ETV Bharat / state

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಶಾಸಕ ರೇಣುಕಾಚಾರ್ಯ ಕಿಡಿ

author img

By

Published : Feb 16, 2021, 7:20 PM IST

ಎಲ್ಲರಿಗೂ ಮೀಸಲಾತಿ ಕೊಡಿ ಎಂದು ನಾನೂ ಕೇಳುತ್ತೇನೆ. ಯಾವ ಮಠಾಧೀಶರ ವಿರುದ್ಧವೂ ಇಲ್ಲ, ಯಾವುದೇ ಉಪಪಂಗಡ ಎತ್ತಿ ಕಟ್ಟುತ್ತಿಲ್ಲ, ಯಾರಿಗೂ ನಮ್ಮ ವಿರೋಧ ಇಲ್ಲ. ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಸಿಎಂ ಅನುಮತಿ ಪಡೆದೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ..

ಮಾಜಿ ಶಾಸಕ ಕಾಶಪ್ಪನವರ್ ವಿರುದ್ಧ ಕಿಡಿಕಾರಿದ  ರೇಣುಕಾಚಾರ್ಯ

ಬೆಂಗಳೂರು : ರಾಜಕೀಯವಾಗಿ ಸೋತು ಮನೆಯಲ್ಲಿರೋರು ಸ್ವಾಮೀಜಿಗಳ ಜೊತೆ ಸೇರಿ ಹೋರಾಟ ಮಾಡುತ್ತಿದ್ದಾರೆ. ವಿನಾಕಾರಣ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು, ಮಾಜಿ ಶಾಸಕ ಕಾಶಪ್ಪನವರ್ ವಿರುದ್ಧ ಕಿಡಿಕಾರಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ‌. ರೇಣುಕಾಚಾರ್ಯ

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಧರ್ಮ ಒಡೆಯುವಾಗ ಎಲ್ಲಿದ್ದೀರಿ ಕಾಂಗ್ರೆಸ್ ತ್ಯಜಿಸಿ ಸಾಮಾನ್ಯ ಕಾರ್ಯಕರ್ತನಾಗಿ ಹೋರಾಟ ಮಾಡಿ. ನಾನು ವಿಜಯೇಂದ್ರ ಸೇರಿದಂತೆ ಯಾರ ವಕ್ತಾರನೂ ಅಲ್ಲ.

ಯಡಿಯೂರಪ್ಪ, ವಿಜಯೇಂದ್ರ ಅವರ ಬಗ್ಗೆ ಟೀಕೆ ಮಾಡಿದರೆ ಪಕ್ಷದ ಬಗ್ಗೆ ಟೀಕೆ ಮಾಡಿದಂತೆ ಅಲ್ಲವೇ? ಅದಕ್ಕೆ ನಾನು ಮಾತಾಡಿದ್ದೇನೆ. ಪಾದಯಾತ್ರೆಯಲ್ಲಿ ನಾನೂ ಪಾಲ್ಗೊಂಡಿದ್ದೆ ಎಂದು ರೇಣುಕಾಚಾರ್ಯ ಹೇಳಿದರು.

ಕುರುಬ, ವಾಲ್ಮೀಕಿ, ಎಲ್ಲಾ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡಿಸೋ ಶಕ್ತಿ ಬಿಜೆಪಿ ಸರ್ಕಾರಕ್ಕೆ ಇದೆ. ಎಲ್ಲಾ ಸಮಸ್ಯೆ ಬಗೆಹರಿಸುತ್ತಾರೆ. ಪಂಚಮಸಾಲಿ, ಪಾದಯಾತ್ರೆಗೆ ಬೆಂಬಲ ಕೊಟ್ಟಿದ್ದೀನಿ. ಎಲ್ಲರಿಗೂ ಮೀಸಲಾತಿ ಕೊಡಿ ಎಂದು ನಾನೂ ಕೇಳುತ್ತೇನೆ.

ಯಾವ ಮಠಾಧೀಶರ ವಿರುದ್ಧವೂ ಇಲ್ಲ, ಯಾವುದೇ ಉಪಪಂಗಡ ಎತ್ತಿ ಕಟ್ಟುತ್ತಿಲ್ಲ, ಯಾರಿಗೂ ನಮ್ಮ ವಿರೋಧ ಇಲ್ಲ. ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್, ಸಿಎಂ ಅನುಮತಿ ಪಡೆದೇ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದರು.

ಓದಿ: ಟೂಲ್ ಕಿಟ್ ಒಂದು ಒಪನ್ ಡಾಕ್ಯುಮೆಂಟ್, ಅಟಂಬಾಂಬ್ ಅಲ್ಲ: ಮಾಜಿ ಸಚಿವ ಖಾದರ್

ಹಿಂದುತ್ವ, ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಹೆಚ್.ಡಿ. ಕುಮಾರಸ್ವಾಮಿ ಅವರು ದೇಣಿಗೆ ನೀಡಲಿ. ಕುಮಾರಸ್ವಾಮಿ ಅವರಿಗೆ ತಪ್ಪು ಕಲ್ಪನೆ ಬೇಡ ಎಂದು ತಿರುಗೇಟು ನೀಡಿದರು. ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ಕಿಡಿಕಾರಿರುವ ರೇಣುಕಾಚಾರ್ಯ, ಈ ಹೇಳಿಕೆ ಅವರದೋ? ಅಥವಾ ಯಾವ ಐಎಎಸ್ ಅಧಿಕಾರಿ ಲಾಭಿಯೋ ಗೊತ್ತಿಲ್ಲ. ನಮ್ಮದು ಎಲ್ಲ ವರ್ಗದ ಸರ್ಕಾರ, ಈ ಬಗ್ಗೆ ಜಾರಿ ಆದೇಶವೇ ಆಗಿಲ್ಲ. ಪಕ್ಷದ ವರ್ಚಸ್ಸಿಗೆ ದಕ್ಕೆ ಆಗುತ್ತದೆ. ದ್ವಂದ್ವ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.

ನಕಲಿ ಕಾರ್ಡ್​ಗಳ ಬಗ್ಗೆ ತನಿಖೆ ಮಾಡಿ ರದ್ದು ಮಾಡಲಿ, ಬಡವರು ಮನರಂಜನೆಗೋಸ್ಕರ ಟಿವಿ ಇಡುತ್ತಾರೆ. ಮಹಿಳೆಯರಿಗೆ ಒತ್ತಡ ಇರುತ್ತದೆ. ಟಿವಿ ನೋಡ್ತಾರೆ. ಕೆಲವರು ಖಾಸಗಿ ಬ್ಯಾಂಕ್​ಗಳು ಡಿಪಾಸಿಟ್ ಇಲ್ಲದೆ ಬೈಕ್ ಕೊಡುತ್ತಾರೆ‌.

ನಾವು ಫ್ರಿಡ್ಜ್​​, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಜ್ ಇಡಬಾರದಾ ಎಂದು ಪ್ರಶ್ನಿಸಿದರು. 2003ರಲ್ಲಿ ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಜೈಲಿಗೆ ಹೋಗಿ ಬಂದಿದ್ದೀನಿ, ಹೋರಾಟ ಮಾಡಿದ್ದೀನಿ ಎಂದ ಅವರು, ಇದು ಸರ್ಕಾರದ ಹೇಳಿಕೆ ಅಲ್ಲ ಮಂತ್ರಿಗೆ ಯಾರೋ ಅಧಿಕಾರಿ ಹೇಳಿರಬಹುದು. ಇದಕ್ಕೆ ನಮ್ಮ ವಿರೋಧವಿದೆ ಎಂದು ಈಗಾಗಲೇ ಹೇಳಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.