ಧಾರವಾಡ: ನಾಡೋಜ ಚೆನ್ನವೀರ ಕಣವಿ ಆರೋಗ್ಯ ಸ್ಥಿತಿ ಗಂಭೀರ ಹಿನ್ನೆಲೆ ಎಸ್‌ಡಿಎಂ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಧಾರವಾಡ ಹೊರವಲಯದಲ್ಲಿರುವ ಎಸ್‌ಡಿಎಂ ಆಸ್ಪತ್ರೆಗೆ ತೆರಳಿ ಚೆಂಬೆಳಕಿನ ಕವಿ ಕಣವಿ ಅವರ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಕಳೆದೊಂದು ತಿಂಗಳಿನಿಂದ ಕಣವಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂಬೆಳಕಿನ ಕವಿ ನಮಗೆಲ್ಲ ಆತ್ಮಿಯರು ನಾನು ದೆಹಲಿಯಿಂದ ಬಂದವನೇ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆನೆ. ಅನಾರೋಗ್ಯದ ಹಿನ್ನೆಲೆ ಕಣವಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣವಿ ಅವರಿಗೆ ವಯಸ್ಸಾದ ಕಾರಣ ಚೇತರಿಕೆ ತಡವಾಗುತ್ತಿದೆ ಎಂದರು.
ಡಾಕ್ಟರ್ ಅವರು ಕಳವಳ ವ್ಯಕ್ತ ಪಡಿಸಿದ್ದಾರೆ. ಆದರೂ ಡಾ.ನಿರಂಜನ ಕುಮಾರ ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ನಡೆದಿದೆ. ಅವರ ಆರೋಗ್ಯ ಕ್ರಿಟಿಕಲ್ ಇದೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಕಣವಿ ಅವರ ಗುಣಮುಖರಾಗಿ ಮನೆಗೆ ಬರುವಂತೆ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದ್ದೆನೆ ಎಂದು ತಿಳಿಸಿದರು.
ರಾಷ್ಟ್ರಕವಿ ಪ್ರಶಸ್ತಿ ಕೊಡಮಾಡುವ ವಿಚಾರಕ್ಕೆ ಮಾತನಾಡಿದ ಅವರು, ಅವರು ಪ್ರಶಸ್ತಿಗೆ ಕಳುಹಿಸಿದ ಬಗ್ಗೆ ನನಗೆ ಮಾಹಿತಿ ಇಲ್ಲ ಇದಕ್ಕೆ ನನಗೂ ಸಹಮತ ಇದೆ, ಪ್ರಶಸ್ತಿಗೆ ಯೋಗ್ಯವಾದ ವ್ಯಕ್ತಿಯಾಗಿದ್ದಾರೆ ಎಂದರು.
ಇದನ್ನೂ ಓದಿ: ಸಮವಸ್ತ್ರ ಇರೋ ಕಡೆ ಪಾಲಿಸಿ.. ಪದವಿ ಕಾಲೇಜಿಗೆ ಬೇಕಾದ್ರೆ ಹಾಕ್ಕೊಂಡ್ ಬನ್ನಿ.. ಸಚಿವ ಆಶ್ವತ್ಥ್ ನಾರಾಯಣ