ ಬೇರೆ ಸಚಿವರು, ಸಂಸದರನ್ನು ಮಾತನಾಡಿಸುತ್ತಿದ್ದರು.

ಜಿಲ್ಲೆಯ ಕುರಿತು ಏನೇ ಸಲಹೆ ನೀಡಿದರೂ, ಸರಳ ವ್ಯಕ್ತಿತ್ವದವರಾದ ಮುಖರ್ಜಿಯವರು ಸಾವಧಾನದಿಂದಲೇ ಕೇಳುತ್ತಿದ್ದರು. ನಮ್ಮ ಮನೆಯ ತಿಂಡಿಯನ್ನೂ ತಿನ್ನುತ್ತಿದ್ದರು. ಗಂಗಾನದಿ ಹತ್ತಿರವಿದ್ದಿದ್ದರಿಂದ ಜಿಲ್ಲೆಯಲ್ಲಿ ಪ್ರತೀ ವರ್ಷ ಪ್ರವಾಹ ಆಗುತ್ತಿತ್ತು. ಆ ವೇಳೆಯೂ ಸ್ಥಳ ಪರಿಶೀಲನೆಗೆ ಜೊತೆಗೆ ಹೋಗುತ್ತಿದ್ದೆವು. ಆಗ ನಾವು ಬಹು ಉಪಯೋಗಿ ನ್ಯಾಷನಲ್ ಐಡೆಂಟಿಟಿ ಕಾರ್ಡ್ ಪರಿಚಯಿಸಿದೆವು. ಆಗ ಅವರು ರಕ್ಷಣಾ ಸಚಿವರಾಗಿದ್ದಾಗಲೇ ಪ್ರಾಯೋಗಿಕವಾಗಿ ಜಾರಿ ಮಾಡಿದ್ದೆವು.

ಪ್ರಣಬ್ ಮುಖರ್ಜಿಯವರು ತುಂಬಾ ಬುದ್ಧಿವಂತರು. ಅಗಾದವಾದ ಜ್ಞಾಪಕ ಶಕ್ತಿ, ಸರಳ ವ್ಯಕ್ತಿ ಹೊಂದಿದ್ದರು. ಕರ್ನಾಟಕದ ಪ್ರತೀ ಜಿಲ್ಲೆಯ ನಾಯಕರ ಬಗ್ಗೆಯೂ ನನ್ನ ಬಳಿ ಹೇಳುತ್ತಿದ್ದರು. ಎರಡು ವರ್ಷ ಅವರ ಜೊತೆ ಕೆಲಸ ಮಾಡಿದ ನಂತರ, ಅವರು ಕೇಂದ್ರ ಹಣಕಾಸು ಸಚಿವರಾದ ಬಳಿಕ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಲು ಕರೆದಿದ್ದರು. ಆದರೆ ನಾನು ಕರ್ನಾಟಕಕ್ಕೆ ವರ್ಗಾವಣೆ ಆದಮೇಲೆ ಹೋಗಲು ಸಾಧ್ಯ ಆಗಲಿಲ್ಲ. ಅವರಲ್ಲಿದ್ದ ಗುಣ, ಅವರ ಪರಿಶ್ರಮ ಹಾಗೂ ಇಡೀ ದಿನ ಜಿಲ್ಲೆಗೆ ಕೆಲಸ ಮಾಡುತ್ತಿದ್ದರು. ಬಡವರು ಯಾರೇ ಬಂದರೂ ಅವರನ್ನು ಭೇಟಿಯಾಗಬಹುದಿತ್ತು. ಅವರನ್ನು ನೋಡಿ ಕಲಿಯುವುದು ಬಹಳಷ್ಟಿತ್ತು ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಸ್ಮರಿಸಿದರು. ಅವರ ನಿಧನ ನನಗೆ ತುಂಬಲಾರದ ನಷ್ಟ ಎಂದು ಮಂಜುನಾಥ್ ಪ್ರಸಾದ್ ಕಂಬನಿ ಮಿಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.